Home Crime ಮಗನ ಎದುರಿಗೆ ನಡೆದಿತ್ತು ಆಕೆಯ ಮಾನಭಂಗ..! ಅತ್ತಿಗೆಯ ಅತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಗೆಳೆಯ..! ಕತ್ತಲೆಯಲ್ಲಿ...

ಮಗನ ಎದುರಿಗೆ ನಡೆದಿತ್ತು ಆಕೆಯ ಮಾನಭಂಗ..! ಅತ್ತಿಗೆಯ ಅತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಗೆಳೆಯ..! ಕತ್ತಲೆಯಲ್ಲಿ ಕಳೆದು ಹೋಗಿತ್ತು ಗೃಹಿಣಿಯ ಮಾನ ಕಾಮಾಂಧರ ಕ್ರೌರ್ಯಕ್ಕೆ ಹಾರಿಯೋಯ್ತು ಜೀವ..!

4254
0
SHARE

ಇವನ ಮುಖವನ್ನ ನೋಡಿದ್ರೆ ಗೊತ್ತಾಗುತ್ತೆ ಈ ವ್ಯಕ್ತಿ ಸರಿಯಿಲ್ಲ ಅನ್ನೋದು. ಮುಖದಲ್ಲೇ ಅಷ್ಟೊಂದು ಅಸಹ್ಯ ಮತ್ತು ಕ್ರೌರ್ಯವನ್ನ ತುಂಬಿಕೊಂಡಿರೋ ವ್ಯಕ್ತಿಯಿತ. ಅಲ್ಲಿ ಇಲ್ಲಿ ಕೂಲಿ ಮಾಡಿಕೊಂಡು ಬದುಕೋ ಇವನಿಗೆ ತಾಯಿ ಸಮನಾದ ತನ್ನ ಅತ್ತಿಗೆ ಮೇಲೆ ಕಣ್ಣು ಬಿದ್ದಿತ್ತು. ಹೇಗಾದ್ರು ಮಾಡಿ ಆಕೆಯ ಜೊತೆ ಮಲಗಿ ಸುಖಪಡಬೇಕು ಅಂತ ಹಗಲುಗನಸು ಕಾಣೋದಕ್ಕೆ ಶುರುಮಾಡಿದ್ದ. ಆದ್ರೆ ಅದು ಅಷ್ಟು ಈಸಿಯಾಗಿರಲಿಲ್ಲ. ಅದು ಆಗೋದಿಲ್ಲ ಅಂತ ಅವನು ಕನಸನ್ನ ಕಾಣೋದನ್ನು ಬಿಟ್ಟಿರಲಿಲ್ಲ. ಇದೇ ಸಮಯಕ್ಕೆ ಅವನಿಗೆ ಜೊತೆಯಾಗಿದ್ದು ಅವನ ಮತ್ತೊಬ್ಬ ಮನೆ ಹಾಳು ಸ್ನೇಹಿತ ಮಾಳಪ್ಪ ಗುಡಿಮನಿ. ಕಂತೆಗೆ ತಕ್ಕ ಬೊಂತೆ ಅನ್ನೋ ಹಾಗೆ ಇವನು ಶಿವಪ್ಪ ರೀತಿಯೇ ಮನೆಹಾಳು ಕೆಲಸ ಮಾಡೋದ್ರಲ್ಲಿ ಫೇಮಸ್.

