Home District ಮಂಡ್ಯ ಜನರ ಸೇವೆ ಮಾಡುವುದು ನನ್ನ ಕರ್ತವ್ಯ. ಮಂಡ್ಯದಲ್ಲಿ ಸ್ಪರ್ಧಿಸುವ ವಿಚಾರ ನನ್ನ ನಿರ್ಧಾರವಲ್ಲ. ಜೆಡಿಎಸ್...

ಮಂಡ್ಯ ಜನರ ಸೇವೆ ಮಾಡುವುದು ನನ್ನ ಕರ್ತವ್ಯ. ಮಂಡ್ಯದಲ್ಲಿ ಸ್ಪರ್ಧಿಸುವ ವಿಚಾರ ನನ್ನ ನಿರ್ಧಾರವಲ್ಲ. ಜೆಡಿಎಸ್ ವರಿಷ್ಠರು ಹಾಗೂ ಕಾರ್ಯಕರ್ತರ ನಿರ್ಧಾರ-ನಿಖಿಲ್ ಕುಮಾರಸ್ವಾಮಿ

408
0
SHARE

ಮೊಮ್ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದೇವೇಗೌಡರು ಶೃಂಗೇರಿ ಶಾರದಾಂಬೆ ಮೊರೆಹೋಗಿದ್ದಾರೆ. ಶಾರದಾಂಬೆ ಸನ್ನಿದಿಯಲ್ಲಿ ಅತಿರುದ್ರ ಮಹಾಯಾಗ, ಚಂಡಿಕಾಯಾಗ ಮಾಡುತ್ತಿದ್ದಾರೆ. ವಿಶೇಷ ಪೂಜೆಯಲ್ಲಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ಕೂಡ ಭಾಗಿ ಯಾಗಿದ್ದಾರೆ.

ಈ ವೇಳೆ ಪ್ರಜಾಟಿವಿ ಜೊತೆ ಮಾತನಾ ಡಿದ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುವ ವಿಚಾರ ನನ್ನ ನಿರ್ಧಾರವಲ್ಲ. ಜೆಡಿಎಸ್ ವರಿಷ್ಠರು ಹಾಗೂ ಕಾರ್ಯಕರ್ತರ ನಿರ್ಧಾರ. ಮಂಡ್ಯದಲ್ಲಿನ ಶಾಸಕರ ಜೊತೆ ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಡ್ಯ ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡಿರುವುದಕ್ಕೆ ನನಗೆ ಟಿಕೆಟ್ ಸಿಕ್ಕಿದೆ. ನಾನು ಮಂಡ್ಯ ಜನರ ಸೇವೆ ಮಾಡಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ನಿಖಿಲ್ ಕುಮಾರಸ್ವಾಮಿ ಇದೇ ಮೊದಲ ಭಾರಿಗೆ ತಮ್ಮ ಕುಟುಂಬದ ಆರಾಧ್ಯ ದೈವ ಶೃಂಗೇರಿ ಶಾರದಾಂಬಾ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿದ್ದು ತಮ್ಮ ಕುಟುಂಬದ ಜೊತೆ ನಿಖಿಲ್ ಕುಮಾರಸ್ವಾಮಿ ಅತಿರುದ್ರ ಮಾಹಾಯಾಗ ಹಾಗೂ ಚಂಡಿಕಾ ಯಾಗದಲ್ಲಿಯೂ ಭಾಗಿಯಾಗಿದ್ದಾರೆ.ನಾವು ನಂಬಿಕೊಂಡಿರುವ ದೇವರು ಶೃಂಗೇರಿ ಶಾರದಾಂಬೆ.ತಾಯಿ ಶಾರದೆಂಬೆ ಹಾಗೂ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ.

ಶ್ರೀಗಳ ಜೊತೆ ದೋಡವರ ನಂಟು ಹಿಂದಿನಿಂದಲೂ ಇದೆ. ಅವರ ಆಶೀರ್ವಾದ ,ತಾಯಿಯ ಆಶೀರ್ವಾದ ಇವತ್ತು ತಂದೆಯವರನ್ನ ಆ ಸ್ಥಾನಕ್ಕೆ ಕುರಿಸಿದೆ‌..ಮಂಡ್ಯದಲ್ಲಿ ಲೋಕಸಭಾ ಸಭೆ ಅಭ್ಯರ್ಥಿ ವಿಚಾರ:ಶೃಂಗೇರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ, ಇದು ಜೆ.ಡಿ.ಎಸ್ ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರ ನಿರ್ಧಾರ.

ಬಹುತೇಕ ಶಾಸಕರ ಜೊತೆಗೆ ಕುಳಿತು ಚರ್ಚೆ ನಡೆಸಿ ತೀರ್ಮಾನ ಮಾಡಿದ್ದಾರೆ.ಮಂಡ್ಯ ಜನತೆಯ ನಾಡಿ ಮಿಡಿತ ಅರ್ಥ ಮಾಡಿಕೊಂಡಿದ್ದಕ್ಕೆ ಪಕ್ಷ ಟಿಕೆಟ್ ನೀಡಿದೆ.ಮಂಡ್ಯ ಜನತೆಯ ಸೇವೆ ಮಾಡಲು ರೆಡಿಯಾಗಿದ್ದೇನೆ. ಶಾರದಾಂಬೆ ದರ್ಶನದ ಬಳಿಕ ಹೇಳಿಕೆ ನೀಡಿದ ನಿಖಿಲ್ ಕುಮಾರಸ್ವಾಮಿ…

LEAVE A REPLY

Please enter your comment!
Please enter your name here