ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಚಾಲೆಂಜಿಂಗ್ ಸ್ಟಾರ್ ಅಖಾಡಕ್ಕಿಳಿದಿ ದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ದರ್ಶನ್ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಕೆಆರ್ಎಸ್ಗೆ ಆಗಮಿಸಿದ ದರ್ಶನ್ ಮೊದಲಿಗೆ ಅಬಂರೀಷ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ರು. ಅಭಿಮಾನಿಗಳಿಂದ ನೆಚ್ಚಿನ ನಾಯಕನಿಗೆ ಅಭೂತಪೂರ್ವ ಸ್ವಾಗತ ಸಿಕ್ತು.ಕೆ.ಆರ್.ಎಸ್, ಪಾಲಹಳ್ಳಿ, ಬೆಳಗೋಳ, ಶ್ರೀರಂಗಪಟ್ಟಣ, ನಗುವನಹಳ್ಳಿ, ಮಹದೇವಪುರ, ಮಂಡ್ಯ ಕೊಪ್ಪಲು ಗ್ರಾಮಗಳಲ್ಲಿ ತೆರೆದ ವಾಹದಲ್ಲೇ ತೆರಳಿ ಮತಯಾಚನೆ ಮಾಡಿದ್ರು.
ಈ ವೇಳೆ ಮಾತನಾಡಿದ ದರ್ಶನ್ ಅಮ್ಮನಿಗೆ ಅಧಿಕಾರದ ಆಸೆ ಇಲ್ಲ. ಅಂಬರೀಷ್ ಅಪ್ಪಾಜಿ ಕಾವೇರಿ ವಿಚಾರಕ್ಕಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಮಂಡ್ಯ ಜನರಿಗಾಗಿ ಅವರು ಹಲವಾರು ಸೇವೆಗಳನ್ನು ಸಲ್ಲಿಸಿದ್ದಾರೆ. ಅಪ್ಪಾಜಿ ಉಳಿಸಿ ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸಲು ಅಮ್ಮನಿಗೆ ಮತ ನೀಡಿ ಎಂದ್ರು.
ಅಲ್ಲದೆ ಇಲ್ಲಿ ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಅವ್ರು ಮಾತನಾಡಲಿ, ಅವರ ಮಾತುಗಳಿಗೆ ನಿಮ್ಮ ಮತಗಳಿಂದ ಉತ್ತರ ನೀಡೋಣ. ಸುಮಲತಾ ಅವರ ಗುರುತು ಕಹಳೆ ಹಿಡಿದಿರುವ ರೈತ. ಏಪ್ರಿಲ್ 18 ರಂದು ಕ್ರಮ ಸಂಖ್ಯೆ 20, ಎ.ಸುಮಲತಾ, ಕಹಳೆ ಹಿಡಿದಿರುವ ರೈತನ ಗುರುತಿಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು.ಇನ್ನು ಸುಮಲತಾ ಅಂಬರೀಷ್ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು.
ಸುಮಲತಾಗೆ ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಸಾಥ್ ನೀಡಿದ್ರು. ಪೂಜೆ ಬಳಿಕ ಧರ್ಮಸ್ಥಳದಲ್ಲಿ ಮಾತನಾಡಿದ ಸುಮಲತಾ ಮಗನನ್ನು ಗೆಲ್ಲಿಸಿಕೊಳ್ಳಲು ಸಿಎಂ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿ ಬದಲಾವಣೆಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವಿ ಎಂದ್ರು.