Home District ಮಗನನ್ನ ಗೆಲ್ಲಿಸಲು 4 ಕ್ಷೇತ್ರಗಳನ್ನ ಬಲಿಕೊಟ್ಟರೇ BSY.!? ರಾಘವೆಂದ್ರರನ್ನ ಗೆಲ್ಲಿಸಿ ಉಳಿಸಿಕೊಂಡಿದ್ದಾರೆ ಸ್ವಕ್ಷೇತ್ರ.!

ಮಗನನ್ನ ಗೆಲ್ಲಿಸಲು 4 ಕ್ಷೇತ್ರಗಳನ್ನ ಬಲಿಕೊಟ್ಟರೇ BSY.!? ರಾಘವೆಂದ್ರರನ್ನ ಗೆಲ್ಲಿಸಿ ಉಳಿಸಿಕೊಂಡಿದ್ದಾರೆ ಸ್ವಕ್ಷೇತ್ರ.!

518
0
SHARE

ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಬಿಟ್ರೆ ಬೇರೆ ಗತಿ ಇಲ್ವ… ಹೀಗೊಂದು ಪ್ರಶ್ನೆ ಎಲ್ಲರಲ್ಲೂ ಕಾಡಲು ಶುರುವಾಗಿದೆ. ಅಂದ ಹಾಗೆ ಈ ಪ್ರಶ್ನೆ ಉದ್ಭವಿಸಲು ಕಾರಣವಾಗಿರೋದು ಇದೇ ಬೈ ಎಲೆಕ್ಷನ್ ಅನ್ನಲು ಅಡ್ಡಿ ಇಲ್ಲ. ಏಕೆಂದ್ರೆ ಈ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ತಮ್ಮ ಸ್ವಕ್ಷೇತ್ರದಲ್ಲಿ ಗೆದ್ದಿದ್ದು ಬಿಟ್ರೆ ಬೇರೆ ಎಲ್ಲು ಕಮಾಲ್ ಮಾಡಲು ಸಾಧ್ಯವೇ ಆಗಲಿಲ್ಲ.

ಅಷ್ಟೆ ಅಲ್ಲ ಬಳ್ಳಾರಿಯಲ್ಲಿ ಹೀನಾಯವಾಗಿ ಸೋತಿದ್ದಾರೆ, ಅಲ್ಲಿಗೆ ಬಿಜೆಪಿ ಪಾಲಿಗೆ ಯಡಿಯೂರಪ್ಪರೇ ಫೈನಲ್ ಎನ್ನುವಂತಾಗಿದೆ.ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಹಲವು ದಿನಗಳಿಂದ ಕೇಳಿಬರುತ್ತಿರುವ ಮಾತು. ಉಪ ಚುನಾವಣೆ ಫಲಿತಾಂಶದ ಬಳಿಕ ಈ ಮಾತು ಪುನಃ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಲಿಗೆ ರಾಜ್ಯ ನಾಯಕರು ಕಾರಣ ಎಂದು ಲೋಕಸಭೆ, ವಿಧಾನಸಭಾ ಕ್ಷೇತ್ರದ ನಾಯಕರು ಆರೋಪ ಮಾಡುತ್ತಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಗೆಲುವಿನ ಅಂತರ 52 ಸಾವಿರ ಮಾತ್ರ. ಜಮಖಂಡಿಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಸೋತರು. ಬಳ್ಳಾರಿಯಲ್ಲಿ ಬಿಜೆಪಿ ನಾಯಕರ ಪ್ರತಿಷ್ಠೆ ಮಣ್ಣುಪಾಲಾಯಿತು. ರಾಮನಗರದಲ್ಲಿನ ಸೋಲಿಗೆ ರಾಜ್ಯ ನಾಯಕರೇ ಕಾರಣ’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಆರೋಪಿಸಿದ್ದಾರೆ., ಚುನಾವಣೆಗೆ ಎರಡು ದಿನ ಇರುವಾಗ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದರು.

