Home Crime ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ಯಾ ಈ ಸಾರ್ವಜನಿಕ ಇಲಾಖೆ..?? ಆರ್,ಟಿ,ಇ ಅಡಿಯಲ್ಲಿ ಅರ್ಜಿಸಲ್ಲಿಸಿದ ಪೋಷಕರೆ ಹುಷಾರ್..!!!

ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ಯಾ ಈ ಸಾರ್ವಜನಿಕ ಇಲಾಖೆ..?? ಆರ್,ಟಿ,ಇ ಅಡಿಯಲ್ಲಿ ಅರ್ಜಿಸಲ್ಲಿಸಿದ ಪೋಷಕರೆ ಹುಷಾರ್..!!!

497
0
SHARE

ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡ್ತಿದೆ ಮಹಾ ಮೋಸ.. ಆರ್,ಟಿ,ಇ ಅಡಿಯಲ್ಲಿ ಅರ್ಜಿಸಲ್ಲಿಸಿದ ಪೋಷಕರೆ ಹುಷಾರ್.. ನೀವು ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ರೆ, ಗದಗನಲ್ಲಿ ಸೀಟ್ ಅಲರ್ಟ್.. ಆರ್,ಟಿ,ಇ ಈಗಾಗ್ಲೆ ಒಂದನೆ ಹಂತದ ಲಾಟ್ರಿ ಮುಗಿಸಿದೆ.. ಆದ್ರಲ್ಲೆ ಸಾಕಷ್ಟು ಲೋಪದೋಷಗಳಿವೆ.. ಇದನ್ನ ಮುಚ್ಚಾಕುವುದಕ್ಕೆ ಸಂಚ್ಚಾಕುತ್ತಿದ್ದಾರೆ ಆರ್,ಟಿ,ಇ ಅಧಿಕಾರಿಗಳು..

ಸಾರ್ವಜನಿಕ ಶಿಕ್ಷಣ ಇಲಾಖೆಯು ಬಡಮಕ್ಕಳಿಗೆ ಸಹಾಯ ಆಗ್ಲಿ ಅಂತಾ ಈ ಆರ್,ಟಿ,ಇ ತಂದ್ರು.. ಆರ್,ಟಿ,ಇ ಬಂದು ಆರು ವರ್ಷವಾದ್ರು ಇನ್ನೂ ಯಾವ ಸಮಸ್ಯಗಳು ಬಗೆ ಹರಿಯುತ್ತಲೆ ಇಲ್ಲಾ… ಇನ್ನೂ ಹೆಚ್ಚಾಗುತ್ತಲೆ ಇದೆ.. ಪೋಷಕರನ್ನು ಆತಂಕಕ್ಕೆ ಸಿಲುಕಿಸುತ್ತಿದೆ.. ಸಾಮಾನ್ಯವಾಗಿ ಎಲ್ಲಾ ಪೋಷಕರುಗಳು ಯೋಚನೆ ಮಾಡೊದು ಒಂದೆ ತರ..

ನಾವಾದ್ರು ಓದಲಿಲ್ಲಾ ನನ್ನ ಮಕ್ಕಳಾದ್ರು ಓದ್ಲಿ ಅಂತಾ.. ನಮ್ಮ ಮಕ್ಕಳುಗಳಿಗೆ ಒಳ್ಳೆ ಶಿಕ್ಷಣ ಕೊಡುಸ್ಬೇಕು ಅಂತಾ.. ಕಷ್ಟ ಪಟ್ಟು ಆರ್,ಟಿ,ಇ ನಲ್ಲಿ ಸೀಟ್ ಗಿಟ್ಟಿಸಿಕೊಂಡ ಪೋಷಕರು ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ರೆ, ಯಾದಗಿರಿ, ಗದಗದಲ್ಲಿ ಸೀಟ್ ಕೊಟ್ಟವ್ರೆ… ಗದಗದಲ್ಲಿ ಅರ್ಜಿಸಲ್ಲಿಸಿದವ್ರಿಗೆ ಬೆಂಗಳೂರಿನಲ್ಲಿ ಅಲರ್ಟ್ ಮಾಡವ್ರೆ.. ನಮ್ಮ ಬುದ್ದಿವಂತಾ ಶಿಕ್ಷಣ ಇಲಾಖೆಯ ಅಧಿಕಾರಿಗಳು…