ಇವರಿಬ್ಬರು ಅದೆಂತಹ ವಿಕೃತ ಕಾಮಿಗಳು ಅಂದ್ರೆ ರಸ್ತೆಯಲ್ಲಿ ಒಂಟಿಯಾಗಿ ಹೆಣ್ಣು ನಾಯಿಗಳು ಇವರ ಎದುರಿಗೆ ಓಡಾಡೋದಿಲ್ಲ ನೋಡಿ ಅಷ್ಟೊಂದು ಕಾಮಾಂಧರು ಇವರಿಬ್ಬರು. ತಾವಾಯ್ತು ತಮ್ಮ ಕೂಲಿ ಕೆಲಸವಾಯ್ತು ಅಂತ ಇದ್ದಿದ್ರೆ ಕೊನೆಪಕ್ಷ ತಲೆ ಎತ್ತಿಕೊಂಡು ಮರ್ಯಾದೆಯಿಂದ ನಾಲ್ಕು ಜನರ ನಡುವೆ ಬದುಕಬಹುದಿತ್ತು. ಆದ್ರೆ ಇವರಿಬ್ಬರು ಹಾಗಲ್ಲ ಹೆಣ್ಣು ಅಂತ ಕಂಡ್ರೆ ಸಾಕು ಜೊಲ್ಲು ಸುರಿಸಿಕೊಂಡು ಓಡಾಡ್ತಿದ್ರು. ಅದ್ರಲ್ಲೂ ಏನಾದ್ರು ಇವರಿಬ್ಬರು ಕುಡಿದು ಬಿಟ್ರೆ ಅದರ ಕಥೆಯೇ ಮುಗಿದು ಹೋಗ್ತಿತ್ತು. ತಾವಿಬ್ರು ಅದೇನು ಮಾಡ್ತಿದ್ದೀವಿ ಅನ್ನೋದು ಅವರಿಗೆ ಗೊತ್ತೇ ಆಗ್ತಿರಲಿಲ್ಲ. ಇಂತಹ ಬೀದಿ ಕಾಮಣ್ಣರ ಕಣ್ಣಿಗೆ ಬಿದ್ದವಳೇ ಈ ಶಂಕರಮ್ಮ ಅಲಿಯಾಸ್ ಸರಸ್ವತಿ.ಶಂಕರಮ್ಮ ಬೇರೆ ಯಾರು ಅಲ್ಲ.

ಶಿವಪ್ಪನ ದೊಡ್ಡಪ್ಪನ ಮಗ ಪ್ರಭು ಛಲವಾದಿಯ ಪತ್ನಿ. ಪ್ರಭು ಜೊತೆ ಸರಸ್ವತಿಗೆ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ನಂತ್ರ ಆಕೆ ಪ್ರಭುವಿನ ಊರಾದ ತಾಳಿಕೋಟೆಯ ಗುಂಡಕನಾಳ ಗ್ರಾಮಕ್ಕೆ ಬಂದಿದ್ಲು. ತಾನಾಯ್ತು ತನ್ನ ಕೆಲಸವಾಯ್ತು ಅಂತ ಆಕೆ ಸಂಸಾರವನ್ನ ನಡೆಸ್ತಿದ್ಲು. ಗಂಡನಿಗೆ ವಿಪರೀತ ಬಡತನ ಹಾಗಾಗಿ ಆಕೆ ಕೂಡಾ ಕೂಲಿ ಕೆಲಸ ಮಾಡ್ಕೊಂಡು ಗಂಡನ ಹೊರೆಯನ್ನ ತಗ್ಗಿಸ್ತಿದ್ಲು. ಇವರಿಬ್ಬರಿಗೆ ಮೂವರು ಜನ ಮಕ್ಕಳಿದ್ದಾರೆ. ಮನೆಯಲ್ಲಿ ಬಡತನವಿದ್ರು ಅವರ ನೆಮ್ಮದಿಗೆ ಮಾತ್ರ ಬಡತನವಿರಲಿಲ್ಲ. ಹಾಗೆ ಇದ್ದುದ್ದರಲ್ಲೇ ಸಂಸಾರವನ್ನ ನಡೆಸಿಕೊಂಡು ಹೋಗ್ತಿದ್ರು.

