Home Crime ಮಕ್ಕಳ ಕಿಡ್ನಾಪ್ ವದಂತಿ ದಿನೇ ದಿನೇ ತಾರಕಕ್ಕೆ ಏರುತ್ತಿರುವುರಿಂದ ಆತಂಕಕ್ಕೊಳಗಾದ ಹೆತ್ತವರು…ಸುಳ್ಳು ಮಾಹಿತಿ ಹರಡಿಸುವ ಕಿಡಿಗೇಡಿಗಳ...

ಮಕ್ಕಳ ಕಿಡ್ನಾಪ್ ವದಂತಿ ದಿನೇ ದಿನೇ ತಾರಕಕ್ಕೆ ಏರುತ್ತಿರುವುರಿಂದ ಆತಂಕಕ್ಕೊಳಗಾದ ಹೆತ್ತವರು…ಸುಳ್ಳು ಮಾಹಿತಿ ಹರಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ, ಪೊಲೀಸರ ಸ್ಪಷ್ಟನೆ.

1481
0
SHARE

ರಾಜ್ಯದ ಹಲವೆಡೆ ಮಕ್ಕಳ ಕಿಡ್ನಾಪ್ ವದಂತಿ ಜೋರಾಗೇ ಸದ್ದು ಮಾಡ್ತಿದೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಯಾರೇ ಅನುಮಾನದಿಂದ ಕಂಡರೂ ಅವರನ್ನ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗ್ತಿದೆ. ಇನ್ನು, ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ, ಇದೆಲ್ಲಾ ಸುಳ್ಳು, ಯಾವುದೇ ವದಂತಿಗಳಿಗೆ ಆತಂಕ ಬೇಡ ಎಂದಿದ್ದಾರೆ…ದಿನೇ, ದಿನೇ ಮಕ್ಕಳ ಅಪಹರಣ ವದಂತಿ ಜೋರಾಗಿದೆ. ರೀತಿಯ ವದಂತಿಗಳು ಹಬ್ಬತ್ತಿದ್ದು, ಹೆತ್ತ ಪಾಲಕರು ಅಪರಿಚಿತರನ್ನ ಕಂಡು ಆತಂಕಕ್ಕೊಳಗಾಗಿದ್ದಾರೆ. ಇದೀಗ, ಬಳ್ಳಾರಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಮಕ್ಕಳ ಕಳ್ಳತನ ಮಾಡಲಾಗುತ್ತಿದೆ ಎಂಬ ವದಂತಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.ಕಳೆದ 10 ದಿನಗಳಿಂದ ವಿವಿಧ ಗ್ರಾಮಗಳಲ್ಲಿ ಈ ವದಂತಿ ಹರಡಿದ್ದು, ಮಕ್ಕಳ ಹೆತ್ತ ಪಾಲಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ…ಇಲ್ಲಿನ ತಾಳೂರು ರಸ್ತೆಯಲ್ಲಿ ಅನುಮಾನವಾಗಿ ಕಂಡು ಬಂದ ಐವರನ್ನ ಸೆರೆ ಹಿಡಿದ ಗ್ರಾಮಸ್ಥರು ಮೂರು ತಾಸಿನವರೆಗೂ ಹೆಚ್ಚು ಕಾಲ ಕೂಡಿ ಹಾಕಿ ಪೊಲೀಸರಿಗೊಪ್ಪಿಸಿದ್ದಾರೆ. ಇನ್ನು, ಈ ವದಂತಿ ಕುರಿತು ಪ್ರತಿಕ್ರಿಯಿಸಿರುವ ಬಳ್ಳಾರಿ ಜಿಲ್ಲಾ ವರಿಷ್ಠಾಧಾಕಾರಿ ಅರುಣ್ ರಂಗರಾಜನ್, ಇಂತಹ ಸುಳ್ಳು ವದಂತಿಗಳನ್ನ ಹುಟ್ಟು ಹಾಕುವವರು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ…ಇನ್ನು, ಚಿತ್ರದುರ್ಗದಲ್ಲೂ ಈ ರೀತಿಯ ವದಂತಿಗಳನ್ನ ಹಬ್ಬಿಸಲಾಗಿದ್ದು, ಅಪರಿಚಿತರು ಹಾಗೂ ಆಗುಂತಕರನ್ನ ಕಂಡು ಜನಸಾಮಾನ್ಯರು ಭಯಭೀತರಾಗಿದ್ದಾರೆ. ನಿನ್ನೆ ರಾತ್ರಿ ಹೊಸದುರ್ಗ ಪಟ್ಟಣದ ವಡ್ಡರಹಟ್ಟಿ ಬಡಾವಣೆಯಲ್ಲಿ ಈ ವದಂತಿ ಹಬ್ಬಿದ್ದು, ಭಯಭೀತರಾದ ಜನ ಮನೆಗಳಿಗೆ ಬೀಗ ಹಾಕಿ ಮಚ್ಚು,ದೊಣ್ಣೆ, ಕಲ್ಲುಗಳನ್ನ ಹಿಡಿದು ರಾತ್ರಿಯಿಡೀ ಹುಡುಕಟದಲ್ಲಿದ್ದಾರೆ…ಇನ್ನು, ಈ ಮಕ್ಕಳ ಕಿಡ್ನಾಪ್ ಕೇಸ್ ವಾಣಿಜ್ಯನಗರಿ ಹುಬ್ಬಳ್ಳಿಗೂ ಕಾಲಿಟ್ಟಿದೆ. 20 ದಿನಗಳ ಹಿಂದೆ ಮಂಜುನಾಥ್ ಹಾಗೂ ಸವಿತಾ ದಂಪತಿಯ 9 ತಿಂಗಳ ಮಗುವನ್ನ ಅಪಹರಿಸಿ ತಲೆ ಹೊಂಭಾಗ ಕೊಯ್ದು ನರಕಿತ್ತುಕೊಳ್ಳಲಾಗಿದೆ ಅನ್ನೋ ಶಂಕೆ ಕೂಡಾ ವ್ಯಕ್ತವಾಗಿದೆ. ಅಲ್ಲದೇ, ಮಗು ತೀವ್ರ ಅಸ್ವಸ್ಥಗೊಂಡಿದ್ದು, ಮಗುವಿನ ತಲೆ ಸೇರಿದಂತೆ ದೇಹದ ವಿವಿಧ ಭಾಗದಲ್ಲಿ ಕೊಯ್ದ ಗುರುತುಗಳಿದ್ದ ಕಾರಣ ವಾಚಾಮಾರ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಪಾಲಕರ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿದೆ…ಕಲಬುರಗಿಯಲ್ಲೂ ಇದೇ ಆತಂಕ ಮೂಡಿದ್ದು, ಈ ಬಗ್ಗೆ ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇದೆಲ್ಲಾ ಕೇವಲ ಸುಳ್ಳು ಸುದ್ದಿ, ಇದರಿಂದ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಇಂತಹ ವದಂತಿಗಳನ್ನ ಹರಿಬಿಡುತ್ತಿರುವ ವ್ಯಕ್ತಿಗಳ ಮೇಲೆ ನಿಘಾ ಇಡಲಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಕಾನೂನು ಕೈಗೆತ್ತಿಕೊಳ್ಳಬಾರದೆಂದು ಮನವಿ ಮಾಡಿದೆ…ಒಟ್ನಲ್ಲಿ, ದಿನೇ ದಿನೇ ಹೆಚ್ಚಾಗುತ್ತಿರುವ ಸುಳ್ಳು ವದಂತಿಗಳಿಂದ ಜಿಲ್ಲೆಯ ಗ್ರಾಮಗಳಲ್ಲಿ ಸಾರ್ವಜನಿಕರು ರಾತ್ರಿ ಇಡೀ ನಿದ್ದೆ ಇಲ್ಲದೇ ಭಯಭೀತಗೊಂಡಿರುವುದು ಒಂದೆಡೆಯಾದ್ರೆ, ಚುನಾವಣಾ ಕಾರ್ಯ ಮುಗಿಸಿ ಈಗಷ್ಟೇ ವಿಶ್ರಾಂತಿ ದೊರೆತಿರುವ ಪೊಲೀಸ್ ಅಧಿಕಾರಿಗಳಿಗೆ ಇನ್ನೊಂದು ರೀತಿಯ ತಲೆನೋವು ಎದುರಾಗಿರುವುದಂತು ಸತ್ಯ…

LEAVE A REPLY

Please enter your comment!
Please enter your name here