Home District ಮಗನ ಸಾವಿನ ಸುದ್ದಿ ಕೇಳ್ತಿದ್ದಂತೆ ಇಹಲೋಕ ತ್ಯಜಿಸಿದ ತಾಯಿ..! ಸಾವಿನಲ್ಲೂ ಒಂದಾದ ತಾಯಿ-ಮಗ…

ಮಗನ ಸಾವಿನ ಸುದ್ದಿ ಕೇಳ್ತಿದ್ದಂತೆ ಇಹಲೋಕ ತ್ಯಜಿಸಿದ ತಾಯಿ..! ಸಾವಿನಲ್ಲೂ ಒಂದಾದ ತಾಯಿ-ಮಗ…

683
0
SHARE

ತಾಯಿ ಪ್ರೀತಿ ಅಂದ್ರೇನೆ ಹಾಗೇ, ಯಾವುದಕ್ಕೂ ಹೋಲಿಕೆ ಮಾಡಲಿಕ್ಕೆ ಸಾಧ್ಯವಿಲ್ಲ, ಆ ಹಿರಿಯ ಜೀವವೂ ಹಾಗೆ ತನ್ನ ಮಗನ ಮೇಲೆ ಅದೆಷ್ಟು ಪ್ರೀತಿಯಿಟ್ಟಿತ್ತೊ ಗೊತ್ತಿಲ್ಲ, ಮಗನ ಜೊತೆಗೆ ತಾನೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.ಮಗನ ಸಾವಿನ ಸುದ್ದಿ ಕೇಳ್ತಿದ್ದಂತೆ, ಆಘಾತ ತಾಳಲಾರದೆ ಎಂಬತ್ಮೂರು ವರ್ಷದ ವೃದ್ದ ತಾಯಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ.

ವಳ್ಳಿಯಮ್ಮ ಎಂಬಾಕೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ತನ್ನ ಮಗ ರವಿಚಂದ್ರ ಗುಣಮುಖನಾಗಿ ಬರ್ತಾನೆ ಅಂತಾ ಇಳಿ ವಯಸ್ಸಿನಲ್ಲಿಯೂ ಕಾದು ಕುಳಿತಿದ್ದಳು, ಆದ್ರೆ ಮಗ ತನ್ನ ಪಾಲಿಗೆ ಇನ್ನಿಲ್ಲ ಎಂದು ಗೊತ್ತಾಗ್ತಿದ್ದಂತೆ ಎರಡೇ ನಿಮಿಷದಲ್ಲಿ ವೃದ್ಧ ತಾಯಿಯೂ ಮಗನೊಂದಿಗೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.ಹಾಲಿನ ವ್ಯಾಪಾರ ನಡೆಸುತ್ತಿದ್ದ ರವಿಚಂದ್ರ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದ ಮಣಿಪಾಲ್ ಆಸ್ಪತ್ರೆಗೆ ತೆರಳುತಿದ್ದ ವೇಳೆ ದಿಢೀರ್ ಹೃದಯಾಘಾತಕ್ಕೆ ಒಳಗಾಗಿದ್ದ ರವಿಚಂದ್ರನನ್ನ ಕ್ಯಾಬ್ ಚಾಲಕ ಅಪೊಲೊ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಆದ್ರೆ ಆತನ ತಾಯಿ ವಳ್ಳಿಯಮ್ಮನಿಗೆ ಮಾತ್ರ ನಿಮ್ಮ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾನೆ, ಆದಷ್ಟು ಬೇಗ ಬರ್ತಾನೆ ಅಂತಲೆ ಸಂಬಂಧಿಕರು ಸಮಾಧಾನಪಡಿಸಿದ್ದಾರೆ. ಈ ವಿಚಾರವನ್ನ ಆತನ ತಾಯಿಗೆ ಹೇಗೆ ತಿಳಿಸುವುದು ಎಂದು ಯೋಚಿಸಿದ ಕುಟುಂಬಸ್ಥರು, ನಿನ್ನೆ ರಾತ್ರಿ ವೇಳೆ ವೃದ್ಧೆಗೆ ವಿಚಾರವನ್ನ ನಿಧಾನವಾಗಿ ತಿಳಿಸಿದ್ದಾರೆ.ಆದ್ರೆ ಮಗನ ಅಗಲಿಕೆಯಿಂದ ನೊಂದ ವೃದ್ಧೆ ಕಣ್ಣೀರು ಹಾಕಿ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಚಿಕಿತ್ಸೆಗೆ ಕರೆದೊಯ್ಯಲು ಯತ್ನಿಸಿದರೂ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಣ, ಅಧಿಕಾರ, ದುರಾಸೆಗಾಗಿ ಹೆತ್ತ ತಾಯಿಯನ್ನ ಬೀದಿಗೆ ತಳ್ಳುವ ಮಕ್ಕಳ ನಡುವೆ ಕೊನೆವರೆಗೂ ತಾಯಿಯನ್ನ ಪ್ರೀತಿಯಿಂದ ನೋಡಿಕೊಳ್ತಿದ್ದ ಮಗ, ಆ ಮಗನನ್ನ ಕಳೆದುಕೊಳ್ತಿದ್ದಂತೆ ಆತನಿಲ್ಲದ ಪ್ರಪಂಚವೇ ಬೇಡ ಎಂದು ಆತನ ಹಿಂದೆಯೇ ಹೋದ ತಾಯಿ. ಸಾವಿನಲ್ಲೂ ಇವರಿಬ್ಬರ ಜೊತೆಗಾರಿಕೆಯನ್ನ ನೋಡಿ ನೆರೆದಿದ್ದವರೆಲ್ಲ ಕಣ್ಣೀರಿಟ್ಟರು.

LEAVE A REPLY

Please enter your comment!
Please enter your name here