Home Crime ಮಗಳ ಕಣ್ಣಿಗೆ ಬಿತ್ತು ಅಮ್ಮನ ಕಾಮ ಪುರಾಣ..! ಅಮ್ಮ ಮಗಳು ಸೇರಿ ಬ್ಲಾಕ್ ಮೇಲ್ ಮಾಡಿಯೇ...

ಮಗಳ ಕಣ್ಣಿಗೆ ಬಿತ್ತು ಅಮ್ಮನ ಕಾಮ ಪುರಾಣ..! ಅಮ್ಮ ಮಗಳು ಸೇರಿ ಬ್ಲಾಕ್ ಮೇಲ್ ಮಾಡಿಯೇ ಕಟ್ಟಿಸಿದ್ರು ಡಬಲ್ ಫ್ಲೋರ್ ಹೌಸ್..! ತನ್ನ ಟೈಂಪಾಸ್ ಗೆಳೆಯನಿಗೆ ತಿನ್ನಿಸಿದ್ಲು ಚಳ್ಳೆ ಹಣ್ಣು..!

18310
0
SHARE

ಅಮ್ಮ ಮಗಳು, ಅತ್ತೆ ಸೊಸೆ, ಎಲ್ಲಾ ಇವತ್ತು ಸೀರಿಯಲ್ ನಲ್ಲೇ ಮುಳುಗಿ ಹೋಗಿದ್ದಾರೆ. ಅದು ತಮ್ಮದೇ ಮನೆಯ ಕಥೆಯೇನೋ ಅನ್ನೋ ಹಾಗೆ ಅವ್ರು ಫೀಲ್ ಮಾಡ್ಕೊಂಡು ಧಾರಾವಾಹಿಯನ್ನ ನೋಡ್ತಾರೆ. ಹೀಗಾಗಿ ಸೀರಿಯಲ್ ಗಳು ಹೆಂಗಸರಿಗಾಗಿಯೇ ನಿರ್ಮಾಣವಾಗ್ತಿದೆ. ಅದ್ರಲ್ಲೂ ಕೆಲವು ಸೀರಿಯಲ್ ಗಳು ಮನೆಯಲ್ಲಿ ಕೂತಿರೋ ಹೆಂಗಸರ ತಲೆ ಕೆಡಿಸಿ ಬಿಡುತ್ತೆ.

ಅವ್ರು ಅದನ್ನ ಕೇವಲ ಮನರಂಜನೆ ಅಂತ ಅಂದುಕೊಳ್ಳೋದಿಲ್ಲ. ಅಥವಾ ಅದೊಂದು ಕಥೆ ಅಂತಾನು ಭಾವಿಸೋದಿಲ್ಲ. ಸೀರಿಯಲ್ ನಲ್ಲಿ ಬರೋ ಕ್ಯಾರೆಕ್ಟರ್ ತರಹ ನಾವ್ಯಾಕೆ ಮಾಡಬಾರದು ಅಂತ ಯೋಚಿಸ್ತಾರೆ.ಹೀಗೆ ಅಮ್ಮ ಮಗಳು ಟಿವಿಯಲ್ಲಿ ಬರೋ ಸೀರಿಯಲ್ ಅನ್ನೇ ಕಾಪಿ ಮಾಡಿ ಕೈ ತುಂಬಾ ಸಂಪಾದನೆಯನ್ನು ಮಾಡಿದ್ರು. ಅಲ್ಲದೆ ಅದೇ ಸೀರಿಯಲ್ ನ ಕ್ಲೈಮ್ಯಾಕ್ಸ್ ನಲ್ಲಿ ಆಗೋ ಹಾಗೆ ಇವ್ರು ಜೈಲನ್ನು ಸೇರಿದ್ದಾರೆ. ಬೇಬಿ ರಾಣಿ ಅನ್ನೋ ಮಹಿಳೆ,ಅತ್ತ ಮುಪ್ಪು ಬಾರದ, ಇತ್ತ ಯೌವ್ವನವೂ ಅಲ್ಲದ ವಯಸ್ಸು ಈಕೆಯದ್ದು. ಇನ್ನು ಇವಳಿದ್ದಾಳಲ್ಲ ಈಕೆ ಬೇಬಿರಾಣಿಯ ಜೆರಾಕ್ಸ್ ಕಾಪಿ ಪ್ರೀತಿ ಅಂತ. ಇತ್ತೀಚೆಗಷ್ಟೇ ಲವ್ ಮಾಡಿ ಮದುವೆಯಾಗಿ ಹೊಸದಾಗಿ ಸಂಸಾರ ಕಟ್ಟಿಕೊಳ್ತಿದ್ಲು.

