Home District ಮಂಡ್ಯದ ಮೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಹಿನ್ನಡೆ ಆಗುವ ಸಾಧ್ಯತೆ..!? ಮೂರು ಕ್ಷೇತ್ರದ ಶಾಸಕರಿಗೆ ಸಿಎಂ...

ಮಂಡ್ಯದ ಮೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಹಿನ್ನಡೆ ಆಗುವ ಸಾಧ್ಯತೆ..!? ಮೂರು ಕ್ಷೇತ್ರದ ಶಾಸಕರಿಗೆ ಸಿಎಂ ಕುಮಾರಸ್ವಾಮಿ ಫುಲ್ ಕ್ಲಾಸ್..!?

1218
0
SHARE

ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ಮೂಡಿದ್ದು, ಗುಪ್ತಚರ ಇಲಾಖೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿಷ್ಟಿತ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಶಾಸಕರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಚುನಾವಣೆ ಮುಗಿದ ಒಂದು ವಾರದ ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಪ್ತಚರ ಇಲಾಖೆಯಿಂದ ಚುನಾವಣೆ ಫಲಿತಾಂಶದ ಬಗ್ಗೆ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿಖಿಲ್ ಕುಮಾರಸ್ವಾಮಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದರಿಂದ ಕೆಂಡಾಮಂಡಲರಾಗಿರುವ ಸಿಎಂ ಕುಮಾರಸ್ವಾಮಿ ಕಳೆದ ರಾತ್ರಿ ಮೂರು ಮಂದಿ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡು ಹಿಗ್ಗಾಮುಗ್ಗ ಬೈದಿದಿದ್ದಾರೆ.

ಗುಪ್ತಚರ ಇಲಾಖೆ ಸಮೀಕ್ಷೆ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ, ಮದ್ದೂರು, ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಗೆ ಭಾರೀ ಹಿನ್ನಡೆಯಾಗಲಿದೆ ಎಂಬ ಮಾಹಿತಿ ರವಾನೆಯಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಅನ್ನದಾನಿ ಪ್ರತಿನಿಧಿಸುವ ಮಳವಳ್ಳಿ ಕ್ಷೇತ್ರ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಪ್ರತಿನಿಧಿಸುವ ಮದ್ದೂರು ವಿಧಾನಸಭಾ ಕ್ಷೇತ್ರ ಹಾಗೂ ಸಹಕಾರ ಸಚಿವರ ಸಂಸದೀಯ ಕಾರ್ಯದರ್ಶಿ ಎಂ.ಶ್ರೀನಿವಾಸ್ ಪ್ರತಿನಿಧಿಸುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಹಿನ್ನಡೆ ಅನುಭವಿಸಲಿದ್ದಾರೆ.

ಅದ್ರಲ್ಲೂ ಮಂಡ್ಯ ಕ್ಷೇತ್ರ ಕಾಂಗ್ರೆಸ್ ಕೋಟೆಯಾಗಿರೋದ್ರಿಂದ ಇಲ್ಲಿ ಶ್ರೀನಿವಾಸ್ ಸಮರ್ಪಕವಾಗಿ ಕೆಲ್ಸ ಮಾಡಿಲ್ಲ ಅನ್ನೋ ಕಾರಣಕ್ಕೆ ಈ ಮೂರು ಕ್ಷೇತ್ರದಲ್ಲಿ ಭಾರೀ ಹಿನ್ನಡೆ ಅನುಭವಿಸಲಿದ್ದಾರೆ ನಿಖಿಲ್ ಎಂದು ಹೇಳಲಾಗ್ತಿದೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಮೂರು ಮಂದಿಗೂ ಹಿಗ್ಗಾ ಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ.ಒಟ್ಟಾರೆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಪುತ್ರನಿಗೆ ಹಿನ್ನಡೆಯಾಗಬಹುದಾದ ಕ್ಷೇತ್ರದ ಶಾಸಕರಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದು, ಮುಂದೆ ಫಲಿತಾಂಶ ಹೊರ ಬಂದ ಮೇಲೆ ಮುಖಂಡರಿಗೆ ಇನ್ಯಾವ ಗತಿ ಕಾದಿದ್ಯೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here