ಹೀಗಾಗಿಯೇ ಸುಖವಾಗಿ ಬದುಕ್ತಿದ್ರು.ಇದೇ ಶಂಕರಮ್ಮಳ ಮೇಲೆ ಈ ಶಿವಪ್ಪನಿಗೆ ಕಣ್ಣು ಬಿದ್ದುಬಿಟ್ಟಿತ್ತು. ಹೇಗಾದ್ರು ಮಾಡಿ ಆಕೆಯನ್ನ ಪಟಾಯಿಸಿಕೊಂಡು ಆಕೆಯ ಜೊತೆ ತನ್ನ ಆಸೆಯನ್ನ ಪೂರೈಸಿಕೊಳ್ಳಬೇಕು ಅಂತ ಅಂದುಕೊಂಡಿದ್ದ. ಒಂದಷ್ಟು ದಿನ ಮನಸ್ಸಲ್ಲೇ ಲೆಕ್ಕ ಹಾಕಿದ ಆತ ಕೊನೆಗೆ ಆಕೆಯನ್ನೇ ನೇರವಾಗಿ ಕೇಳಿದ್ದ. ಆಗ ಆಕೆ ಆತನ ಮುಖಕ್ಕೆ ಥುಪುಕ್ ಅಂತ ಉಗಿದಿದ್ಲು. ನಿನಗೆ ನಾನು ಅತ್ತಿಗೆಯಾಗಬೇಕು ಹಾಗೆಲ್ಲಾ ಮಾತನಾಡೋದಿರಲಿ ಹಾಗೆ ಯೋಚನೆಯನ್ನೇ ಮಾಡಬಾರದು ಅಂತ ಒಂದಿಷ್ಟು ಬುದ್ಧಿಯನ್ನ ಹೇಳಿ ಕಳುಹಿಸಿದ್ಲು. ಈ ಮಾತನ್ನ ಕೇಳಿ ಆತನಿಗೆ ನಿರಾಸೆಯಾಗಿತ್ತು. ಇವಳು ಹೀಗೆ ಹೇಳ್ತಾಳೆ ಅಂತ ಅಂದುಕೊಂಡಿರಲಿಲ್ಲ.

ನಾನು ಬೀಸಿದ ಬಲೆಗೆ ಇವಳು ಬೀಳ್ತಾಳೆ ಅಂತ ಅಂದುಕೊಂಡಿದ್ದೆ ಅಂತ ಹ್ಯಾಪು ಮೊರೆ ಹಾಕ್ಕೊಂಡು ಬಂದಿದ್ದ.ಆದ್ರೆ ಆಕೆ ತನ್ನ ಬಯಕೆಯನ್ನ ಒಪ್ಪಿಕೊಳ್ಳಲಿಲ್ಲ ಅಂತ ತುಂಬಾ ಡಿಸ್ಟರ್ಬ್ ಆಗಿದ್ದ. ಹಾಗಂತ ತನ್ನ ದುಷ್ಟ ಯೋಚನೆಯನ್ನ ಆತ ಕೈಬಿಟ್ಟಿರಲಿಲ್ಲ. ಹೇಗಾದ್ರೂ ಮಾಡಿ ತನ್ನ ಆಸೆಯನ್ನ ಈಡೇರಿಸಿಕೊಳ್ಳಲೇಬೇಕು ಅಂತ ತೀರ್ಮಾನಿಸಿದ್ದ. ಇವತ್ತಲ್ಲ ನಾಳೆ ಆಕೆಯೊಂದಿಗೆ ನನ್ನ ಬಯಕೆ ಪೂರೈಸಿಕೊಳ್ಳದಿದ್ರೆ ನಾನು ಶಿವಪ್ಪ ಛಲವಾದಿನೇ ಅಲ್ಲ ಅಂತ ಆತ ಶಪಥ ಮಾಡಿದ್ದ. ಇತ್ತ ಆಕೆ ಶಿವಪ್ಪ ಮಾಡಿದ ಕೆಲಸವನ್ನ ತನ್ನ ಗಂಡನಿಗೆ ಹೇಳಿದ್ಲು. ನಿಮ್ಮ ತಮ್ಮ ನನ್ನ ಹತ್ತಿರ ಕೆಟ್ಟದಾಗಿ ನಡ್ಕೊಂಡಿದ್ದಾನೆ. ಅವನಿಗೆ ಬುದ್ಧಿ ಹೇಳಿ ಅಂತ ಹೇಳಿದ್ಲು.