ಹಾಗೆ ಸಂಸಾರ ಕಟ್ಟಿಕೊಂಡು ಸುಖವಾಗಿದ್ದಿದ್ರೆ ಇವತ್ತು ಈ ಅಮ್ಮ ಮಗಳನ್ನ ಇಲ್ಲಿ ತೋರಿಸಿ ಮಾನ ಹರಾಜು ಹಾಕೋ ಪರಿಸ್ಥಿತಿ ಬರ್ತಿರಲಿಲ್ಲ. ಆದ್ರೆ ಇವರಿಗೆ ಕಾಸು ಅನ್ನೋದು ಕೈತುಂಬಾ ಇರಬೇಕು ಅದಕ್ಕಾಗಿ ಏನಾದ್ರೂ ಮಾಡಬೇಕು ಅನ್ನೋ ಹಂಬಲ ಶುರುವಾಗಿತ್ತು. ಅದಕ್ಕೆ ಇವರಿಬ್ಬರು ಸೇರಿ ಮಾಡಿದ ಕೆಲಸವಿದೆಯಲ್ಲ ಅದನ್ನ ಯಾವ ಮರ್ಯಾದಸ್ಥರು ಸಹಿಸಿಕೊಳ್ಳೋದಿಲ್ಲ ಬಿಡಿ.ಇವರಿಬ್ಬರ ಕಾಟಕ್ಕೆ, ಈ ಆಂಟಿಯ ಮೈಮಾಟಕ್ಕೆ, ಇಡೀ ಫ್ಯಾಮಿಲಿಯ ಕುತಂತ್ರಕ್ಕೆ ಬಲಿಯಾಗಿದ್ದು ಈ ಅಂಕಲ್. ಹೆಸರು ಕೃಷ್ಣದಾಸ್. ಕೃಷ್ಣದಾಸ್ ಬೆಂಗಳೂರಿನ ಮತ್ತಿಕೆರೆಯವರು. ತಮ್ಮದೇ ಆದ ಕ್ಯಾಟರಿಂಗ್ ಅನ್ನ ನಡೆಸ್ತಿದ್ದಾರೆ. ದೊಡ್ಡ ದೊಡ್ಡ ಸಮಾರಂಭಗಳಿಗೆ ಇವ್ರು ಕ್ಯಾಟರಿಂಗ್ ಮಾಡ್ತಾರೆ. ಅಲ್ಲದೆ ವಿದ್ಯಾರಣ್ಯಪುರದಲ್ಲಿ ಒಂದಿಷ್ಟು ಮನೆಗಳ ಬಾಡಿಗೆ ಬರುತ್ತೆ.

ಈ ಅಂಕಲ್ ವಿದ್ಯಾರಣ್ಯಪುರದಲ್ಲಿ ಒಂದಿಷ್ಟು ಮನೆಯನ್ನ ಬಾಡಿಗೆ ಬಿಟ್ಟಿದ್ದಾರೆ ಅದರಲ್ಲಿ ಒಬ್ಬ ಮಹಿಳೆ ಈ ಬೇಬಿ ರಾಣಿಯನ್ನ ಕೃಷ್ಣದಾಸ್ ಗೆ ಪರಿಚಯ ಮಾಡಿಕೊಟ್ಟಿದ್ರು. ನಿಧಾನಕ್ಕೆ ಅವರಿಬ್ಬರ ಮುಖ ಪರಿಚಯ ಮುಖಕ್ಕೆ ಮುಖತಾಗಿಸೋವರೆಗೂ ಬಂದಿತ್ತು. ಅದಾಗ್ಲೇ ಮದುವೆಯಾಗಿರೋ ಮಗಳಿದ್ರು ಆಕೆಗೆ ಅಂಕಲ್ ಮೇಲೆ ಲೈಟಾಗಿ ಲವ್ ಆಗಿತ್ತು. ಆಗಾಗ ಆಂಟಿಯೇ ಅವರನ್ನ ಹುಡ್ಕೊಂಡು ಹೋದ್ರೆ ಇನ್ನೊಮ್ಮೆ ಇವ್ರೇ ಈ ರಾಣಿ ಜೇನನ್ನ ಹುಡುಕಿ ಹೊಗ್ತಿದ್ರು. ಇದು ಅವರ ಮಗಳು ಪ್ರೀತಿಗೂ ಗೊತ್ತಿತ್ತು. ಯಾರೋ ಅಮ್ಮನ ಫ್ರೆಂಡ್ ಮನೆಗೆ ಬಂದು ಹೋಗ್ತಾರೆ ಅಂತ ಅಂದುಕೊಂಡಿದ್ಲು ಆಕೆ. ಆದ್ರೆ ಅವರಿಬ್ಬರ ಸಂಬಂಧದ ಬಗ್ಗೆ ಯಾವತ್ತು ಚಕಾರ ಎತ್ತಿರಲಿಲ್ಲ. ಹೀಗೆ ಒಮ್ಮೆ ಅಮ್ಮ ಮತ್ತು ಅಂಕಲ್ ಒಟ್ಟಿಗೆ ಸಿಗಬಾರದ ಸ್ಥಿತಿಯಲ್ಲಿ ಪ್ರೀತಿಯ ಕೈಗೆ ಸಿಕ್ಕಿಬಿದ್ದಿದ್ರು. ಆದ್ರೆ ಅವತ್ತು ಕೂಡಾ ಪ್ರೀತಿ ತಾಯಿಯ ಮೇಲೆ ರೇಗಿರಲಿಲ್ಲ. ಕಣ್ಣಿಗೆ ಕಂಡ್ರು ಆಕೆ ಏನು ನೋಡೇ ಇಲ್ಲಾ ಅನ್ನೋ ಹಾಗೆ ಹೋಗಿದ್ಲು.

