Home District ಮಕ್ಕಳ್ಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್..?! ಖಾಸಗಿ ಶಾಲೆಗಳ ಶಿಕ್ಷಣ ದಂಧೆಗೆ ರಾಜ್ಯ...

ಮಕ್ಕಳ್ಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್..?! ಖಾಸಗಿ ಶಾಲೆಗಳ ಶಿಕ್ಷಣ ದಂಧೆಗೆ ರಾಜ್ಯ ಸರ್ಕಾರ ಕಡಿವಾಣ..?!

20254
0
SHARE

ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಅದ್ಕೊಂಡಿದ್ದ ಪೋಷಕರಿಗೆ ಸರ್ಕಾರ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ.. ಖಾಸಗಿ ಶಾಲೆಗಳ ಶಿಕ್ಷಣ ದಂಧೆಗೆ ಕಡಿವಾಣ ಹಾಕೋಕೆ ರಾಜ್ಯ ಸರ್ಕಾರ ಮುಂದಾಗಿದೆ…

ಈ ಸಂಬಂಧ 2018-19 ಸಾಲಿನ ಶೈಕ್ಷಣಿಕೆ ವರ್ಷದಿಂದಲೇ ಜಾರಿಗೆ ಬರುವಂತೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ನೀತಿ ಸಂಹಿತಿ ಮುಕ್ತಾಯವಾಗುತ್ತಿದ್ದಂತೆ ಆದೇಶ ಹೊರಡಿಸಲಿದ್ದಾರೆ…

ಈ ಮೂಲಕ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಹಾಗೂ ಮಕ್ಕಳ ವಾರ್ಷಿಕ ಶುಲ್ಕಕ್ಕೂ ಸರ್ಕಾರ ಕಡಿವಾಣ ಹಾಕಲಾಗುತ್ತೆ.. ಸಧ್ಯ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ನೀತಿ ಸಂಹಿತಿ ಇರೋದ್ರಿಂದ ಇದುವರೆಗೂ ಆದೇಶ ನೀಡಲು ಸಾಧ್ಯವಾಗಿಲ್ಲ…

ಹೀಗಾಗಿ ಮೇ 15 ರ ಬಳಿಕ ಆದೇಶ ಹೊರಡಿಸಲಿದ್ದು, ಈ ಬಾರಿಯ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ.. ಈ ಹಿಂದೆಯೇ ಖಾಸಗಿ ಶಾಲೆಗಳ ನಿಯಂತ್ರಣ ಕಾಯ್ದೆಯ ಬಗ್ಗೆ ಖಾಸಗಿ ಸಂಸ್ಥೆಯವರು ಕೆಲ ಅಕ್ಷೇಪಣೆಯನ್ನು ಸಲ್ಲಿಸಿದ್ರು, ಹೀಗಾಗಿ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಕೆಲ ಬೇಡಿಕೆಗಳನ್ನು ಇದರಲ್ಲಿ ಸರಿಪಡಿಸಲಾಗಿರುತ್ತೆ ಅಂತಾ ಕ್ಯಾಮ್ಸ್ ಶಶಿಕುಮಾರ್ ಹೇಳಿದ್ದಾರೆ…

LEAVE A REPLY

Please enter your comment!
Please enter your name here