ಆದ್ರೆ ತಮ್ಮ ಅತ್ತಿಗೆಯ ಬಗ್ಗೆ ಈ ರೀತಿಯಾಗಿ ಯೋಚನೆ ಮಾಡಿರೋದಿಲ್ಲ ಅಂತ ಆತ ಅಂದುಕೊಂಡಿದ್ದ. ಹೀಗಾಗಿ ಆಕೆ ಹೇಳಿದ್ದನ್ನ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಅದೇ ನೋಡಿ ಆತ ಮಾಡಿದ ತಪ್ಪಾಗಿತ್ತು. ಅವತ್ತು ಶಿವಪ್ಪನನ್ನ ಪ್ರಭು ಸರಿಯಾಗಿ ಝಾಡಿಸಿದ್ರೆ ಇವತ್ತು ಇಂತಹದ್ದೊಂದು ಅನಾಹುತ ನಡೆಯುತ್ತಿರಲಿಲ್ಲ. ತಮ್ಮ ಮೇಲಿನ ನಂಬಿಕೆ ಮುಂದೊಂದು ದಿನ ಅನಾಹುತಕ್ಕೆ ನಾಂದಿಯಾಗುತ್ತೆ ಅನ್ನೋದು ಅವನಿಗೂ ಗೊತ್ತಿರಲಿಲ್ಲ.ಪ್ರಭು ಅದ್ಯಾವಾಗ ಈ ವಿಷಯವನ್ನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲವೋ ಆಗ ಶಂಕರಮ್ಮ ಕೂಡಾ ಆ ವಿಷಯವನ್ನ ಮತ್ತೆ ಗಂಡನ ಹತ್ತಿರ ಪ್ರಸ್ತಾಪ ಮಾಡಲಿಲ್ಲ.

ಯಾಕಂದ್ರೆ ಒಮ್ಮೆ ಬುದ್ಧಿ ಹೇಳಿದ ಕಾರಣ ಇನ್ನು ಆ ರೀತಿ ನಡೆದುಕೊಳ್ಳೋದಿಲ್ಲ ಅಂತ ಆಕೆ ಅಂದುಕೊಂಡಿದ್ಲು. ಅಲ್ಲದೆ ಇನ್ನೊಮ್ಮೆ ನನ್ನ ಹತ್ತಿರ ಬಂದ್ರೆ ಅದಕ್ಕೆ ಸರಿಯಾಗಿ ಬುದ್ಧಿ ಕಲಿಸೋಣ ಅಂತ ಅಂದುಕೊಂಡಿದ್ಲು. ಅಲ್ಲದೆ ಇನ್ನೊಮ್ಮೆ ಅಂತಹ ಯೋಚನೆ ಬಂದ್ರೆ ಕಾಲಲ್ಲಿರೋ ಕೆರ ಎತ್ಕೊಳ್ಳೋಣ ಅಂತ ಆಕೆಯ ಯೋಚನೆಯಾಗಿತ್ತು.ಇವನದ್ದು ಹೆಸರು ಮಾತ್ರ ದೇವರದ್ದು ಆದ್ರೆ ಕೆಲಸವೆಲ್ಲಾ ರಾಕ್ಷಸರದ್ದು. ಅವತ್ತು ಶಂಕರಮ್ಮ ಉಗಿದು ಉಪ್ಪಿನಕಾಯಿ ಹಾಕಿದ ಮೇಲೆ ಆತ ಸುಮ್ಮನಿದ್ದಿದ್ರೆ ಎಲ್ಲಾ ಸರಿಯಾಗ್ತಿತ್ತು. ಆದ್ರೆ ಅವನ ತಲೆಯಲ್ಲಿ ಯಾವುದು ಒಳ್ಳೆಯ ಯೋಚನೆಗಳ ಹೊಳಿತಾ ಇರಲಿಲ್ಲ. ಆ ಮೂರು ಮಕ್ಕಳ ತಾಯಿಯನ್ನ ಹೇಗಾದ್ರು ಮಾಡಿ ಬುಟ್ಟಿಗೆ ಹಾಕಿಕೊಳ್ಳಬೇಕು ಅಂತ ಯೋಚನೆ ಮಾಡೋದಕ್ಕೆ ಶುರುಮಾಡಿದ.

