Home District ಮಂಡ್ಯ ಜೆಡಿಎಸ್‌ನಲ್ಲಿ ಭುಗಿಲೆದ್ದ ಭಿನ್ನಮತ..! ಆಭ್ಯರ್ಥಿ ಘೋಷಣೆ ಮುನ್ನವೇ ಶುರುವಾದ ಟಿಕೆಟ್ ಕದನ..ಟಿಕೆಟ್ ಸಿಗದಿದ್ರೆ ಬಂಡಾಯ...

ಮಂಡ್ಯ ಜೆಡಿಎಸ್‌ನಲ್ಲಿ ಭುಗಿಲೆದ್ದ ಭಿನ್ನಮತ..! ಆಭ್ಯರ್ಥಿ ಘೋಷಣೆ ಮುನ್ನವೇ ಶುರುವಾದ ಟಿಕೆಟ್ ಕದನ..ಟಿಕೆಟ್ ಸಿಗದಿದ್ರೆ ಬಂಡಾಯ ಆಭ್ಯರ್ಥಿಯಾಗಿ ಸ್ಪರ್ಧೆ..!?

295
0
SHARE

ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ಕಣ ರಂಗೇರ್ತಿದೆ. ರಂಗೇರೋದ್ರ ಜೊತೆಗೆ ಪಕ್ಷಗಳಲ್ಲಿ ಭಿನ್ನಮತ ಭುಗಿಲೆಳ್ತಿದೆ. ಸಕ್ಕರೆ ನಾಡಿನ ಮಂಡ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಇಂತಾ ಸಮಯದಲ್ಲಿ ಜೆಡಿಎಸ್ ಪಕ್ಷದ ಆಕಾಂಕ್ಷಿಯೊಬ್ಬ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

 

ಹೌದು, ಚುನಾವಣೆ ಘೋಷಣೆಯಾಗಿರೋ ಬೆನ್ನಲ್ಲೇ ಮಂಡ್ಯ ಜೆಡಿಎಸ್‌ನಲ್ಲಿ ಅಸಮಧಾನ ಸ್ಫೋಟಗೊಂಡಿದೆ. ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಮೈ ಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಟಿಕೆಟ್‌ಗಾಗಿ ಕಾದು ಕುಳಿತಿದ್ದಾರೆ. ಟಿಕೆಟ್ ನೀಡದಿದ್ರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಪೋಟೋವನ್ನು ಜನ್ರ ಮುಂದಿಟ್ಟು ಮತ ಕೇಳ್ತಿನಿ ಅಂತಾ ಹೇಳ್ತಿದ್ದಾರೆ. ಕಳೆದ ಬಾರಿಯೆ ನನಗೆ ಟಿಕೆಟ್ ನೀಡೋದಾಗಿ ದೇವೇಗೌಡ್ರು ಭರವಸೆ ನೀಡಿದ್ರಂತೆ. ಸಧ್ಯ ಟಿಕೆಟ್ ಪಡೆಯಲು ನಾನೇ ಪ್ರಬಲ ಆಕಾಂಕ್ಷಿಯಾಗಿದ್ದು ವರಿಷ್ಠರು ಟಿಕೆಟ್ ನೀಡದಿದ್ರೆ ಬಂಡಾಯವಾಗಿ ಸ್ಪರ್ಧೆ ಮಾಡ್ತೀನಿ ಅಂತಾ ಸಿದ್ದರಾಮೇಗೌಡ ಎಚ್ಚರಿಕೆ ನೀಡಿದ್ದಾರೆ.

 

 

ಇನ್ನೊಂದೆಡೆ ಜೆಡಿಎಸ್ ನಲ್ಲಿ ಆಕಾಂಕ್ಷಿತ್ರ ನಡುವೆ ಬಿಗ್ ಪೈಟ್ ನಡೀತಾಯಿದೆ. ಆದ್ರೆ, ಇದ್ಯಾವುದು ಮೇಲ್ನೋಟಕ್ಕೆ ಕಾಣ್ತಿಲ್ಲ. ಇದಕ್ಕೆ ಪುಷ್ಠಿ ಎನ್ನುವಂತೆ ಸಂಸದ ಪುಟ್ಟರಾಜು ಮಂಡ್ಯದಲ್ಲಿ ಬಂಡಾಯವಿಲ್ಲ ಅಂತಾ ತೋರಿಸೊ ಪ್ರಯತ್ನ ಮಾಡ್ತಿದ್ದಾರೆ. ವರಿಷ್ಠರು ಬಂಡಾಯವಿಲ್ಲದೆ ಯಾರಿಗೆ ಟಿಕೆಟ್ ನೀಡ್ತಾರೆ ಅವ್ರ ಪರವಾಗಿ ಇನ್ನುಳಿದ ಎಲ್ಲಾ ಅಭ್ಯರ್ಥಿಗಳು ಪ್ರಚಾರ ಮಾಡ್ತಾರೆ ಅಂತಾ ಹೇಳಿದ್ದಾರೆ.

 

 

ಒಟ್ಟಾರೆ ಮಂಡ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ನಲ್ಲಿ ಎಂಟರಿಂದ ಹತ್ತು ಜನ ಆಕಾಂಕ್ಷಿಗಳಿದ್ದು ಪಕ್ಷ ಯಾರಿಗೆ ಮಣೆ ಹಾಕಿದ್ರು ಕೂಡಾ ಬಂಡಾಯದ ಬಿಸಿಯನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ವರಿಷ್ಠರು ಬಂಡಾಯ ಹತ್ತಿಕ್ಕೊದ್ರ ಜೊತೆಗೆ ಚುನಾವಣೆಲಿ ಹೊಂದಾಣಿಕೆ ಮಾಡಿಕೊಂಡು ಎಲ್ರನ್ನ ಯಾವ್ ರೀತಿ ಕೊಂಡ್ಯೊತ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ…

 

LEAVE A REPLY

Please enter your comment!
Please enter your name here