Home District ಮಂಡ್ಯ ಜನರು ಆತಂಕ ಪಡುವ ಅಗತ್ಯವಿಲ್ಲ..! ಮಂಡ್ಯದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿಕೆ..

ಮಂಡ್ಯ ಜನರು ಆತಂಕ ಪಡುವ ಅಗತ್ಯವಿಲ್ಲ..! ಮಂಡ್ಯದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿಕೆ..

814
0
SHARE

ಮಂಡ್ಯ ಜಿಲ್ಲೆಯ ನಾಗಮಂಗಲದ ಮಹಿಳೆಗೆ ಹಾಗೂ ಶ್ರೀರಂಗಪಟ್ಟಣದ ಯುವಕನಲ್ಲಿ ಜ್ವರ ಬಂದ ಹಿನ್ನೆಲೆಯಲ್ಲಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ರಕ್ತ ಹಾಗೂ ಕಫವನ್ನು ಪರೀಕ್ಷೆಗೆ ಮೈಸೂರಿಗೆ ಕಳುಹಿಸಿದ್ದೇವೆ.ಇಂದು ಸಂಜೆಯೊಳಗೆ ಇಬ್ಬರ ರಿಪೋರ್ಟ್ ಕಾರ್ಡ್ ಬರಲಿದೆ. ನಾಗಮಂಗಲ ಮಹಿಳೆ ಹಜ್ ಯಾತ್ರೆಯಿಂದ ಬಂದಿದ್ದಾರೆ. ಸಿದ್ದಕಿ ಜೊತೆ ಆಕೆಗೆ ಸಂಪರ್ಕ ಇಲ್ಲ.

ಅವರ ಜೊತೆ ಪ್ರಯಾಣ ಕೂಡ ಮಾಡಿಲ್ಲ. 50 ವರ್ಷದ ಮಹಿಳೆ ಆರೋಗ್ಯವಾಗಿದ್ದಾರೆ‌.ಏನೂ ಸಮಸ್ಯೆ ಆಗಿಲ್ಲ,ಕೇಂದ್ರದ ನಿಯಾಮವಳಿ ಪ್ರಕಾರ ನಿಗಾ ಇಡಲಾಗಿದೆ.ಇಂದು ಸಂಜೆ ವರದಿ ಬರಲಿದೆ.ಮಹಿಳೆ ಜೊತೆ 7 ಜನ ಸೌದಿಯಿಂದ ಬಂದಿದ್ದಾರೆ.ಯಾರಿಗೂ ಆರೋಗ್ಯ ಸಮಸ್ಯೆ ಇಲ್ಲ.. ಹದಿನಾಲ್ಕು ದಿನ ನಿಗಾ ವಹಿಸಲಾಗಿತ್ತು,ಇವರು ಪ್ರಯಾಣ ಮಾಡಿದ ವಿಮಾನ ಟಿಕೆಟ್ ಹಾಗೂ ಇವರು ಯಾರೊಂದಿಗೆ ಪ್ರಯಾಣಿಸಿದರು ಎಂಬ ಮಾಹಿತಿಯನ್ನು ಕಲೆಹಾಕಿದ್ದು.ಅವರು ಪ್ರಯಾಣ ಮುಗಿಸಿ ಬಂದ ಇಲ್ಲಿಯವರೆಗೂ ಅವರ ದಿನಚರಿಯನ್ನು ಪಡೆದುಕೊಳ್ಳಲಾಗಿದೆ.ಶ್ರೀರಂಗಪಟ್ಟಣದ ಯುವಕ ಮೆಲ್ಬೋರ್ನ್‌ನಿಂದ ಬಂದಿದ್ದಾರೆ.ಶ್ರೀರಂಗಪಟ್ಟಣ ಮೂಲದ ವ್ಯಕ್ತಿಗೂ ಸ್ಕ್ರೀನಿಂಗ್.. 34 ವರ್ಷದ ಶ್ರೀರಂಗಪಟ್ಟಣ ಮೂಲದ ವ್ಯಕ್ತಿ ಮೇಲೂ ನಿಗಾ ಇಡಲಾಗಿದೆ.ಥೈಲ್ಯಾಂಡ್ ಮುಖಾಂತರ ಮೆಲ್ಬೋರ್ನ್ ಗೆ ತರಬೇತಿಗೆ ಹೋಗಿದ್ದರು‌.ಮಾರ್ಚ್ 1 ರಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.ಅವರನ್ನು ಸ್ಕ್ರೀನಿಂಗ್ ಮಾಡಲಾಗಿದೆ.ಮೂರು ದಿನಗಳಿಂದ ಕೆಮ್ಮು ಇದೆ.

