Home District ಮಂಡ್ಯದಲ್ಲಿ ಸಿದ್ದು ಗುಡುಗು… “ನಮ್ಮದು ಅಪವಿತ್ರ ಮೈತ್ರಿ ಅನ್ನುವ BJPಯವರದು ಬಿಹಾರದಲ್ಲೇನು ಪವಿತ್ರ ಮೈತ್ರೀನಾ”.?

ಮಂಡ್ಯದಲ್ಲಿ ಸಿದ್ದು ಗುಡುಗು… “ನಮ್ಮದು ಅಪವಿತ್ರ ಮೈತ್ರಿ ಅನ್ನುವ BJPಯವರದು ಬಿಹಾರದಲ್ಲೇನು ಪವಿತ್ರ ಮೈತ್ರೀನಾ”.?

1509
0
SHARE

ಮಂಡ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಕೂಟದ ಅಭ್ಯರ್ಥಿ ಎಲ್ . ಶಿವರಾಮೇಗೌಡರ ಪರ ಪ್ರಚಾರ ಕೈಗೊಂಡ್ರು. ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿಯವರು ಸಮ್ಮಿಶ್ರ ಸರ್ಕಾರವನ್ನ ಅಪವಿತ್ರ ಮೈತ್ರಿ ಅಂತಾರೆ, ಆದ್ರೆ ಬಿಜೆಪಿಯವರ ಮೈತ್ರಿಗಳೆಲ್ಲ ಪವಿತ್ರ ಮೈತ್ರಿಗಳು ಎಂದು ಕುಟುಕಿದ್ರು.

ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಮೈತ್ರಿಯಾಗಿದ್ದು, ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿಲ್ವಾ ಎಂದು ಬಿಜೆಪಿ ನಡೆ ಬಗ್ಗೆ ಕಿಡಿಕಾರಿದ್ರು. ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ರೆ ಬೇರೆ ಯಾವುದೇ ಕೆಲಸ ಬರೋಲ್ಲ. ರಾಜ್ಯದಲ್ಲಿ ಕೋಮುವಾದಿಗಳನ್ನ ದೂರ ಇಡಬೇಕೆಂದು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಯ್ತು ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ರು.

ಉಪಚುನಾವಣೆ ಪ್ರಚಾರ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಭಿನ್ನಮತ ಇರೋದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,ಬಹಳ ವರ್ಷಗಳಿಂದ ಎದುರಾಳಿಯಾಗಿ ಹೋರಾಟ ಮಾಡಿಕೊಂಡು ಬಂದವ್ರು.ಏಕಾಏಕಿ ಜೊತೆಯಲ್ಲಿ ಕೆಲಸ ಮಾಡಲು ಇರಿಸು-ಮುರಿಸು ಉಂಟಾಗುತ್ತೆ ಎಂದರು.

ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಅವರೇ ಅಸ್ಥಿರವಾಗ್ತಿದ್ದಾರೆ. 5 ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ.ಮಂಡ್ಯದ ಕಾಂಗ್ರೆಸ್ ನಾಯಕರು ಈಗಾಗಲೇ ಫಾರೀನ್ ಗೆ ಹೋಗಿ ಬಂದಿದ್ದಾರೆ. ಅವರು ಎಲ್ಲರು ಜೆಡಿಎಸ್‌ಗೆ ಕೆಲಸ ಮಾಡುತ್ತಾರೆ. ನಮ್ಮ ಎದುರಾಳಿ ಬಿಜೆಪಿ ಆಗಿರೋದ್ರಿಂದ ಕೆಲಸ ಮಾಡಲೇಬೇಕು.ನಾನೂ ಈಗ ಮಂಡ್ಯಕ್ಕೆ ಹೋಗ್ತೇನೆ, ಎಲ್ಲರ ಜೊತೆ ಮಾತಾಡುತ್ತೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here