Home District ಮಂಡ್ಯ ಲೋಕಸಭಾ ಚುನಾವಣೆಯಲ್ಲಿ S.M.ಕೃಷ್ಣ ಬೆಂಬಲ ಕೋರಲಿರುವ ಸುಮಲತಾ..?! ಈಗಾಗಲೇ R.ಅಶೋಕ್ ಮತ್ತು C.T.ರವಿಯವರನ್ನೂ ಭೇಟಿ...

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ S.M.ಕೃಷ್ಣ ಬೆಂಬಲ ಕೋರಲಿರುವ ಸುಮಲತಾ..?! ಈಗಾಗಲೇ R.ಅಶೋಕ್ ಮತ್ತು C.T.ರವಿಯವರನ್ನೂ ಭೇಟಿ ಮಾಡಿದ್ದ ಸುಮಲತಾ…

459
0
SHARE

ಸುಮಲತಾ ಅಂಬರೀಶ್ ,ಇಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಲಿದ್ದಾರೆ.ನಗರದ ಸದಾಶಿವ ನಗರದ ಮನೆಯಲ್ಲಿ ಇಂದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಮಂಡ್ಯ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲ ಕೋರಲಿದ್ದಾರೆ ಎನ್ನಲಾಗಿದೆ. ಬಿಜೆಪಿ ಪಕ್ಷದಿಂದಲೂ ಪರೋಕ್ಷ ಬೆಂಬಲ ವ್ಯಕ್ತವಾಗಿದ್ದು, ಎಸ್.ಎಂ,ಕೃಷ್ಣಾ ಅವರ ಆಶೀರ್ವಾದ ದೊರೆತರೆ ಸುಮಲತಾ ಅವರಿಗೆ ರಾಜಕೀಯವಾಗಿ ಮತ್ತಷ್ಟು ಶಕ್ತಿ ಸಿಗಲಿದೆ ಎನ್ನಲಾಗಿದೆ.

ಅಲ್ಲದೆ ಮಾಜಿ ಸಚಿವ ದಿ.ಅಂಬರೀಶ್ ಬಗ್ಗೆ ಅಭಿಮಾನ ಹೊಂದಿರುವ ಎಸ್.ಎಂ.ಕೃಷ್ಣ, ಸುಮಲತಾಗೆ ಬೆಂಬಲ ನೀಡುವುದು ಖಚಿತ ಎನ್ನಲಾಗಿದೆ. ಜೊತೆಗೆ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಿದರೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಮ್ಮ ವರ್ಚಸ್ಸುಇನ್ನು ಇದೆ ಎಂಬ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸುವ ತಂತ್ರವನ್ನು ಕೃಷ‍್ಣಾ ಅವರು ಅನುಸರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿರುವ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯಲು ಮುಂದಾಗಿರುವ ಸುಮಲತಾ ಪಕ್ಷಾತೀತವಾಗಿ ಎಲ್ಲಾ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಅಲ್ಲದೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಹೀಗಾಗಿ ಎಸ್.ಎಂ.ಕೃಷ್ಣಾ ಭೇಟಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here