Home District ಮಂಡ್ಯದಲ್ಲಿ ಸುಮಲತಾ ಪರ ಹೆಚ್ಚಿದ ಅನುಕಂಪದ ಅಲೆ! ತೆನೆ ಹೊತ್ತ ಮಹಿಳೆಗೆ ನಡುಕ ತಂದ ನಿಖಿಲ್...

ಮಂಡ್ಯದಲ್ಲಿ ಸುಮಲತಾ ಪರ ಹೆಚ್ಚಿದ ಅನುಕಂಪದ ಅಲೆ! ತೆನೆ ಹೊತ್ತ ಮಹಿಳೆಗೆ ನಡುಕ ತಂದ ನಿಖಿಲ್ ವಿರೋಧಿ ಅಲೆ! ಸಕ್ಕರೆ ನಾಡಿನಲ್ಲಿ ನಿಖಿಲ್ v/s ಅಭಿಷೇಕ್ ಜಿದ್ದಾಜಿದ್ದಿ!

870
0
SHARE

ಸುಮಲತಾ ಅಂಬರೀಶ್ ಅವರನ್ನ ಮಂಡ್ಯದಿಂದ ಗೆಲ್ಲಿಸಲು ಸ್ವತಃ ಅಂಬಿ ಪುತ್ರ ಅಭಿಷೇಕ್ ಸಾರಥಿಯಾಗಿ ನಿಂತಿದ್ದಾರೆ. ಇಂದಿನಿಂದ ಅಧಿಕೃತವಾಗಿ ಸುಮಲತಾ ಪರವಾಗಿ ಪ್ರಚಾರ ಆರಂಭಿಸುತ್ತಿದ್ದಾರೆ.

ಅಂಬರೀಶ್ ಅವರ ನೆಚ್ಚಿನ ಊರು ಮಳವಳ್ಳಿಯಿಂದ ಪ್ರಚಾರಕ್ಕೆ ಅಂಬಿ ಪುತ್ರ ಚಾಲನೆ ನೀಡುತ್ತಿದ್ದಾರೆ.ಸುಮಲತಾ ಮತ್ತು ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರ್ ಹೊರಗಿನವರು ಎಂಬ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಸುಮಲತಾ ಪರವಾಗಿ ಅನುಕಂಪದ ಅಲೆ ಹೆಚ್ಚಾಗಿದೆ.ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ ಮಂಡ್ಯ ಲೋಕಸಭೆ ಚುನಾವಣೆ.. ನಟಿ ಸುಮಲತಾ ಅಧಿಕೃತವಾಗಿ ಸ್ಪರ್ಧೆ ಘೋಷಣೆ ಮಾಡದೇ ಇದ್ದರೂ ಜಿಲ್ಲೆಯಲ್ಲಿ ಮತ ಬೇಟೆ ಆರಂಭ ಮಾಡಿದ್ದಾರೆ‌. ಹೋದೆಡೆಯಲ್ಲಿ ಮಹಿಳೆಯರು ಆರತಿ ಮಾಡಿ ಸ್ವಾಗತ ಮಾಡುತ್ತಿದ್ದಾರೆ‌.

ಗ್ರಾಮಗಳ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಹೋದ ಕಡೆ ಮತದಾರರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.ಇಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿದ ಸುಮಲತಾಗೆ ಪುತ್ರ ಹಾಗೂ ನಟ ಅಭಿಷೇಕ್ ಅಂಬರೀಷ್ ಸಾಥ್ ನೀಡಿದ್ರು.. ಹಲಗೂರಿನ ಹಾಡ್ಲಿ ವೃತ್ತದಲ್ಲಿ ಮಾತನಾಡಿದ ಸುಮಲತಾ, ಎಲ್ಲೆಡೆ ರೆಸ್ಪಾನ್ಸ್ ಅಧ್ಬುತವಾಗಿದೆ, ಪ್ರೀತಿಯಿಂದ ಜನ ಸ್ವಾಗತ ಕೋರುತ್ತಿದ್ದಾರೆ ಎಂದರು..

ನಮ್ಮ ಮಾವನ ಹೆಸ್ರೆ ಮಳವಳ್ಳಿ ಹುಚ್ಚೇಗೌಡ, ಅಂಬಿ ಚಿಕ್ಕ ವಯಸ್ಸಿನಲ್ಲಿ ಇಲ್ಲಿ ಹಲವಾರು ವರ್ಷ ಕಾಲ ಕಳೆದಿದ್ದಾರೆ ಎಂದು ಹಿಂದಿನದನ್ನ ನೆನಪಿಸಿಕೊಂಡರು.. ಮಂಡ್ಯದಿಂದ ಸ್ಪರ್ಧಿಸುವ ವಿಚಾರವನ್ನ ಮಾರ್ಚ್ 18ರಂದು ಖಚಿತಪಡಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ..ಮೊದಲಿನಿಂದಲೂ ಎಚ್ ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಮತ್ತು ಅಂಬರೀಶ್ ಪುತ್ರ ಅಭಿಷೇಕ್ ಸ್ನೇಹಿತರು. ಈಗ ಇಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ನಿಖಿಲ್ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಮತ್ತೊಂದೆಡೆ ಅಭಿಷೇಕ್ ಈಗ ಅಮ್ಮನ ಪರವಾಗಿ ನಿಂತಿದ್ದಾರೆ.

ಅಲ್ಲಿಗೆ ಸುಮಲತಾ ಮತ್ತು ನಿಖಿಲ್ ಅಂತ ಕಂಡರೂ ಅಭಿಷೇಕ್ ಎಂಟ್ರಿಯಿಂದ ನಿಖಿಲ್ ಮತ್ತು ಅಭಿಷೇಕ್ ಎಂದೇ ಪೈಪೋಟಿ ನಡೆಯಬಹುದು.ಇನ್ನೂ ತಾಯಿ ಜೊತೆ ಪ್ರಚಾರ ನಡೆಸಿದ ಅಭಿಷೇಕ್ ಮಾತನಾಡಿ, ನಾವು ಏನೇ ತೀರ್ಮಾನ ಕೈಗೊಂಡ್ರು ಜನರ ಮುಂದೆ ಇಟ್ಟು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು..

ನನಗೆ ರಾಜಕೀಯ ಗೊತ್ತಿಲ್ಲ, ನಮ್ಮ ಅಪ್ಪ, ಅಮ್ಮನಿಗಾಗಿ ಬಂದಿದ್ದೇನೆ ಎಂದು ಅಭಿಷೇಕ್ ಹೇಳಿದ್ರು.ಮಂಡ್ಯದ 8ವಿಧಾನಸಭೆ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದು, ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದೆ, ರಾಜಕೀಯಕ್ಕೆ ಶೀಘ್ರವೇ ಕಾಲಿರಿಸಿರುವ ನಿಖಿಲ್ ಕುಮಾರ್ ಹೊರಗಿನವರು ಎಂಬ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಸುಮಲತಾ ಪರವಾಗಿ ಅನುಕಂಪದ ಅಲೆ ಹೆಚ್ಚಾಗಿದೆ, ಸುಮಲತಾಗೆ ಸಿಗುತ್ತಿರುವ ಅಭೂತ ಪೂರ್ವ ಬೆಂಬಲ ಜೆಡಿಎಸ್ ಗೆ ನಡುಕ ಹುಟ್ಟಿಸಿದೆ.

LEAVE A REPLY

Please enter your comment!
Please enter your name here