Home District ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ HDK ಪುತ್ರ ನಿಖಿಲ್ ಕಣಕ್ಕೆ..! ನಿಖಿಲ್ ಸ್ಪರ್ಧೆ ಘೋಷಿಸಿದರು ಸಚಿವ ಸಾ.ರಾ.ಮಹೇಶ್..!...

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ HDK ಪುತ್ರ ನಿಖಿಲ್ ಕಣಕ್ಕೆ..! ನಿಖಿಲ್ ಸ್ಪರ್ಧೆ ಘೋಷಿಸಿದರು ಸಚಿವ ಸಾ.ರಾ.ಮಹೇಶ್..! ಕಣಕ್ಕಿಳಿಯುವುದಾದರೆ ಮಂಡ್ಯದಲ್ಲೇ ಅಂತ ಎಚ್ಡಿಕೆ ಹೇಳಿಕೆ..!

308
0
SHARE

ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟು ಹಂಚಿಕೆ ತೀರ್ಮಾನ ಪ್ರಕಟವಾಗುವ ಮುನ್ನವೇ ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿಯವರೇ ಅಭ್ಯರ್ಥಿ ಎಂದು ಜೆಡಿಎಸ್ ಘೋಷಿಸಿದೆ..

ಮಂಡ್ಯದಲ್ಲಿ ನಿಖಿಲ್ ಮೈತ್ರಿ ಅಭ್ಯರ್ಥಿ ಎಂದು ಸಚಿವ ಸಾ.ರಾ.ಮಹೇಶ್ ಪ್ರಕಟಿಸಿದ್ದಾರೆ..ನಿಖಿಲ್ ಸ್ಪರ್ಧಿಸುವುದಾದ್ರೆ ಮಂಡ್ಯದಲ್ಲೇ ಕಣಕ್ಕಿಳಿಯಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಕೂಡ ಸ್ಪಷ್ಟಪಡಿಸಿದ್ದಾರೆ..ನಿಖಿಲ್ ಸ್ಪರ್ಧಿಸಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿದೆ ಎಂದು ಪಕ್ಷದ ವರಿಷ್ಠ ದೇವೇಗೌಡರು ಬಲ ತುಂಬಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಿದೆ..

ಸೀಟು ಹಂಚಿಕೆ ಕುರಿತು ಕಾಂಗ್ರೆಸ್-ಜೆಡಿಎಸ್ ನಡುವಿನ ತೀರ್ಮಾನ ಪ್ರಕಟಿಸುವ ಮುನ್ನವೇ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ಮೊದಲೇ ಅಭ್ಯರ್ಥಿಯನ್ನು ಘೋಷಿಸಿದೆ..ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯವರೇ ಸ್ಪರ್ಧಿಸುತ್ತಾರೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ..ಮೈಸೂರಿನಲ್ಲೂ ನಿಲ್ಲಬೇಕೆಂದು ಒತ್ತಾಯವಿತ್ತು..ಆದ್ರೆ ಅಂತಿಮವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ನಿರ್ಧಾರವಾಗಿದೆ ಎಂದಿದ್ದಾರೆ..

ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ನಿಖಿಲ್ ಸ್ಪರ್ಧೆ ಮಾಡುವುದಾದರೆ ಮಂಡ್ಯದಲ್ಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ..ಮಂಡ್ಯದ ಋಣವನ್ನು ಯಾರ್ಯಾರು ತೀರಿಸಿದ್ದಾರೆ ಗೊತ್ತು ಎಂದೂ ಅವರು ಎದುರಾಳಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ..ಮಂಡ್ಯಕ್ಕೆ ನಿಖಿಲ್ ಕೂಡ ಒಬ್ಬ ಆಕಾಂಕ್ಷಿ ಎಂದು ದೇವೇಗೌಡರು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ..ನಿಖಿಲ್ ಸ್ಪರ್ಧೆ ಮಾಡಬೇಕೆಂಬುದು ಅವರ ಅಭಿಮಾನಿಗಳ ಒತ್ತಾಸೆಯಾಗಿದೆ ಎಂದು ತಿಳಿಸಿದ್ದಾರೆ..

ಜೆಡಿಎಸ್ ನಾಯಕರ ಹೇಳಿಕೆಗಳು ನಿಖಿಲ್ ಕುಮಾರಸ್ವಾಮಿಯವರ ಸ್ಪರ್ಧೆಯನ್ನು ಖಚಿತಪಡಿಸಿವೆ..ಬಹುತೇಕ ಕಾಂಗ್ರೆಸ್ ಕೂಡ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವುದು ನಿಶ್ಚಿತವಾಗುತ್ತಿದೆ..ಸೀಟು ಹಂಚಿಕೆ ಬಗ್ಗೆ ಶೀಘ್ರವೇ ಉಭಯ ಪಕ್ಷಗಳ ನಾಯಕರು ನಿರ್ಧಾರ ಪ್ರಕಟಿಸಲಿದ್ದಾರೆ..

LEAVE A REPLY

Please enter your comment!
Please enter your name here