Home Cinema ಮಂಡ್ಯದಲ್ಲಿ‌ ಸ್ಟಾರ್‌ಕ್ಯಾಂಪೇನ್ ಶುರು…’ಕೈ’ ಅಭ್ಯರ್ಥಿ ರವಿಕುಮಾರ್ ಗೌಡ ಪರ ಗಿರಿಕನ್ಯೆ ಜಯಮಾಲ ಪ್ರಚಾರ…

ಮಂಡ್ಯದಲ್ಲಿ‌ ಸ್ಟಾರ್‌ಕ್ಯಾಂಪೇನ್ ಶುರು…’ಕೈ’ ಅಭ್ಯರ್ಥಿ ರವಿಕುಮಾರ್ ಗೌಡ ಪರ ಗಿರಿಕನ್ಯೆ ಜಯಮಾಲ ಪ್ರಚಾರ…

628
0
SHARE

ಸಕ್ಕರೆನಾಡು ಮಂಡ್ಯದಲ್ಲಿ ಕೈ ಅಭ್ಯರ್ಥಿ ರವಿಕುಮಾರ್ ಗೌಡ ಅವರ ಪ್ರಚಾರ ಜೋರಾಗಿದೆ. ಯುವನಾಯಕನಿಗೆ ಚಿತ್ರರಂಗದ ಬೆಂಬಲವೂ ದೊರೆತಿದ್ದು, ಗಿರಿಕನ್ಯೆ ಜಯಮಾಲ ಅವರು ರವಿಕುಮಾರ್ ಗೌಡ ಪರ ಪ್ರಚಾರ ನಡೆಸಿ, ಮತಯಾಚಿಸಿದ್ರು. ಈ ವೇಳೆ ರವಿಕುಮಾರ್ ಗೌಡರ ಬಗ್ಗೆ ಜಯಮಾಲ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ರು…

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಚಿತ್ರ ನಟ-ನಟಿಯರು ಸಹ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದಾರೆ,. ಅದೇ ರೀತಿ ಸಕ್ಕರೆ ನಾಡು ಮಂಡ್ಯದಲ್ಲಿ ಸ್ಚಾರ್ ಕ್ಯಾಂಪೇನ್ ಶುರುವಾಗಿದೆ.ಮಂಡ್ಯ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ರವಿಕುಮಾರ್ ಗೌಡ ಪರ ನಟಿ ಜಯಮಾಲ ಪ್ರಚಾರಕ್ಕಿಳಿದಿದ್ದಾರೆ…

ಮಂಡ್ಯ ತಾಲೂಕು ಬಸರಾಳು ಹೋಬಳಿಯ ಹಲ್ಲೇಗೇರೆ ಗ್ರಾಮದಲ್ಲಿ ಕಾಂಗ್ರೆಸ್ ಪರವಾಗಿ ಕರ್ನಾಟಕ ಚಲನಚಿತ್ರ ಮಂಡಳಿ ನಿರ್ದೇಶಕಿ ಜಯಮಾಲ ಮತಯಾಚಿಸಿದ್ರು. ಈ ವೇಳೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನದಿಂದ ಜಯಮಾಲರನ್ನು ಸ್ವಾಗತಿಸಿದ್ರು. ಈ ವೇಳೆ ರವಿಕುಮಾರ್ ಗೌಡರ ಬಗ್ಗೆ ಜಯಮಾಲ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ರು…

ಇದೇ ಸಂದರ್ಭದಲ್ಲಿ ಬಸರಾಳು ಗ್ರಾಮದಲ್ಲಿ ರೋಡ್ ಶೋ ಮೂಲಕ ವೇದಿಕೆಗೆ ಆಗಮಿಸಿದ ಅಭ್ಯರ್ಥಿ ರವಿಕುಮಾರ್ ಗೌಡರನ್ನು ಅಭಿಮಾನಿಗಳು ವೇದಿಕೆ ಹೆಗಲ ಮೇಲೆ ಹೊತ್ತು ತಂದ್ರು,. ಈ ವೇಳೆ ಮಾತನಾಡಿದ ಅವರು ನಾನು ಎಂ.ಎಲ್.ಎ ಆದ್ರೆ ನೀವೆಲ್ಲಾ ಎಂ.ಎಲ್.ಎ ಆದಂತೆ. ಇನ್ನೂ ನಾನು ಬದುಕಿದ್ದಾಗ ಹೊತ್ತು ಮೆರೆಸುವವರು ನೀವೆ, ಸತ್ತಾಗ ಹೆಗಲು ಕೊಡುವವರು ನೀವೆ ಎಂದು ಹೇಳಿದ್ರು…

ಇನ್ನೂ ಈ ವೇಳೆ ಮಾತನಾಡಿದ ನಟಿ ಜಯಮಾಲ ರವಿಕುಮಾರ್ ಗೌಡರಿಗೆ ಹಾಡಿ ಹೊಗಳಿದ್ರು, ಸಭೆಯಲ್ಲಿದ್ದ ಎಲ್ಲರಿಗೂ ಗೌರವ ಸಲ್ಲಿಸಿದ ಜಯಮಾಲ ರವಿಕುಮಾರ್‌ಗೆ ಚುನಾವಣೆಯಲ್ಲಿ ಗೆಲ್ಲಿಸುವಂತೆ ಕೋರಿದ್ರು. ಇನ್ನೂ ಈ ಮಣ್ಣಿನ ಮಗನಾಗಿರುವ ರವಿಕುಮಾರ್ ಗೌಡರ ಮಾತಿನ ವರ್ಚಸ್ಸು, ಪ್ರಾಮಾಣಿಕತೆ, ಸರಳತೆ, ಹಾಗೂ ನಾನು ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸ ಅವರಲ್ಲಿ ಕಾಣುತ್ತಿದೆ,…

ಚುನಾವಣೆಯಲ್ಲಿ ನೀವು ಹೆದರುವ ಸಂದರ್ಭವೇ ಬರುವುದಿಲ್ಲ ಗೆಲುವು ನಿಮ್ಮದೆ ಎಂದು ಹೇಳಿದ್ರು.ಒಟ್ಟಾರೆ ಮಂಡ್ಯ ವಿಧಾನಸಭೆ ಅಭ್ಯರ್ಥಿ ರವಿಕುಮಾರ್ ಗೌಡರಿಗೆ ಕಾರ್ಯಕರ್ತರು ಹಾಗೂ ಜನರ ಬೆಂಬಲದ ಜೊತೆ ಚಿತ್ರರಂಗದ ಬೆಂಬಲ ದೊರೆತಿರುವುದು ಅವರಿಗೆ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಾಗಿದೆ. ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಎಲ್ಲಾ ಅಭಿಮಾನಿಗಳು ಹಾರೈಸುತ್ತಿದ್ದಾರೆ…

LEAVE A REPLY

Please enter your comment!
Please enter your name here