 

ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ಬೇಬಿ ರಾಣಿ ಹಿಂದಿ ಚಾನೆಲ್ ಒಂದನ್ನ ಹಾಕಿದ್ದಾಳೆ. ಅದ್ರಲ್ಲಿ ಕ್ರೈಂ ಸೀರಿಯಲ್ ಒಂದು ಬರ್ತಿತ್ತು. ಅದ್ಯಾಕೋ ಆ ಕಾರ್ಯಕ್ರಮ ಈಕೆಯನ್ನ ಚಾನೆಲ್ ಚೇಂಜ್ ಮಾಡೋದಕ್ಕೆ ಬಿಟ್ಟಿರಲಿಲ್ಲ. ಅಲ್ಲಿ ಪ್ರಸಾರವಾಗ್ತಿದ್ದ ಕಾರ್ಯಕ್ರಮ ಹನಿಟ್ರ್ಯಾಪ್ ಒಂದಕ್ಕೆ ಸಂಬಂಧಿಸಿದ್ದಾಗಿತ್ತು. ಆ ಕಾರ್ಯಕ್ರಮವನ್ನ ಈಕೆ ನಿರಂತರ ಎರಡು ದಿನ ನೋಡಿದ್ಲು. ಅದ್ರಲ್ಲಿ ಹೇಗೆ ಹನಿಟ್ರ್ಯಾಪ್ ಮಾಡ್ತಾರೆ. ಹೇಗೆ ಹಣ ವಸೂಲಿ ಮಾಡ್ತಾರೆ ಅನ್ನೋದನ್ನ ಆಕೆ ನೋಡಿದ್ಲು. ಅದ್ಯಾಕೋ ಆ ಕಾರ್ಯಕ್ರಮ ಆಕೆಯನ್ನ ಸಖತ್ ಕಾಡಿತ್ತು. ಅಲ್ಲದೆ ತಾನು ಹೀಗೆ ಆರಾಮಾಗಿ ಕಾಸು ಮಾಡಬಹುದ ಅನ್ನೋದನ್ನ ಯೋಚಿಸಿದ್ದಾಳೆ. ಅಲ್ಲದೆ ದಿನ ಮನೆಗೆ ಬಂದು ಹೋಗೋ ಅಂಕಲ್ ಹತ್ತಿರ ಕಾಸು ಚೆನ್ನಾಗಿದೆ, ಹೀಗಿರೋವಾಗ ನಾನ್ಯಾಕೆ ಒಮ್ಮೆ ಟ್ರೈ ಮಾಡಬಾರದು ಅಂತ ಯೋಚಿಸಿದ್ಲು. ಆದ್ರೆ ಅದನ್ನ ಹ್ಯಾಗೆ ಮಾಡೋದು ಅನ್ನೋ ವಿಷಯ ಅವಳನ್ನ ತುಂಬಾ ಕಾಡೋದಕ್ಕೆ ಶುರುವಾಗಿತ್ತು.