 ಪಾಪ ಅಲ್ವೇನ್ರಿ ಏನೊ ಆಸೆ ಇಟ್ಕೊಂಡು ಆರ್,ಟಿ,ಇ ನಲ್ಲಿ ಸೀಟ್ ಸಿಕ್ರೆ ಸಾಕಪ್ಪ ನೆಮ್ಮದಿಯಾಗಿ ಜೀವನ ಮಾಡಬಹುದು ಅಂತಾ ಆರ್,ಟಿ,ಇ ಗೆ ಅರ್ಜಿ ಅಲ್ಲಿಸ್ತಾರೆ.. ಮಕ್ಕಳು ನಾವಿಲ್ಲಾ ಅಂದ್ರು ಬೇಗ ಬಂದ್ದು ಮನೆ ಸೇರಿಕೊಳ್ಳಿ ಅಂತಾ ಹತ್ತಿರದ ಸ್ಕೂಲ್ ನೆ ಆಯ್ಕೆ ಮಾಡ್ತಾರೆ.. ಆದ್ರೆ ಹತ್ತಿರದ ಸ್ಕೂಲ್ ಇರ್ಲಿ, ಬೆಂಗಳೂರಲಿರೊ ಸ್ಕೂಲ್ ನೂ ಅಲರ್ಟ್ ಮಾಡದೆ..

ಗದಗ, ಬೀದರ್, ಯಾದಗಿರಿಗೆ ಅಲರ್ಟ್ ಮಾಡಿದ್ದಾರೆ.. ಹೀಗೆ 87 ಜನಕ್ಕೆ ಮೋಸ ಆಗಿದೆ.. ಎಲ್ಲೊ ಅರ್ಜಿ ಸಲ್ಲಿಸಿದ್ರೆ.. ಅದೆಲ್ಲೊ ಸೀಟ್ ಕೊಟ್ಟಿದ್ದಾರೆ.. ಪಾಪ ಬಡ ಪೋಷಕರು, ಮಕ್ಕಳಿಗಾಗಿ ಅಷ್ಟು ದೂರ ಹೋಗಿ ವಾಸ ಮಾಡಕಾಗುತ್ತಾ.. ಇನ್ನೂ ಈ ಬಗ್ಗೆ ಸರ್ವಜನಿಕ ಶಿಕ್ಷಣ ಇಲಾಖೆಯವರನ್ನ ಕೇಳುದ್ರೆ ಹು ನೋಡ್ತೀವಿ.. ಅಲ್ಲಿಗ್ ಹೋಗ್ರಿ.. ಇಲ್ಲಿಗ್ ಹೋಗ್ರಿ ಅಂತಾ ಸುತ್ತಾಡುಸ್ತಿದ್ದಾರಂತ್ತೆ.. ಇನ್ನೂ ಮಕ್ಕಳಿಗಾಗಿ ಅವರೇಳಿದ ಕಡೆ ಎಲ್ಲಾ ಕೆಲಸ ಬಿಟ್ಟು 4-5 ದಿನಗಳಿಂದ ಅಲಿಯುತ್ತಿರೊ ಪೋಷಕರು ಬೇಸತ್ತಿದ್ದಾರೆ..

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳಿದ ಹಾಗೆ ಈ ಸಮಸ್ಯೆ ಬಗೆಹರಿದ್ರೆ ಸಾಕು.. ಆದ್ರೆ ಬೀಸೊ ದೊಣ್ಣೆ ಇಂದ ತಪ್ಪಿಸಿಕೊಳ್ಳುವ ಹಾಗೆ ಆಗಬಾರದಷ್ಟೆ.. ಇನ್ನು 1 ತಿಂಗಳಿಲ್ಲಿ ಎಲ್ಲಾ ಸ್ಕೂಲ್ ಗಳಲ್ಲಿ ಅಡ್ಮಿಷನ್ ಕ್ಲೂಸ್ ಆಗಲಿದೆ.. ಈ ಆರ್,ಟಿ,ಇ ಮಾಡಿರುವ ಯಡವಟ್ಟಿಂದ ಪೋಷಕರು ಆತಂಕಕ್ಕೆ ಸಿಲುಕಿದ್ದಾರೆ.. ಇನ್ನಾದ್ರು ಈ ಆರ್,ಟಿ,ಇ ಎಚ್ಚೆತ್ಕೊಂಡು ಮಕ್ಕಳ ಭವಿಷ್ಯ ಉಳಿಸಬೇಕಿದೆ..

LEAVE A REPLY

Please enter your comment!
Please enter your name here