Home Cinema ಮಂಡ್ಯದಲ್ಲಿ ಅಂಬರೀಷ್ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ಸ್ನೇಹಿತ ಸಂದೇಶ್ ನಾಗರಾಜ್..!...

ಮಂಡ್ಯದಲ್ಲಿ ಅಂಬರೀಷ್ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ಸ್ನೇಹಿತ ಸಂದೇಶ್ ನಾಗರಾಜ್..! ಯಾವ ಪಕ್ಷಕ್ಕೆ ಅಂಬಿ ಸಪೋರ್ಟ್..?

628
0
SHARE

ಈ ಬಾರಿ ವಿಧಾನಸಬೆ ಚುನಾವಣೆಗೆ ನಿಲ್ಲಲ್ಲ ಅಂತಾ ಅಂಬರೀಶ್ ತಮಗೆ ತಿಳಿಸಿದ್ದಾರೆಂದು ಆಪ್ತ ಸ್ನೇಹಿತ ಸಂದೇಶ್ ನಾಗರಾಜ್ ಬಹಿರಂಗಪಡಿಸಿದ್ದಾರೆ.

ಚುನಾವಣೆಗೆ ನಿಲ್ಲಲ್ಲ ಎನ್ನುವುದನ್ನು ತಮ್ಮ ಬಳಿ ಹೇಳಿಕೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.

ಬೇರೆ ಬೇರೆ ಕಾರಣಗಳಿಂದ ತಮಗೆ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ, ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೋ ಅವರೇ ಮಂಡ್ಯದಲ್ಲಿ ಸ್ಪರ್ಧಿಸಲಿ ಎಂದು ಅಂಬರೀಶ್ ತಮಗೆ ತಿಳಿಸಿದ್ದಾರೆಂದು ಸಂದೇಶ್ ನಾಗರಾಜ್ ವಿವರ ನೀಡಿದ್ದಾರೆ.

ಪಕ್ಷ ತೊರೆಯಲ್ಲ, ಆದ್ರೆ ಈ ಚುನಾವಣೆಯಲ್ಲಿ ಅಂಬರೀಶ್ ನ್ಯೂಟ್ರಲ್ ಆಗಿ ಇರುವುದಾಗಿ ಅಂಬರೀಶ್ ತಿಳಿಸಿದ್ದಾರಂತೆ . ಇನ್ನೂ ಮೈಸೂರಿನಲ್ಲಿ ಅಂಬರೀಶ್ ಭೇಟಿಗೆಂದು ಕಾದಿದ್ದ ಸಿದ್ದರಾಮಯ್ಯ ಅಂಬರೀಶ್ ಬರದಿದ್ದರಿಂದ ಮುಂದಿನ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

ಆದ್ರೆ ಕೊನೆ ಹಂತದಲ್ಲಿ ಅಂಬರೀಶ್ ಏಕೆ ಗೊಂದಲ ಸೃಷ್ಟಿಸುತ್ತಿದ್ದಾರೆ ಮತ್ತು ನೇರವಾಗಿ , ಸ್ಪಷ್ಟವಾಗಿ ಪಕ್ಷದ ನಾಯಕರಿಗೆ ತಮ್ಮ ನಿಲುವು ಏಕೆ ತಿಳಿಸುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here