 

 

ಅದ್ಯಾವಾಗ ಆ ಸೀರಿಯಲ್ ನೋಡ ಬೇಬಿ ತಲೆಯಲ್ಲಿ ಹಣದ ಹುಳ ಕೊರೆಯೋದಕ್ಕೆ ಶುರುವಾಯ್ತೋ ಆಗ ಸೀದಾ ತನ್ನ ಮಗಳ ಹತ್ತಿರ ಹೋಗಿದ್ದಾಳೆ. ನಗರದ ತಿಂಡ್ಲುವಿನಲ್ಲಿ ಮಗಳು ಪ್ರೀತಿ ವಾಸವಾಗಿದ್ಲು. ಕೆಲವು ತಿಂಗಳ ಹಿಂದಷ್ಟೇ ಮಣಿಕಂಠನ್ ಅನ್ನೋ ಆಟೋ ಡ್ರೈವರ್ ಅನ್ನ ಪ್ರೀತಿಸಿ ಇವಳು ಮದುವೆಯಾಗಿದ್ಲು. ಇಬ್ಬರು ಅಲ್ಲೇ ತಿಂಡ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು. ನಂತ್ರ ಅಳಿಯ ಇಲ್ಲದ ಟೈಂನಲ್ಲಿ ಆಕೆ ಮನೆಗೆ ಹೋಗಿ ಮಗಳೇ ನನಗೊಬ್ಬ ಫ್ರೆಂಡ್ ಇದ್ದಾನೆ. ಅವನ ಹತ್ತಿರ ಒಳ್ಳೇ ಕಾಸಿದೆ, ಅವನಿಂದ ಹಣ ವಸೂಲಿ ಮಾಡೋಣ ಅಂತ ಹೇಳಿದ್ದಾಳೆ. ಹಣ ಅಂದಾಕ್ಷಣ ಮಗಳ ಮನಸ್ಸು ಕುಣಿಯೋದಕ್ಕೆ ಶುರುವಾಯ್ತು.

ಏನು ಎತ್ತ ಅಂತ ಯೋಚಿಸದೆ ಸರಿಯಮ್ಮ ಹಾಗಾದ್ರೆ ಸರಿಯಾಗೇ ವಸೂಲಿ ಮಾಡೋಣ ಅಂತ ಆಕೆಯೂ ಸಾಥ್ ಕೊಡೋದಕ್ಕೆ ರೆಡಿಯಾದ್ಲು. ಅಷ್ಟೊತ್ತಿಗೆ ಮನೆಗೆ ಅಳಿಯ ಬಂದಿದ್ದ. ಆತ ಮನೆಗೆ ಬರ್ತಿದ್ದ ಹಾಗೆ ಮನೆಹಾಳ ಯೋಚನೆಯನ್ನ ಆತನ ತಲೆಗೂ ತುಂಬಿದ್ದಾರೆ. ಅದಕ್ಕೆ ಅಯ್ಯೋ ಅತ್ತೆ ಎಂತಹ ಐಡಿಯಾ ಕೊಟ್ರಿ ಹಾಗೆ ಮಾಡೋಣ ನಾವು ನಿಮಗೆ ಸಾಥ್ ಕೊಡ್ತೀವಿ ಅಂತ ಅವ್ರು ರೆಡಿಯಾಗಿಬಿಟ್ಟ. ಜೊತೆಗೆ ನಮ್ಮ ಅಣ್ತಮ್ಮ ಪ್ರಸಾದ್ ಅಂತಿದ್ದಾನೆ ಅವನನ್ನೂ ಸೇರಿಸಿಕೊಳ್ಳೋಣ ಅಂತ ಹೇಳಿ ನಾಲ್ಕು ಜನ ಸೇರಿ ಮನೆ ಮುರಿಯೋದಕ್ಕೆ ರೆಡಿಯಾದ್ರು.

