Home Cinema ಮಂಡ್ಯ ನೆಲದಲ್ಲಿ ಗುಡುಗಿದ ನಟ ದರ್ಶನ್ ಮತ್ತು ಯಶ್..! ಅಪಪ್ರಚಾರದ ವಿರುದ್ಧ ಎದೆ ಗುಂದಲ್ಲ, ಸುಮಲತಾ...

ಮಂಡ್ಯ ನೆಲದಲ್ಲಿ ಗುಡುಗಿದ ನಟ ದರ್ಶನ್ ಮತ್ತು ಯಶ್..! ಅಪಪ್ರಚಾರದ ವಿರುದ್ಧ ಎದೆ ಗುಂದಲ್ಲ, ಸುಮಲತಾ ಪರ ಪ್ರಚಾರ ಮಾಡೇ ತೀರುತ್ತೇವೆ..!

510
0
SHARE

ಮಂಡ್ಯದಲ್ಲಿ ಸುಮಲತಾ ಬೆನ್ನಿಗೆ ನಿಂತಿರುವ ಯಶ್ ವೇದಿಕೆ ಮೇಲೆ ಟ್ರೋಲ್ ಮಾಡಿದವರ ಬಗ್ಗೆ ಮಾತನಾಡಿದ್ರು. ನಾಮಿನೇಷನ್ ಫೈಲ್ ಮಾಡುವ ಟೈಮ್‌ನಲ್ಲಿ ಬಂದಾಗ ಅಕ್ಕನ ಕಣ್ಣಲ್ಲಿ ನೀರಿತ್ತು. ನಿಮ್ಮ ಮುಂದೆ ಎನನ್ನು ಮುಚ್ಚಿಡುವುದಿಲ್ಲ. ಯಾರಾದ್ರೂ ನಿಮ್ಮ ಬಗ್ಗೆ ಅಂದ್ರ ಅಂತ ಕೇಳಿದೆ. ಅದಕ್ಕೆ ಅಕ್ಕ ನನ್ನ ಬಗ್ಗೆ ಮಾತಾನಾಡಿದ್ರೆ ನಾನು ತಲೆಕೆಡಿಸಿಕೊಳ್ಳಲ್ಲ.

ದರ್ಶನ್ ಮತ್ತು ನಿನ್ನ ಬಗ್ಗೆ ಕೆಟ್ಟದಾಗಿ ಮಾತಾನಾಡಿದ್ರು ಎಂದು ಸುಮಲತಾ ಅಕ್ಕ ಹೇಳಿದ್ರು. ನಾನು ಈ ಸಂದರ್ಭದಲ್ಲಿ ಹೇಳೋದು ಏನು ಅಂದ್ರೆ ನಾವು ಮಾಡ್ತಾ ಇರುವುದು ತಪ್ಪಲ್ಲ, ಇದು ಯಾವುದೋ ಅಧಿಕಾರದ ಆಸೆಗೋ, ಬೇರೆ ಯಾವುದೋ ಲಾಭಕ್ಕಾಗಿ ನಾವು ಸುಮಕ್ಕ ಬೆಂಬಲಕ್ಕೆ ನಿಂತಿಲ್ಲ. ನೀವು ನಾವು ತಪ್ಪು ಮಾಡ್ತಾ ಇದ್ದೇವೆ ಎಂದು ಕೊಡ್ರೆ.

ತಪ್ಪು ಎಂದೇ ತಿಳಿದುಕೊಳ್ಳಿ. ಆ ತಪ್ಪನ್ನು ಸಾಯೋವರೆಗೂ ಮಾಡ್ತೆವೆ ಯಾಕಂದ್ರೆ ಅಂಬರೀಶ್ ಅಣ್ಣ ನಮಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ನಾಟಕಗೋಸ್ಕರ ನಾವು ಇಲ್ಲಿಗೆ ಬಂದಿಲ್ಲ. ಸಿನಿಮಾದೋರು, ಸಿನಿಮಾದೋರು ಅಂತಾ ಇದ್ದಾರೆ. ನಾವೇನು, ಅಂಟಾರ್ಟಿಕದಿಂದ ಬಂದಿದ್ದೇವಾ, ಪಾಕಿಸ್ತಾನದಿಂದ ಬಂದಿದ್ದೇವಾ.

ಇದೇ ಮೈಸೂರಿನಿಂದ ಮಂಡ್ಯ ರೋಡ್ ದಾಟಿಕೊಂಡೆ ಬೆಂಗಳೂರಿನಲ್ಲಿ ಜೀವನ ಸಾಗಿಸ್ತಾ ಇದ್ದೇವೆ.ಇದೇ ಪಾಲಳ್ಳಿ ಪಂಪ್ ಹೌಸ್, ಕೆಆರ್‌ಎಸ್‌ನಲ್ಲಿ ಈಜಾಡಿದ್ದೇವೆ. ಮಂಡ್ಯದ ಬೆಲ್ಲ, ಕಬ್ಬಿನ ಹಾಲನ್ನು ಕುಡಿದುಕೊಂಡಿದ್ದೇವೆ. ಮಂಡ್ಯದ ಜನತೆ ನಮ್ಮ ಪ್ರೀತಿಯಿಂದ ಬೆಳೆಸಿದ್ದಾರೆ. ದರ್ಶನ್ ಮತ್ತು ನಾನು ಯಾವತ್ತು ಕಿತ್ತಾಡಿಲ್ಲ. ನಮ್ಮ ಹೊಟ್ಟೆ ಪಾಡು ನಾವು ನೋಡ್ತಾ ಇದ್ದೇವೆ. ನಾವು ಅನುಕೂಲಕ್ಕೆ ತಕ್ಕಂತೆ ಚೇಂಜ್ ಆಗೋರಲ್ಲ.

ಅದೆಲ್ಲಾ ರಾಜಕೀಯದಲ್ಲಿ ನಡೆಯುತ್ತದೆ ಎಂದು ಯಶ್ ಟಾಂಗ್ ಕೊಟ್ಟರು. ಜನ ನಮ್ಮನ್ನು ನೋಡಿಲ್ಲ ಸುಮಲತಾ ಅವರಿಗೆ ನೀವು ಬೆಂಬಲಿಸಿ ಸುಮಲತಾ ಅಕ್ಕ ನಿಮ್ಮ ಜೊತೆ ಇರ್ತಾರೆ. ಮಂಡ್ಯ ಅಂದ್ರೆ ಸ್ವಾಭಿಮಾನದ ಜನ. ಭಾವನೆಗಳು ಬದಲಾಗಲ್ಲ. ಸೋಲಲಿ ಗೆಲ್ಲಲಿ ನಿಮ್ಮ ಜೊತೆ ಇರ್ತಾರೆ. ಗೆದ್ರೆ ಮಂಡ್ಯವನ್ನು ಡೆಲ್ಲಿವರೆಗೂ ತಗೆದುಕೊಂಡು ಹೋಗುತ್ತಾರೆ ಎಂದು ಯಶ್ ನುಡಿದ್ರು.

LEAVE A REPLY

Please enter your comment!
Please enter your name here