ಆದ್ರೆ ದಿನಗಳು ಕಳೆಯಿತು ಬಿಟ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಸುಮ್ಮನಿದ್ರೆ ಇನ್ನು ಕೆಲಸ ಆಗೋದಿಲ್ಲ ಅಂತ ಯೋಚಿಸಿದ್ದ. ಆಗ ಈ ವಿಷಯವನ್ನ ಆತ ತನ್ನ ಸ್ನೇಹಿತ ಮಾಳಪ್ಪ ಗುಜಿಮನಿಗೆ ಹೇಳಿದ್ದ.ಮಾಳಪ್ಪ ಗುಡಿಮನಿ ಕೂಡಾ ಇವನ ಹಾಗೆಯೇ ಯಾರದ್ದಾದ್ರು ಮನೆ ಮುರಿಯೋ ಕೆಲಸವಿದ್ರೆ ಅದನ್ನ ಇವನು ಚೆನ್ನಾಗಿಯೇ ಮಾಡ್ತಾನೆ. ಅವನಿಗೆ ನಡಿಯೋ ಅದೇನಾಗ್ತೈತಿ ನೋಡನಾ ನಾನು ಕುಟೆ ಬರ್ತೀನಿ ಅಂತ ಸ್ನೇಹಿತ ಹಲ್ಕಾ ಕೆಲಸಕ್ಕೆ ಅವನು ಸಾಥ್ ನೀಡಿದ್ದ. ಅದ್ರಲ್ಲೂ ಇಬ್ಬರು ಸೇರಿ ಮಜಾ ಮಾಡೋಣ ಅಂತ ಹೇಳಿದ್ನಲ್ಲಿ ಆಗ ಅವನ ಒಳಗಿದ್ದ ಕಾಮದ ಕುದುರೆ ಕೆನೆಯೋದಕ್ಕೆ ಶುರುಮಾಡಿತ್ತು. ಆಗ ಇಬ್ಬರು ಯಾವಾಗ ಈ ಕೆಲಸವನ್ನ ಮಾಡಬೇಕು ಅಂತ ಪ್ಲಾನ್ ಮಾಡೋದಕ್ಕೆ ಶುರುಮಾಡಿದ್ರು. ಅದ್ಯಾವಾಗ ಇಬ್ಬರು ಒಟ್ಟಿಗೆ ಸೇರಿದ್ರೋ ಆಗ ದಿನಪೂರ್ತಿ ಇದೇ ವಿಚಾರವನ್ನ ಮಾತನಾಡೋದಕ್ಕೆ ಶುರುಮಾಡಿದ್ರು.