ನಂತ್ರ ನಾಲ್ಕು ಜನ ಒಟ್ಟಿಗೆ ಸೇರಿ ಹ್ಯಾಗೆ ಅವನನ್ನ ಖೆಡ್ಡಾಗೆ ಕೆಡವಿಕೊಳ್ಳೋದು ಅನ್ನೋದನ್ನ ಪ್ಲಾನ್ ಮಾಡಿದ್ದಾರೆ. ಆಗ ನಾನು ಅವನನ್ನ ಮನೆಯಲ್ಲಿ ಯಾರು ಇಲ್ಲದಾಗ ಕರೆಸಿಕೊಳ್ತೀನಿ. ನಾವಿಬ್ಬರು ಒಟ್ಟಿಗೆ ಮಲಗಿರೋವಾಗ ನೀವು ಬಂದು ರೇಡ್ ಮಾಡಿದ ಹಾಗೆ ಮಾಡಿ ಅಂತ ಆಕೆ ಹೇಳಿದ್ಲು. ಅದು ಪೊಲೀಸ್ರೇ ಬಂದು ರೇಡ್ ಮಾಡಿದ ಹಾಗೆ ಇರಬೇಕು ಅಂತಾನು ಆಕೆ ಹೇಳಿದ್ಲು. ಆಗ ಎಲ್ಲಾ ಸೇರಿ ತಮ್ಮ ಪ್ಲಾನ್ ಅನ್ನ ಎಕ್ಸಿಕ್ಯೂಟ್ ಮಾಡೋದಕ್ಕೆ ರೆಡಿಯಾಗಿದ್ರು. ಆದ್ರೆ ಈ ಪ್ಲಾನ್ ಬಗ್ಗೆ ಕ್ಯಾಟರಿಂಗ್ ಕೃಷ್ಣದಾಸ್ ಗೆ ಗೊತ್ತೇ ಇರಲಿಲ್ಲ. ಸುಮಾರು ದಿನದಿಂದ ಆತ ಆಕೆಯ ಮನೆ ಹತ್ತಿರವು ಹೋಗಿರಲಿಲ್ಲ. ಹೀಗಾಗಿ ಅವತ್ತೊಂದು ದಿನ ಬೇಬಿ ಆತನಿಗೆ ಫೋನ್ ಮಾಡಿ ಏನ್ರಿ ನಮ್ಮನ್ನ ಮರೆತುಬಿಟ್ರಾ ಅಂತ ರೊಮ್ಯಾಂಟಿಕ್ ಆಗಿ ಕೇಳಿದ್ದಾಳೆ. ಆಕೆ ಮಾತು ಕೇಳ್ತಿದ್ದ ಹಾಗೆ ಕೃಷ್ಣದಾಸ್ ಮೈಯಲ್ಲಿ ಹುಳ ಬಿಟ್ಟಂಗಾಗಿದೆ. ಅಯ್ಯೋ ಹಾಗೆನಿಲ್ಲ ಕಣೇ ಸ್ವಲ್ಪ ಕೆಲಸ ಇತ್ತು ನಾಳೆ ಬರ್ತೀನಿ ಬಿಡು ಅಂತ ಫೋನ್ ಇಟ್ಟಿದ್ದಾರೆ. ನಂತ್ರ ಕೃಷ್ಣದಾಸ್ ಮಾರನೇ ದಿನ ಈ ಬೇಬಿಯನ್ನ ಹುಡ್ಕೊಂಡು ಆಕೆಯ ಮನೆಗೆ ಹೋಗಿದ್ದಾರೆ.

ಮನೆಗೆ ಹೋಗ್ತಿದ್ದ ಹಾಗೆ ಅಂತು ಇಂತು ತೋಳ ಹಳ್ಳಕೆ ಬಿತ್ತು ಅಂತ ಬೇಬಿ ಅವರನ್ನ ಒಳಗೆ ಕರ್ಕೊಂಡಿದ್ದಾಳೆ. ಆದ್ರೆ ಇವರ ಖತರ್ನಾಕ್ ಪ್ಲಾನ್ ಬಗ್ಗೆ ಅನುಮಾನವೇ ಇಲ್ಲದ ಅಂಕಲ್ ಯಥಾ ಪ್ರಕಾರ ತಮ್ಮ ಕೆಲಸ ಶುರುಹಚ್ಚಿದ್ದಾರೆ. ಅದ್ಯಾವಾಗ ಇಬ್ಬರು ಬೆತ್ತಲಾದ್ರೋ ಆಗ ಬಾಗಿಲು ಬಡಿಯೋ ಸದ್ದು ಕೇಳಿಸಿದೆ. ಆಗ ಇದೇ ಬೇಬಿ ಹೋಗಿ ಬಾಗಿಲು ತೆಗೆದಿದ್ದಾಳೆ. ಆಗ ಒಳಗೆ ಬಂದ ಇಬ್ಬರು ನಾವು ಪೊಲೀಸ್ರು ಇಲ್ಲಿ ವೇಶ್ಯೆ ವಾಟಿಕೆ ನಡೆಯುತ್ತಿದೆ ಅಂತ ಹೇಳಿದ್ರು. ಆಗ ಕೃಷ್ಣದಾಸ್ ಫುಲ್ ಹೆದರಿಕೊಂಡು ಬಿಟ್ಟಿದ್ದಾರೆ. ಇಬ್ಬರು ಸ್ಟೇಷನ್ ಗೆ ನಡೀರಿ ಅಂತ ಅವರು ಕರೆದಿದ್ದಾರೆ. ಆದ್ರೆ ಅಂಕಲ್ ಮರ್ಯಾದೆಗೆ ಅಂಜಿ ಸರ್ ಇಲ್ಲೇ ಸೆಟ್ಲ್ ಮಾಡ್ಕೊಳ್ಳೋಣ ಸ್ಟೇಷನ್ ತನಕ ಬೇಡ ಅಂತ ಹೇಳಿದ್ದಾರೆ. ಆಗ ಪೊಲೀಸ್ ರೀತಿ ಬಂದಿದ್ದ ಮಣಿಕಂಠ ಮತ್ತು ಪ್ರಸಾದ್ ಎರಡುವರೆ ಲಕ್ಷ ರೂಪಾಯಿ ಹಣವನ್ನ ಅವ್ರಿಂದ ಆನ್ ಸ್ಪಾಟ್ ಕಲೆಕ್ಟ್ ಮಾಡ್ಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ರು.

