Home District ಮಂಡ್ಯ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಮುಂದುವರಿದ ಗೊಂದಲ..!ಸಮಾಜಸೇವಕ ರವಿಕುಮಾರ್ ಗೌಡ ಪರ ಸಿಎಂ ಒಲವು..!ನಾಮಪತ್ರ ಸಲ್ಲಿಸುವುದಿಲ್ಲವೆಂದು...

ಮಂಡ್ಯ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಮುಂದುವರಿದ ಗೊಂದಲ..!ಸಮಾಜಸೇವಕ ರವಿಕುಮಾರ್ ಗೌಡ ಪರ ಸಿಎಂ ಒಲವು..!ನಾಮಪತ್ರ ಸಲ್ಲಿಸುವುದಿಲ್ಲವೆಂದು ಅಂಬರೀಷ್ ಪಟ್ಟು..!

364
0
SHARE

ತೀವ್ರ ಕುತೂಹಲ ಕೆರಳಿಸಿರುವ ಸಕ್ಕರೆ ನಾಡು ಮಂಡ್ಯದ ಅಭ್ಯರ್ಥಿ ಯಾರೆಂಬು ಇನ್ನೂ ಖಚಿತವಾಗಿಲ್ಲ. ಹೀಗಿರುವಾರಲೇ ನಾನು ಕಣಕ್ಕಿಳಿಯುವುದಿಲ್ಲ ಎಂದು ಅಂಬರೀಷ್ ಪಟ್ಟು ಹಿಡಿದು ಕುಳಿತಿದ್ದಾರೆ. ಅಂಬರೀಷ್ ಮನವೊಲಿಸಲು ಹಿರಿಯ ನಾಯಕರು ಸತತ ಯತ್ನ ಮಾಡ್ತಿದ್ದಾರೆ..

ಇಂದು ಅಂಬರೀಷ್ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ ಬಳಿಕ ಮಂಡ್ಯದಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರೆಂಬುದು ಬಹುತೇಕ ನಿರ್ಧಾರವಾಗಲಿದೆ.

ನಿನ್ನೆ ಸಿದ್ದರಾಮಯ್ಯ ಟಿಕೆಟೆ ಆಕಾಂಕ್ಷಿಗಳಾದ ರವಿಕುಮಾರ್ ಗೌಡ ಹಾಗೂ ಅಮರಾವತಿ ಚಂದ್ರಶೇಖರ್ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಯುವನಾಯಕ ರವಿಕುಮಾರ್ ಗೌಡಗೆ ಟಿಕೆಟ್ ಕೊಡಲು ಸಿಎಂ ಸಿದ್ದರಾಮಯ್ಯಗೆ ಒಲವಿದೆ ಎನ್ನಲಾಗಿದೆ.ನಿನ್ನೆ ನಡೆದ ಸಭೆ ಅಪೂರ್ಣವಾಗಿದ್ದು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ..

ಇನ್ನು ಅಂಬರೀಷ್‌ಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ರವಿಕುಮಾರ್ ಗೌಡ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೂಡ ವಿರೋಧಿ ಅಲೆ ಬೇಡವೆಂದು ರವಿಕುಮಾರ್ ಗೌಡಗೆ ಟಿಕೆಟ್ ಕೊಡಲು ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಇನ್ನು ರವಿಕುಮಾರ್ ಗೌಡ ಪರ ಮಾಜಿ ಶಾಸಕ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ.

ಸದ್ಯ ಕಾಂಗ್ರೆಸ್ ನ ಘೋಷಿತ ಟಿಕೆಟ್ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ..ತಿಪಟೂರಿನಿಂದ ಮತ್ತೆ ಷಡಕ್ಷರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ…. ಇನ್ನು ಮಂಡ್ಯ ಅಭ್ಯರ್ಥಿ ಯಾರೆಂಬುದು ಇಂದು ಬಹುತೇಕ ಖಚಿತವಾಗಲಿದೆ.

LEAVE A REPLY

Please enter your comment!
Please enter your name here