ತಪಾಸಣೆಗೆ ಮನವಿ ಸಲ್ಲಿಸಿದ ಹಿನ್ನೆಲೆ ತಪಾಸಣೆಗೆ ಕಳಿಸಲಾಗಿದೆ.ಗಂಟಲಿನ ದ್ರವದ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿದೆ.ಕೊರೋನಾ ಪಾಸಿಟಿವ್ ಪತ್ತೆಯಾಗಿಲ್ಲ.ಇಬ್ಬರಿಗೂ ಸ್ವಲ್ಪ ಪ್ರಮಾಣದಲ್ಲಿ ಜ್ವರ ಹಾಗೂ ಗಂಟಲು ಕೆರತ ಇದೆ.ಸದ್ಯ ಇಬ್ಬರು ಆರಾಮವಾಗಿ ಇದ್ದಾರೆ.ಕಲಬುರ್ಗಿಯ ಸಿದ್ದಿಕ್‌ಗೂ ನಾಗಮಂಗಲದ ಮಹಿಳೆಗೂ ಯಾವುದೇ ಸಂಬಂಧ ಇಲ್ಲ..ಮಂಡ್ಯ ಜನರು ಆತಂಕ ಪಡುವ ಅಗತ್ಯವಿಲ್ಲ.30 ಜನರ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದೆ.ಜಿಲ್ಲೆಯಲ್ಲಿ ಒಟ್ಟು 30 ಜನರ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದೆ.ಪ್ರತಿ ದಿನ ವರದಿ ತರಿಸಿಕೊಳ್ಳಲಾಗುತ್ತಿದೆ.ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಮೂರು ಸಹಾಯವಾಣಿ ಕೇಂದ್ರ :ಸಾರ್ವಜನಿಕ ವಲಯದಲ್ಲಿ ಅಥವಾ ನಿಮ್ಮ ಸುತ್ತಮುತ್ತಲಲ್ಲಿ ಯಾರಿಗಾದರೂ ವಿಪರೀತ ಕೆಮ್ಮು ಜ್ವರ ಶೀತದಿಂದ ಬಳಲುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ಈ ಕೆಳಕಂಡ ಸಂಖ್ಯೆಗಳಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು..ಜಿಲ್ಲಾಧಿಕಾರಿಗಳ ಕಚೇರಿ *ಸಹಾಯವಾಣಿ ಸಂಖ್ಯೆ:1077, ಜಿಲ್ಲಾ ಆರೋಗ್ಯ ಇಲಾಖೆ ಸಹಾಯವಾಣಿ ಸಂಖ್ಯೆ:104, ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಹಾಯವಾಣಿ ಸಂಖ್ಯೆ:100*

ಸಾಮಾಜಿಕ ಜಾಲತಾಣದ ಸುಳ್ಳುವದಂತಿ: ಕೆಲವರು ಸಾಮಾಜಿಕ ತಾಣದಲ್ಲಿ ಮಾಹಿತಿ ರಹಿತ ವಿಚಾರಗಳನ್ನು ಹರಡುತ್ತಿದ್ದಾರೆ ಇದರ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಈ ರೀತಿ ಅನಗತ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವುದು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು. ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಆತಂಕ ಬೇಡ, ಜಿಲ್ಲಾಡಳಿತ ಹಕ್ಕಿ ಜ್ವರದ ಬಗ್ಗೆ ನಿರಂತರವಾಗಿ ಕ್ರಮವಹಿಸಿದೆ, ಮಂಡ್ಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿಕೆನೀಡಿದ್ದಾರೆ.

LEAVE A REPLY

Please enter your comment!
Please enter your name here