Home Crime ಮಕ್ಕಳು,ಗರ್ಭಿಣಿಯರ ಜೀವದ ಜೊತೆ ಚೆಲ್ಲಾಟ ಆಡ್ತಿದ್ಯಾ ಸರ್ಕಾರ? ಗುಣಮಟ್ಟದ ಪರಿಶೀಲಿಸದೇ ಸರಬರಾಜು ಆಗ್ತಿದ್ಯಾ ಪೌಷ್ಟಿಕ ಆಹಾರ?

ಮಕ್ಕಳು,ಗರ್ಭಿಣಿಯರ ಜೀವದ ಜೊತೆ ಚೆಲ್ಲಾಟ ಆಡ್ತಿದ್ಯಾ ಸರ್ಕಾರ? ಗುಣಮಟ್ಟದ ಪರಿಶೀಲಿಸದೇ ಸರಬರಾಜು ಆಗ್ತಿದ್ಯಾ ಪೌಷ್ಟಿಕ ಆಹಾರ?

2365
0
SHARE

ಇತ್ತೀಚೆಗಷ್ಟೇ ಮಕ್ಕಳ ಬಿಸಿಯೂಟ, ವಿಷ ಪ್ರಸಾದದಿಂದಾಗಿ ಮಕ್ಕಳು, ಕೆಲ ಜನ್ರು ಅಸ್ವಸ್ಥರಾಗಿ ಸಾವನ್ನಪ್ಪಿದ್ರು ಕೂಡ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟ ಆಡೋದು ಮಾತ್ರ ಬಿಡೋದೇ ಇಲ್ಲ ಅನ್ಸುತ್ತೆ. ಸರ್ಕಾರದಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳು ಮತ್ತು ಗರ್ಭಿಣಿಯರಿಗೆ ವಿತರಣೆ ಮಾಡುವ ಪೌಷ್ಠಿಕ ಆಹಾರ, ಧಾನ್ಯಗಳಲ್ಲಿ ರಾಶಿ ರಾಶಿ ಕಪ್ಪು ಹುಳುಗಳು ಪತ್ತೆಯಾಗಿವೆ.

ಸರ್ಕಾರವು ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಠಿಕ ಆಹಾರ, ಧಾನ್ಯಗಳನ್ನ ವಿತರಣೆ ಮಾಡುತ್ತಿದೆ. ಭಾರತೀಯ ಆಹಾರ ನಿಗಮವು ಈ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿದೆ. ಆದ್ರೆ, ನೆಲಮಂಗಲ ತಾಲ್ಲೂಕಿನ ಬೂದಿಹಾಳ್‌ನಲ್ಲಿರೋ ಆಹಾರ ಉತ್ಪಾದನಾ ಘಟಕದಲ್ಲಿರೋ ಆಹಾರದಲ್ಲಿ ಹುಳು ಪತ್ತೆಯಾಗಿದೆ. ಅಕ್ಕಿ,ಗೋದಿಯಲ್ಲಿ ಹುಳು ಪತ್ತೆಯಾಗಿದ್ದು ಇದನ್ನೇ ಪೌಷ್ಠಿಕ ಆಹಾರವೆಂದು ಮಕ್ಕಳು ಗರ್ಭಿಣಿಯರಿಗೆ ನೀಡಲಾಗುತ್ತಿದೆ.

ಹುಳುಗಳು ಗೋಡೆ, ನೆಲ ಸೇರಿ ಇಡೀ ಘಟಕದ ಆವರಣವನ್ನೆ ಆವರಿಸಿಕೊಂಡಿವೆ. ಇಷ್ಟಾದ್ರು ಇಲ್ಲಿ ಸಹಾಯಕ ಮಹಿಳೆಯರಾಗ್ಲಿ, ನಿರ್ವಾಹಕರಾಗ್ಲಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಸುಚಿತ್ವವೂ ಇಲ್ಲದೇ, ಸರಿಯಾದ ನಿರ್ವಹಣೆ ಮಾಡದೇ ಇಲಾಖೆ ನಿರ್ಲಕ್ಷ್ಯ ತೋರ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.. ಈ ಸಂಬಂಧ ಇಲ್ಲಿನ ಕಾರ್ಯ ನಿರ್ವಾಹಕರನ್ನ ಪ್ರಶ್ನಿದ್ರೆ ಉತ್ತರ ಕೊಡೋಕ್ಕಾಗದೇ ಕಕ್ಕಾಬಿಕ್ಕಿಯಾಗಿ ನಿಲ್ತಾರೆ.

ಒಟ್ಟಾರೆ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸರ್ಕಾರ ಕೊಡೋ ಪುಕ್ಸಟ್ಟೆ ಆಹಾರ ಅಂತ ಭಾರತೀಯ ಆಹಾರ ನಿಗಮ ನಿರ್ಲಕ್ಷ್ಯವಹಿಸಿರಬೇಕು.ಈ ಆಹಾರ ಸೇವಿಸಿದ್ರೆ ಮಕ್ಕಳ, ಗರ್ಭಿಣಿಯರ ಗತಿ ಏನು ಹೇಳಿ.

 

LEAVE A REPLY

Please enter your comment!
Please enter your name here