ಹೀಗೆ ಅತ್ತ ಅವರಿಬ್ಬರು ಹೇಗೆ ಇವಳನ್ನ ನಾವು ದಕ್ಕಿಸಿಕೊಳ್ಳೋದು ಅಂತ ಯೋಚನೆ ಮಾಡ್ತಾ ಪ್ರತಿ ದಿನ ಅವರ ಮನೆಯ ಹತ್ತಿರ ಬಂದು ಹೋಗೋದಕ್ಕೆ ಶುರುಮಾಡಿದ್ರು. ಆಗ ಅವರಿಗೆ ಆ ಮನೆಗೆ ಕಿಟಕಿ ಬಾಗಿಲುಗಳು ಇಲ್ಲದಿರೋದು ಕಂಡುಬಂದಿತ್ತು. ಆದ್ರೆ ಮನೆಯಲ್ಲಿ ಗಂಡ ಇರ್ತಾನಲ್ವಾ ಹಾಗಾಗಿ ಅಲ್ಲಿಗೆ ಹೋಗೋದಕ್ಕೆ ಆಗೋದಿಲ್ಲ ಅಂತ ಸುಮ್ಮನಾಗಿದ್ರು. ಆದ್ರೆ ಇವತ್ತಲ್ಲ ನಾಳೆ ಅಂತಹ ಛಾನ್ಸ್ ಸಿಗುತ್ತೆ ಆಗ ಆಕೆಯನ್ನ ಮಜಾ ಮಾಡಬಹುದು ಅಂತ ದಿನ ಲೆಕ್ಕ ಹಾಕೋದಕ್ಕೆ ಶುರುಮಾಡಿದ್ರು. ಮಾಡೋ ಕೆಲಸವನ್ನೆಲ್ಲಾ ಬಿಟ್ಟು ಅವಳ್ಯಾವಾಗ ಒಬ್ಬಳೆ ಸಿಕ್ತಾಳೆ ಅಂತ ಯೋಚಿಸ್ತಿದ್ರು. ಗಂಡ ಇಲ್ಲದಾಗ ಮಕ್ಕಳು ಇರ್ತಿದ್ರು. ಮಕ್ಕಳು ಇಲ್ಲದಾಗ ಗಂಡ ಇರ್ತಿದ್ದ ಹೀಗಾಗಿ ಇವರಿಗೆ ಅನುಕೂಲ ಆಗೋ ದಿನ ಮಾತ್ರ ಕೂಡಿ ಬರಲೇ ಇಲ್ಲ.

ಹೀಗೆ ದಿನಗಳು ಉರುಳುತ್ತಲೇ ಇತ್ತು. ಇಲ್ಲಿ ಶಂಕರಮ್ಮನಿಗೆ ಸದ್ಯಕ್ಕೆ ಆತನಿಗೆ ಅದ್ಯಾವುದು ತೊಂದರೆ ಕೂಡಾ ಆಗಿರಲಿಲ್ಲ. ಅವನು ಮತ್ತೆ ಅದೇ ವಿಚಾರವನ್ನ ಇಟ್ಟುಕೊಂಡು ಮನೆ ಹತ್ತಿರ ಬಂದಿರಲಿಲ್ಲ. ಹೀಗಾಗಿ ಆಕೆ ಹಿಂದೆ ನಡೆದಿದ್ದ ಘಟನೆಯನ್ನ ಸಂಪೂರ್ಣವಾಗಿ ಮರೆತು ಬಿಟ್ಟಿದ್ಲು. ಆಕೆ ಸಭ್ಯಸ್ಥಳಾದ ಕಾರಣ ಅವನ ಆಸೆಯನ್ನ ಪೂರೈಸೋದಕ್ಕೆ ಅವತ್ತೇ ತಿರಸ್ಕರಿಸಿಬಿಟ್ಟಿದ್ಲು. ಹೀಗಾಗಿ ಆಕೆ ಮತ್ತೆ ಅದರ ಬಗ್ಗೆ ಯಾವತ್ತು ಯೋಚನೆಯನ್ನೇ ಮಾಡಿಲ್ಲ. ಆದ್ರೆ ಇವನು ಮಾತ್ರ ಆ ವಿಷಯವನ್ನ ಬಿಟ್ಟು ಬೇರೆ ಏನನ್ನು ಯೋಚನೆ ಮಾಡ್ತಾನೆ ಇರಲಿಲ್ಲ.

