Home District ಮಂಡ್ಯದ ರಾಜಕೀಯ, ಮೈಸೂರಿನ ಮೇಲೆ ಎಫೆಕ್ಟ್..! ಮೈಸೂರಿನಲ್ಲಿ ಸಿದ್ದರಾಮಯ್ಯ ಕರೆದ ಸಭೆಗೆ ದಳಪತಿಗಳು ಗೈರು..!

ಮಂಡ್ಯದ ರಾಜಕೀಯ, ಮೈಸೂರಿನ ಮೇಲೆ ಎಫೆಕ್ಟ್..! ಮೈಸೂರಿನಲ್ಲಿ ಸಿದ್ದರಾಮಯ್ಯ ಕರೆದ ಸಭೆಗೆ ದಳಪತಿಗಳು ಗೈರು..!

2088
0
SHARE

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ವಿರುದ್ದ ತಿರುಗಿ ಬಿದ್ದ ಬೆನ್ನಲ್ಲೇ ಮೈಸೂರಿನಲ್ಲಿಯೂ ದಳಪತಿಗಳು ಮೈತ್ರಿ ಅಭ್ಯರ್ಥಿಗೆ ಕೈ ಕೊಟ್ಟಿದ್ದಾರೆ. ಚುನಾವಣೆ ಸಂಬಂಧ ಮೈಸೂರಿನಲ್ಲಿ ಸಿದ್ದರಾಮಯ್ಯ ಕರೆದ ಸಭೆಗೆ ಜೆಡಿಎಸ್ ಮುಖಂಡರು ಗೈರಾಗುವ ಮೂಲಕ, ಮೈತ್ರಿ ಅಭ್ಯರ್ಥಿಗೆ ಟಾಂಗ್ ಕೊಟ್ಟಿದ್ದಾರೆ….

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಂದಾಗಿವೆ. ಆದ್ರೆ, ಲೋಕಸಭಾ ಚುನಾವಣೆಯಲ್ಲಿ ವಾಸ್ತವವೇ ಬೇರೆ ಆಗಿದ್ದು, ಬಹಿರಂಗವಾಗಿ ನಡೆಯುತ್ತಿದ್ದ ಜಂಗಿಕುಸ್ತಿ ಈಗ ತೆರೆ ಮರೆಯಲ್ಲಿ ನಡೆಯ ತೊಡಗಿದೆ. ಮೈಸೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಸಿದ್ದರಾಮಯ್ಯ ವರ್ಸಸ್ ಜಿ.ಟಿ.ದೇವೇಗೌಡ ಎಂಬಂತೆ ನಡೆಯುತ್ತಿದೆ.

ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಗೆಲ್ಲಿಸುವ ಹೊಣೆ ಸಿದ್ದರಾಮಯ್ಯ ಹೆಗಲಮೇಲೇ ಇದೆಯಾದರೂ ಇದಕ್ಕೆ ದಳಪತಿಗಳು ಕೈ ಜೋಡಿಸದೆ ಕೈ ಕೊಟ್ಟಿದ್ದಾರೆ. ಮೈತ್ರಿ ಅಭ್ಯರ್ಥಿ ಗೆಲುವಿನ ಸಂಬಂಧ ಕಾರ್ಯತಂತ್ರ ರೂಪಿಸಲು ಸಿದ್ದರಾಮಯ್ಯ ಕರೆದಿದ್ದ ಸಭೆಗೆ ಜೆಡಿಎಸ್ ಸಚಿವರು ಹಾಗೂ ಮುಖಂಡರ್ಯಾರೂ ಹಾಜರಾಗದೆ ದೋಸ್ತಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಜೆಡಿಎಸ್ ಮುಖಂಡರು ಗೈರು ಹಾಜರಿಯಲ್ಲಿಯೇ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದ ಸಿದ್ದರಾಮಯ್ಯ, ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಕೇಸರಿ ಪಕ್ಷ ಕ್ಯಾನ್ಸರ್ ಇದ್ದಂತೆ ಎಂದು ಟೀಕಿಸಿದ್ರು. ಮೈಸೂರಿನಲ್ಲಿ ತಾವು ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಯನ್ನು ತಮ್ಮದೆಂದು ಪ್ರತಾಪ್ ಸಿಂಹ ಬಣ್ಣಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಐದು ದಿನ ಕ್ಷೇತ್ರದಲ್ಲಿಯೇ ಇರಲಿದ್ದು, ಮಾಜಿ ಪ್ರಧಾನಿ ದೇವೇಗೌಡರು ಸಹ ಪ್ರಚಾರಕ್ಕೆ ಬರಲಿದ್ದಾರೆ ಎಂದರು.

ಇನ್ನೂ ಕಳೆದ ವಿಧಾನಸಭಾ ಚುನಾವಣೆ ನಂತರ ನಾನಾ ಕಾರಣಕ್ಕೆ ಸಿದ್ದರಾಮಯ್ಯ ರಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಈಗ ಮುನಿಸು ಬಿಟ್ಟು ಒಂದಾಗಿದ್ದಾರೆ. ಮೈಸೂರು ಕ್ಷೇತ್ರದ ಚುನಾವಣೆ ಉಸ್ತುವಾರಿ ಹೊತ್ತುಕೊಂಡಿದ್ದು, ಮೈತ್ರಿ ಅಭ್ಯರ್ಥಿ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಹದೇವಪ್ಪ, ಬಿಜೆಪಿ ಅಭ್ಯರ್ಥಿ ವಿರುದ್ದ ವಾಕ್ ಸಮರ ಸಾರಿದ್ದಾರೆ.

ಪ್ರತಿಷ್ಟೆಯಿಂದ ಜೆಡಿಎಸ್ ಗೆ ಕ್ಷೇತ್ರ ಕೊಡದೆ ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡ ಸಿದ್ದರಾಮಯ್ಯಗೆ ಮೈಸೂರು ಗೆಲ್ಲುವುದು ಮತ್ತೊಂದು ರೀತಿಯ ಪ್ರತಿಷ್ಠೆಯಾಗಿದೆ. ಆದ್ರೆ, ಜೆಡಿಎಸ್ ನಾಯಕರು ಸಾಥ್ ನೀಡದಿರುವುದು ಕೈ ಹಿಸುಕಿಕೊಳ್ಳುವಂತಾಗಿದೆ.

LEAVE A REPLY

Please enter your comment!
Please enter your name here