Home District ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ…

ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ…

637
0
SHARE

ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಮಾಜ ಸೇವಕ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಕುಮಾರ್ ಗೌಡ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ…

ಅಂಬರೀಶ್ ವರ್ತನೆಗೆ ಬೇಸತ್ತು ರವಿಕುಮಾರ್ ಗೌಡಗೆ ಟಿಕೆಟ್ ನೀಡಲಾಗಿದೆ. ಮಾತುಕತೆಗೆ ಬರುವಂತೆ ಅಂಬರೀಷ್‌ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಹ್ವಾನ ಮಾಡಿದ್ದರು.ಆದ್ರೆ, ಅಂಬರೀಶ್ ಮಾತ್ರ ಮಾತುಕತೆಗೆ ಬಾರಲಿಲ್ಲ…

ಹೀಗಾಗಿ ಅಂಬಿ ವರ್ತನೆಗೆ ಬೇಸತ್ತು ರವಿಕುಮಾರ್ ಗೌಡಗೆ ಟಿಕೆಟ್ ನೀಡಲಾಗಿದೆ.ಮಧ್ಯಾಹ್ನ 2.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ…

ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರವಿಕುಮಾರ ಗೌಡ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಅಂಬಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಹಾಗೂ ರವಿ ಕುಮಾರ್ ಸಮಾಜಸೇವೆ ಪರಿಗಣಿಸಿರುವ ಕಾಂಗ್ರೆಸ್ ಕೊನೆ ಗಳಿಗೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ…

ಇಂದು ನಾಮಿನೇಷನ್‌ಗೆ ಕೊನೆ ದಿನವಾಗಿದ್ದರಿಂದ ರವಿಕುಮಾರ್ ಗೌಡ ಅವರು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ…

LEAVE A REPLY

Please enter your comment!
Please enter your name here