ಹೀಗೆ ಪ್ರತಿನಿತ್ಯ ಆ ಮನೆ ಹತ್ತಿರ ಬಂದು ಕಾಯ್ತಿದ್ದ ಶಿವಪ್ಪನಿಗೆ ಒಂದು ಗುಡ್ ನ್ಯೂಸ್ ಸಿಕ್ಕಿತ್ತು. ಅದೇನಪ್ಪಾ ಅಂದ್ರೆ ಶಂಕರಮ್ಮಳ ಗಂಡ ಪ್ರಭು ಜಾತ್ರೆಗಾಗಿ ಊರಿಗೆ ಹೋಗ್ತಿದ್ದಾನೆ ಅನ್ನೋದು. ಆತ ಜಾತ್ರೆ ಮುಗಿಸಿ ಬರೋದಕ್ಕೆ ಎರಡು ದಿನ ಆಗುತ್ತೆ, ಅಲ್ಲಿವರೆಗೂ ಮನೆಯಲ್ಲಿ ಸಣ್ಣ ಮಗುವಿನ ಜೊತೆ ಶಂಕರಮ್ಮ ಒಬ್ಬಳೇ ಇರ್ತಾಳೆ ಅನ್ನೋ ನ್ಯೂಸ್ ಅವನಿಗೆ ಸಿಕ್ಕಿತ್ತು. ಈ ಸುದ್ದಿ ಗೊತ್ತಾಗ್ತಿದ್ದ ಹಾಗೆ ಶಿವಪ್ಪ ಕುಣಿದು ಕುಪ್ಪಳಿಸಿದ್ದ. ಇಂತಹ ಛಾನ್ಸ್ ಮತ್ತೊಮ್ಮೆ ಸಿಗೋದಿಲ್ಲ. ಹೇಗಾದ್ರು ಮಾಡಿ ಈ ಒಳ್ಳೇ ಟೈಂ ಅನ್ನ ಬಳಸಿಕೊಳ್ಳಬೇಕು ಅಂತ ಯೋಚಿಸಿದ್ದ. ಅದಕ್ಕೆ ತನ್ನ ಸ್ನೇಹಿತ ಮಾಳಪ್ಪನ ಜೊತೆ ಚರ್ಚೆ ನಡೆಸಿದ್ದ. ಅವನಿಗೆ ಈ ಸುದ್ದಿ ಕೇಳಿ ಫುಲ್ ಖುಷ್ ಆಗಿ ಹೋಗಿದ್ದ. ಇಷ್ಟು ದಿನ ಕಾದಿದ್ದ ಟೈಂ ಈಗ ಬರ್ತಾ ಇದೆ. ಇನ್ನು ನಾವಂದುಕೊಂಡ ಕೆಲಸ ಆಗೇ ಹೋಗುತ್ತೆ ಅಂತ ಇಬ್ರು ಖುಷಿಯಾಗಿದ್ರು. ಅದೇ ಖುಷಿಯಲ್ಲಿ ಫುಲ್ ಪಾರ್ಟಿಯನ್ನು ಮಾಡಿದ್ರು.

