Home Cinema ಮಂಡ್ಯದಲ್ಲಿ ಸುಮಲತಾ ಗೆಲುವಿಗೆ ದರ್ಶನ್, ಯಶ್,ಸುದೀಪ್ ಅಭಿಷೇಕ್ ಪಣ..! ಮಂಡ್ಯದಲ್ಲಿ ನಿರ್ಮಾಪಕ ರಾಕ್ ಲೈನ್ v/s...

ಮಂಡ್ಯದಲ್ಲಿ ಸುಮಲತಾ ಗೆಲುವಿಗೆ ದರ್ಶನ್, ಯಶ್,ಸುದೀಪ್ ಅಭಿಷೇಕ್ ಪಣ..! ಮಂಡ್ಯದಲ್ಲಿ ನಿರ್ಮಾಪಕ ರಾಕ್ ಲೈನ್ v/s ಮುನಿರತ್ನ ..! 15 ದಿನಗಳ ಕಾಲ ಸ್ಟಾರ್ ನಟರು ಪ್ರಚಾರ

1243
0
SHARE

ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣೆ ಕಾವು ಬಿಸಿಲ ಬೇಗೆಗಿಂತ ಹೆಚ್ಚಾಗಿದೆ.. ಮಂಡ್ಯದಿಂದ ಅಂಬರೀಷ್ ಪತ್ನಿ ಸುಮಲತಾ ಮತ್ತು ಸಿಎಂ ಹೆಚ್ಡಿಕೆ ಪುತ್ರ ನಿಖಿಲ್ ಮುಖಾಮುಖಿಯಾಗುತ್ತಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಿಸಿದೆ…

ಈಗಾಗಲೇ ಸುಮಲತಾ ಮಂಡ್ಯದಲ್ಲಿ ಬೀಡು ಬಿಟ್ಟು ಪಕ್ಷಾತೀತವಾಗಿ ರಾಜಕೀಯ ಮುಖಂಡರನ್ನು ಭೇಟಿ ಮಾಡುವುದರ ಜೊತೆಗೆ ಟೆಂಪಲ್ ರನ್ ಮಾಡುತ್ತಿದ್ದಾರೆ.ಮಂಡ್ಯದ ಬೆಳ್ಳೂರು ಕ್ರಾಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅವರು, ರಾಜಕೀಯದ ಬಗ್ಗೆ ತಮ್ಮ ಮುಂದಿನ ನಿರ್ಧಾರಗಳನ್ನು ಮಾರ್ಚ್‌ 18ರ ಒಳಗಾಗಿ ತಿಳಿಸುತ್ತೇನೆ ಎಂದು ಹೇಳಿದರು.

ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್‌ ಮುಖಂಡರು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ ಬದಲಾಗಿ ಕೆಲವರು ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ನಟಿ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.ತಮ್ಮ ಪರ ಪ್ರಚಾರಕ್ಕೆ ಬರುವ ನಟರ ಬಗ್ಗೆ ಮಾತನಾಡಿದ ಸುಮಲತಾ, ದರ್ಶನ್ ಅವರು ನನ್ನ ದೊಡ್ಡಮಗನಿದ್ದಂತೆ, ನನ್ನನ್ನು ತಾಯಿಂತೆ ಕಾಣುತ್ತಾರೆ, ಅವರು ಬಂದೇ ಬರುತ್ತಾರೆ.

ಅಷ್ಟೆ ಅಲ್ಲ ಚಿತ್ರರಂಗದ ಎಲ್ಲರೂ ನನ್ನ ಬೆನ್ನಿಗಿದ್ದಾರೆ, ಅಂಬರೀಶ್ ಅವರ ಮೇಲೆ ಅವರಿಗಿದ್ದ ಪ್ರೀತಿಗೆ ಉದಾಹರಣೆ ಇದು ಎಂದು ಸುಮಲತಾ ಹೇಳಿದರು. ದರ್ಶನ್ ಮತ್ತು ಯಶ್ 15 ದಿನಗಳ ಕಾಲ ಸುಮಲತಾ ಪರ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.ಇನ್ನೂ ಸ್ಟಾರ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುಮಲತಾ ಬೆನ್ನಿಗೆ ನಿಂತಿದ್ದಾರೆ…

ಆದ್ರೆ ರಾಕ್ ಲೈನ್ ಸಂಬಂಧಿ ಮತ್ತು ನಿರ್ಮಾಪಕ ಮುನಿರತ್ನ ನಿಖಿಲ್ ಕುಮಾರಸ್ವಾಮಿ ಪರ ನಿಂತಿದ್ದಾರೆ..ಈ ಬೆಳವಣಿಗೆಗಳ ನಡುವೆ ಮಂಡ್ಯ ಲೋಕಸಭಾ ಚುನಾವಣಾ ಜಿದ್ದಾಜಿದ್ದಿ ಕಾವೇರಿತ್ತಿದೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ಸಾಧ್ಯತೆ ಇದೆ. ಇಂದು ರಾತ್ರಿ ಅಥವಾ ನಾಳೆ ಅಧಿಕೃತವಾಗಿ ಬೆಂಬಲ ಸೂಚನೆ ನೀಡುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here