ಇದರಿಂದಾಗಿ ಪಕ್ಷದ ನಾಯಕರು ತೀವ್ರ ಮುಜುಗರ ಅನುಭವಿಸಿದರು.ಅಭ್ಯರ್ಥಿ ಆಯ್ಕೆ, ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ನಾಯಕರಿಗೆ ಸರಿಯಾದ ಮಾಹಿತಿಯೇ ಇರಲಿಲ್ಲ ಎಂಬುದು ಸಾಬೀತಾಯಿತು. ಇದರಿಂದಾಗಿ ಕ್ಷೇತ್ರವನ್ನು ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟಕ್ಕೆ ಬಿಟ್ಟುಕೊಡಬೇಕಾಯಿತು. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಶಾಸಕ ಶ್ರೀರಾಮುಲು ಸಹೋದರಿ ಜೆ.ಶಾಂತರನ್ನ ಗೆಲ್ಲಿಸಲು ಏಕಾಂಗಿಯಾಗಿ ಹೋರಾಟ ನಡೆಸಿದರು.

ಕಾಂಗ್ರೆಸ್ ಸಚಿವರು, ಶಾಸಕರು, ಸಂಸದರು ಸೇರಿ 52 ಜನರ ತಂಡವನ್ನು ಪ್ರಚಾರಕ್ಕಾಗಿ ಬಳ್ಳಾರಿಗೆ ಕರೆತಂದಿತ್ತು. ಆದರೆ, ಬಿಜೆಪಿಯ ರಾಜ್ಯ ನಾಯಕರು ಅತ್ತ ಸುಳಿಯಲಿಲ್ಲ. ಪಕ್ಷದ ಪರವಾಗಿ ಮತಯಾಚನೆ ಮಾಡಲಿಲ್ಲ.. ಶ್ರೀ ರಾಮುಲು ಒಂಟಿಯಾಗಿ ಹೋರಾಡ ಬೇಕಾಯಿತು. ಇಡೀ ದೋಸ್ತಿ ಸರ್ಕಾರವೇ ಬಳ್ಳಾರಿಯಲ್ಲಿ ಬೀಡು ಬಿಟ್ಟು ಗೆಲುವಿಗೆ ಶ್ರಮಿಸಿತ್ತು, ಆದ್ರೆ ಬಿಜೆಪಿ ನಾಯಕರು ತಮಗು ಅದಕ್ಕೂ ಸಂಬಂಧ ಇಲ್ಲ ಅನ್ನೋ ರೀತಿ ವರ್ತಿಸಿದ್ರು,

ಅಲ್ಲಿದೆ ಬಳ್ಳಾರಿ ಕಾಂಗ್ರೆಸ್ ಪಾಲಾಯಿತು.ಕಳೆದ 2 ಚುನಾವಣೆಯಲ್ಲಿ ಜಮಖಂಡಿಯಲ್ಲಿ ಸೋತಿದ್ದ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಬಿಜೆಪಿ ನಾಯಕರಿಂದಾಗಿಯೇ ಅವರು ಸೋಲುಕಂಡಿದ್ದಾರೆ. ಶ್ರೀಕಾಂತ್ ಕುಲಕರ್ಣಿ ಅವರನ್ನು ಏಕಾಂಗಿಯಾಗಿ ಮಾಡಲಾಯಿತು. ಕ್ಷೇತ್ರದ ಉಸ್ತುವಾರಿ ನೀಡಿದ್ದ ನಾಯಕರೇ ಪ್ರಚಾರ ಮಾಡಲು ಆಸಕ್ತಿ ತೋರಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಮೇಲಿದ್ದ ಅನುಕಂಪದ ಅಲೆಯನ್ನು ತಪ್ಪಿಸಲು ಬೇಕಾದ ತಂತ್ರವನ್ನು ರೂಪಿಸಲಿಲ್ಲ. ಸ್ವತಃ ಕೆಲವು ಬಿಜೆಪಿ ನಾಯಕರೇ ಒಪ್ಪಿಕೊಳ್ಳುವ ಪ್ರಕಾರ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಇದೆ.