 ಆಕೆ ಮಲಗುತ್ತಿದ್ದ ಹಾಗೆ ಇವರಿಬ್ಬರು ಆ ಮನೆಯ ಹತ್ತಿರ ಬಂದಿದ್ರು. ಆದ್ರೆ ತಕ್ಷಣವೇ ಆ ಮನೆಗೆ ಅವರು ನುಗ್ಗಲಿಲ್ಲ. ಮಧ್ಯ ರಾತ್ರಿ ಕಳೆಯುವವರೆಗೆ ಅವ್ರಿಬ್ಬರು ಅಲ್ಲೇ ಕಾಲ ಕಳೆದಿದ್ದಾರೆ. ಸುಮಾರು 3ಗಂಟೆ ಸುಮಾರಿಗೆ ಅವ್ರು ನಿಧಾನಕ್ಕೆ ಬಾಗಿಲಿಲ್ಲದ ಮನೆಗೆ ಆರಾಮಾಗಿ ಒಳ ಹೋಗಿದ್ದಾರೆ. ಆ ಕಲ್ಲಿನ ನೆಲದ ಮೇಲೆ ಮಲಗಿದ್ದ ಶಂಕರಮ್ಮನನ್ನ ನೋಡಿ ಹಿರಿ ಹಿರಿ ಹಿಗ್ಗಿದ್ದಾರೆ. ನಿದ್ದೆಯಲ್ಲಿದ್ದ ಶಂಕರಮ್ಮನಿಗೆ ಎಚ್ಚರ ಆಗದ ಹಾಗೆ ಆಕೆಯ ಮೇಲೆ ಬಿದ್ದಿದ್ದಾರೆ. ಆದ್ರೆ ಆಕೆಗೆ ಆಗ ಎಚ್ಚರವಾಗಿತ್ತು. ಆಕೆ ಅವರಿಂದ ಬಿಡಿಸಿಕೊಳ್ಳೋದಕ್ಕೆ ಅಲ್ಲಿ ಒದ್ದಾಡಿದ್ದಾಳೆ. ಆದ್ರೆ ಅವರಿಬ್ಬರು ಆಕೆಯನ್ನ ಒದ್ದಾಡದ ಹಾಗೆ ಕೂಗಿಕೊಳ್ಳದ ಹಾಗೆ ನೋಡಿಕೊಂಡಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಅಂತ ಇಬ್ಬರು ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಇದೀಗ ಪೊಲೀಸ್ರು ಇಬ್ಬರನ್ನ ಜೈಲಿಗೆ ಅಟ್ಟಿದ್ದಾರೆ. ಆ ಇಬ್ಬರು ಅನಾಚಾರಿಗಳ ವಯಸ್ಸೇನು ದೊಡ್ಡದಿರಲಿಲ್ಲ. ಇನ್ನು ಮದುವೆ ಮಕ್ಕಳು ಅಂತ ಭವಿಷ್ಯದಲ್ಲಿ ಅವರಿಗೆ ಬದುಕೋದಕ್ಕೆ ಸಾಕಷ್ಟು ಅವಕಾಶವಿತ್ತು. ಆದ್ರೆ ತಮಗೆ ದಕ್ಕದ ಇರೋ ಆ ಹೆಂಗಸನ್ನ ಹೇಗಾದ್ರು ದಕ್ಕಿಸಿಕೊಳ್ಳಲೇಬೇಕು ಅನ್ನೋ ಹಠಕ್ಕೆ ಬಿದ್ದು ಆಕೆಯನ್ನ ಅನುಭವಿಸಿದ್ರು. ಅಲ್ಲದೆ ತಾವು ಪಾರಾಗೋದಕ್ಕೆ ಆಕೆಯನ್ನ ಕೊಂದಿದ್ರು. ಈಗ ಮತ್ತೆಂದು ಹೊರ ಜಗತ್ತನ್ನೇ ನೋಡೋದಕ್ಕೆ ಆಗದೇ ಇರೋ ಕಡೆ ಹೋಗಿದ್ದಾರೆ. ಅವತ್ತು ಕಾಮವನ್ನ ಮೈಗೇರಿಸಿಕೊಳ್ಳದೆ ಸರಿ ದಾರಿಯಲ್ಲಿ ನಡೆದಿದ್ರೆ ಇವತ್ತು ಎಲ್ಲರಂತೆ ಮರ್ಯಾದೆಯಿಂದ ಜೀವನ ಮಾಡಬಹುದಿತ್ತು. ಆದ್ರೆ ಕೆಟ್ಟ ಮೇಲೆ ಬುದ್ಧಿ ಬಂದ್ರೆ ಏನು ಉಪಯೋಗ ಅಲ್ವಾ.

LEAVE A REPLY

Please enter your comment!
Please enter your name here