 

ಅಲ್ಲಿಗೆ ಅವರ ಪ್ಲಾನ್ ಸಕ್ಸಸ್ ಆಗಿತ್ತು. ಏನೋ ಫ್ರೀಯಾಗಿ ಸಾಯೋ ಟೈಂನಲ್ಲಿ ಮೇಯೋದಕ್ಕೆ ಹೊಲ ಸಿಕ್ಕಿದೆ ಅನ್ನೋ ಖುಷಿಯಲ್ಲಿ ಕಂಟ್ರಾಕ್ಟರ್ ಬಂದಿದ್ರು. ಪಾಪ ಹೊಲ ನನ್ನ ಹತ್ತಿರನೇ ಹಣ ನುಂಗ್ತಲ್ಲ ಅಂತ ಫೀಲಿಂಗ್ ನಲ್ಲಿ ಮನೆಗೆ ಹೋಗಿದ್ರು. ಮಜಾ ಮಾಡ್ಕೊಂಡು ಹೋಗೋಣ ಅಂತ ಬಂದಿದ್ದ ಅಂಕಲ್ ಮುಖ ವಾಪಸ್ ಹೋಗುವಾಗ ಇಂಗು ತಿಂದ ಮಂಗನಂತಾಗಿತ್ತು. ಆದ್ರೂ ಅವರಿಗೆ ಇದನ್ನೆಲ್ಲಾ ತನ್ನ ಬೇಬಿಯೇ ಮಾಡಿಸಿದ್ದು ಅನ್ನೋದು ಗೊತ್ತೇ ಇರಲಿಲ್ಲ. ಆದ್ರೂ ನಾವಿಬ್ಬರು ಮನೆಯಲ್ಲಿರೋದನ್ನ ಪೊಲೀಸ್ರಿಗೆ ಯಾರು ಹೇಳಿದ್ದು ಅನ್ನೋದು ಮಾತ್ರ ತಲೆಯಲ್ಲಿ ಕೊರೆಯುತ್ತಿತ್ತು. ಅಷ್ಟೇ ಅಲ್ಲದೆ ಹಣ ಕೊಡದೇ ಇದ್ದಿದ್ರೆ ಪೊಲೀಸ್ರು ಸ್ಟೇಷನ್ ಗೆ ಕರ್ಕೊಂಡು ಹೋಗಿ ಮರ್ಯಾದೆಯನ್ನ ತೆಗಿತಾ ಇದ್ರು ಅಂತು ಬಚಾವಾದೆ, ಮರ್ಯಾದೆಯೂ ಉಳಿಯಿತು ಅಂತ ಅಂದುಕೊಂಡಿದ್ರು. ಪಾಪ ಅವ್ರಿಗೆ ಮುಂದೆ ತಾವು ಹರಕೆಯ ಕುರಿ ಆಗ್ತೀನಿ ಅನ್ನೋದು ಗೊತ್ತೇ ಇರಲಿಲ್ಲ. ಅಲ್ಲದೆ ಇಡೀ ಫ್ಯಾಮಿಲಿ ತನ್ನ ಸುಲಿಯೋದಕ್ಕೆ ಹೇಗೆಲ್ಲಾ ಪ್ಲಾನ್ ಮಾಡ್ಕೊಂಡಿದ್ದಾರೆ ಅನ್ನೋದು ಗೊತ್ತಿರಲಿಲ್ಲ.