ಎಲ್ಲರೂ ಒಂದಾಗಿ ಮೈತ್ರಿ ಸರ್ಕಾರದ ವಿರುದ್ಧವಾಗಿ ಹೋರಾಟ ಮಾಡಬೇಕು, ಚುನಾವಣೆಯಲ್ಲಿ ರಣೋತ್ಸಾಹದಿಂದ ಕೆಲಸ ಮಾಡಬೇಕು. ಆದರೆ, ಅದು ಕಾಣುತ್ತಿಲ್ಲ. ಯಾವ ನಾಯಕರು ಸಹ ಜವಾಬ್ದಾರಿಗಳನ್ನು ತೆಗೆದುಕೊಂಡು ಕೆಲಸ ಮಾಡಲು ಸಿದ್ಧರಿಲ್ಲ. ಇದರಿಂದಾಗಿ ಉಪ ಚುನಾವಣೆಯಲ್ಲಿ ಸೋಲಾಗಿದೆ. ಅಂತಾ ಹೇಳಲಾಗುತ್ತಿದೆ.ಹಾಗೆ ನೋಡಿದ್ರೆ ರಾಜ್ಯ ಬಿಜೆಪಿಯಲ್ಲಿ ಸಂಘಟನಾ ಶಕ್ತಿಯೇ ಸತ್ತು ಹೋಗಿದೆ, ಮೋದಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದು ಬಿಟ್ಟರೇ ಇಲ್ಲಿನ ನಾಯಕರಿಗೆ ಬೇರೆ ಏನು ಗೊತ್ತೇ ಇಲ್ಲ.

ಈ ಎಲ್ಲವನ್ನು ನೋಡಿದ್ರೆ ಮಗನನ್ನ ಗೆಲ್ಲಿಸಲು ನಾಲ್ಕು ಕ್ಷೇತ್ರಗಳನ್ನ ಯಡಿಯೂರಪ್ಪ ಬಲಿ ಕೊಟ್ಟರೇ ಎನ್ನು ಸಣ್ಣ ಅನುಮಾನವೂ ಕಾಡಾದೇ ಇರಲ್ಲ.ಒಟ್ಟಾರೆ ರಾಜ್ಯ ಬಿಜೆಪಿ ಪಾಲಿಗೆ ಯಡಿಯೂರಪ್ಪ ಬಿಟ್ರೆ ಬೇರೆ ಗತಿ ಇಲ್ಲ. ಹೈ ಕಮಾಂಡ್ ಗೆ ಯಡಿಯೂರಪ್ಪ ನಾಯಕತ್ವ ಬದಲಾಯಿಸಬೇಕು ಅನ್ನೋ ಮನಸ್ಸಿದ್ರು, ಅವರ ನಿರ್ವಾತ ಸ್ಥಾನ ತುಂಬ ಬಲ್ಲ ಇನ್ನೊಬ್ಬ ನಾಯಕರೇ ಇಲ್ಲ. ಹೀಗಿದ್ದಾಗ ರಾಜ್ಯ ಬಿಜೆಪಿ ಪಾಡು ಅಯ್ಯೋ ಪಾಪ ಅನ್ನದೇ ವಿಧಿ ಇಲ್ಲ. ಮುಂದಿನ ದಿನದಲ್ಲಾದ್ರು ಬಿಜೆಪಿ ಸಂಘಟಿತವಾಗುತ್ತಾ? ಶಿಸ್ತಿನ ಪಕ್ಷದಲ್ಲಿ ತಾಂಡವವಾಡುತ್ತಿರೋ ಅಶಿಸ್ತು ಹೋಗಿ ಮತ್ತೆ ಶಿಸ್ತು ಬರುತ್ತಾ. ಆ ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು.

LEAVE A REPLY

Please enter your comment!
Please enter your name here