ಇತ್ತ ಇವ್ರು ಹೋಗ್ತಿದ್ದ ಹಾಗೆ ಮತ್ತೆ ಇಡೀ ಫ್ಯಾಮಿಲಿ ಆ ಮನೆಯಲ್ಲಿ ಸೇರಿತ್ತು. ಅವರ ಮೊದಲ ಪ್ರಯತ್ನವೇ ಭರ್ಜರಿ ಯಶಸ್ಸನ್ನ ತಂದುಕೊಟ್ಟಿತ್ತು. ಹೀಗಾಗಿ ಅವತ್ತು ಎಲ್ಲಾ ಫುಲ್ ಖುಷ್ ಆಗಿದ್ರು. ಅಲ್ಲದೆ ಇವನನ್ನ ಹೆದರಿಸಿ ಹಣ ಕಿತ್ಕೊಳ್ಳೋದು ತುಂಬಾ ಈಸಿ. ಹೀಗಾಗಿ ಈಗ ಈ ಪ್ಲಾನ್ ಅನ್ನ ಬಿಟ್ಟು ಬೇರೆ ಏನಾದ್ರೂ ಉಪಾಯ ಮಾಡೋಣ ಆಗ ಇನ್ನು ಜಾಸ್ತಿ ಹಣ ಕೀಳಬಹುದು ಅಂತ ಪ್ಲಾನ್ ಮಾಡಿದ್ರು. ಅಲ್ಲಿಗೆ ಕೃಷ್ಣದಾಸ್ ಮುದಿ ಸುಂದರಿಯನ್ನ ಮುಟ್ಟಿದ್ದಕ್ಕೆ ಸರ್ವಸ್ವವನ್ನೆಲ್ಲಾ ಕಳೆದುಕೊಳ್ಳೋದಕ್ಕೆ ರೆಡಿಯಾಗಿದ್ರು.ಬೇಬಿ ಮತ್ತು ಪ್ರೀತಿ ಈಗ ಸಿಕ್ಕಿಬಿದ್ದ ಅಮಾಯಕನ ಹತ್ತಿರ ಹೊಸ ನಾಟಕ ಮಾಡೋದಕ್ಕೆ ಶುರುಮಾಡಿದ್ರು. ಹೇಗೂ ಅವರ ಫೋನ್ ನಂಬರ್ ಇದ್ದ ಕಾರಣ ಪ್ರೀತಿ ಅವರಿಗೆ ಫೋನ್ ಮಾಡಿದ್ದಾಳೆ. ನಮ್ಮ ತಾಯಿಯ ಕೊಲೆಯಾಗಿದೆ. ಅದನ್ನ ನೀವೇ ಮಾಡಿದ್ದೀರಿ. ನಿಮ್ಮ ಜೊತೆ ನಮ್ಮ ಅಮ್ಮನಿಗೆ ಸಂಬಂಧ ಇತ್ತು ಅಂತ ಹೇಳಿದ್ದಾಳೆ. ಈ ವಿಷಯ ಕೇಳ್ತಿದ್ದ ಹಾಗೆ ಆ ಕಡೆ ಕೇಳಿಸಿಕೊಳ್ತಿದ್ದ ವ್ಯಕ್ತಿಯ ಬಾಡಿ ಶೇಕ್ ಆಗೋದಕ್ಕೆ ಶುರುವಾಗಿತ್ತು.

ನಿಮ್ಮ ಮೇಲೆ ನಮಗೆ ಅನುಮಾನವಿದೆ. ಅದಕ್ಕೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡ್ತೀವಿ ಅಂತ ಹೇಳಿದ್ಲು. ಅಯ್ಯೋ ಹಾಗೆಲ್ಲಾ ಮಾಡಬೇಡಮ್ಮ ನಾನು ನಿಮ್ಮ ಅಮ್ಮನನ್ನ ಕೊಲೆ ಮಾಡಿಲ್ಲ. ನನಗೂ ಅದಕ್ಕೂ ಸಂಬಂಧ ಇಲ್ಲ ಅಂತ ಹೇಳಿದ್ದಾರೆ. ಆದ್ರೆ ಆಕೆ ಅದ್ಯಾವಾಗ ದೂರು ಕೊಡ್ತೀನಿ ಅಂತ ಭಯ ಹುಟ್ಟಿಸಿದ್ಲೋ ಆಗ ಅವರು ಫುಲ್ ಢರ್ ಆಗಿ ಹೋಗಿದ್ರು.ಪ್ರೀತಿ ಕಂಪ್ಲೇಟ್ ಕೊಡಬೇಡಮ್ಮ ನಿನಗೆ ಏನು ಬೇಕು ಹೇಳು ಅಂತ ಅವ್ರು ಕೇಳಿದ್ರು. ಆಗ ಆಕೆ 5ಲಕ್ಷ ರೂಪಾಯಿ ಹಣ ಕೊಟ್ರೆ ದೂರು ಕೊಡೋದಿಲ್ಲ ಅಂತ ಹೇಳಿದ್ಲು. ಅಲ್ಲದೆ ಅಮ್ಮ ಹೇಗೂ ಸತ್ತಿದ್ದಾಳೆ ಇನ್ನು ದೂರು ಕೊಟ್ಟು ಏನು ಮಾಡೋದು ಅಂತ ಅವಳು ಹೇಳಿದ್ಲು.

ಆಗ ತಲೆಯ ಮೇಲೆ ತೂಗ್ತಿದ್ದ ಕತ್ತಿಯಿಂದ ತಪ್ಪಿಸಿಕೊಳ್ಳೋದಕ್ಕೆ 5ಲಕ್ಷ ರೂಪಾಯಿ ಹಣವನ್ನ ತಂದು ನಂದಿನಿಲೇಔಟ್ ಬಸ್ ಸ್ಟ್ಯಾಂಡ್ ಬಳಿ ಕೊಟ್ಟು ಹೋಗಿದ್ರು. ಹೀಗೆ ಇಡೀ ಫ್ಯಾಮಿಲಿ ಅವರನ್ನ ಬೆದರಿಸಿ ಬರೋಬ್ಬರಿ 75ಲಕ್ಷ ರೂಪಾಯಿ ದೋಚಿದ್ರು. ಆದ್ರೆ ತಾನು ಇವರ ಮೋಸದ ಜಾಲಕ್ಕೆ ಬಿದ್ದಿದ್ದೇನೆ ಅನ್ನೋದು ಆತನಿಗೆ ಗೊತ್ತಾಗಲೇ ಇಲ್ಲ. ಬೇಬಿ ಕೊಲೆಯಾಗಿದ್ದಾಳೆ ಆ ಕೊಲೆಯಿಂದ ತಪ್ಪಿಸಿಕೊಳ್ಳೋದಕ್ಕೆ ನಾನು ಹಣ ಕೊಡ್ತಿದ್ದೀನಿ ಅಂತ ಅಂದುಕೊಂಡಿದ್ರು. ಅಲ್ಲದೆ ತಾನು ಹಣ ಕೊಟ್ಟಿಲ್ಲ ಅಂತ ಜೈಲಿಗೆ ಹೋಗಬೇಕಾಗುತ್ತೆ ಅಂತ ಅಂದುಕೊಂಡಿದ್ರು. ಹೀಗಾಗಿ ಅವ್ರು ಕೇಳಿದಾಗೆಲ್ಲಾ ಹಣವನ್ನ ನೀಡಿದ್ರು.

ಹೀಗೆ ಸಾಕಷ್ಟು ದಿನಗಳಿಂದ ಕ್ಯಾಟರಿಂಗ್ ಅಂಕಲ್ ಅನ್ನ ಹಿಂಡಿ ಹಿಪ್ಪೆ ಮಾಡಿದ್ರು. ಅವ್ರು ಹಣ ಕೊಡೋದಿಲ್ಲ ಅಂತಿದ್ದ ಹಾಗೆ ದೂರು ಕೊಡ್ತೀವಿ ಕೊಲೆ ಕೇಸ್ ರೀ ಓಪನ್ ಮಾಡಿಸ್ತೀವಿ ಅಂತ ಬೆದರಿಕೆ ಹಾಕ್ತಿದ್ರು. ಹೀಗಾಗಿ ಇದನ್ನ ಯಾರ ಹತ್ತಿರವು ಹೇಳಿಕೊಳ್ಳಲಾಗದೆ ಹಣವನ್ನ ಕೊಡ್ತಿದ್ರು. ಇವ್ರು ಹಣ ಕೊಟ್ಟು ಕೊಟ್ಟು ಕಳ್ಕೊಂಡ್ರೆ ಅತ್ತ ಬೇಬಿ ಮತ್ತವಳ ಮಗಳು ತಿಂಡ್ಲುವಿನಲ್ಲಿ ಇದೇ ಹಣದಲ್ಲಿ ಒಂದು ಸೈಟ್ ಪರ್ಚೇಸ್ ಮಾಡಿ ಅದ್ರಲ್ಲಿ ಎರಡಂತಸ್ತಿನ ಮನೆಯನ್ನ ಕಟ್ಟಿಸಿಬಿಟ್ರು.

ಒಂದು ಮನೆ ಹಾಳಾಗ್ತಿದ್ರೆ ಇನ್ನೊಂದು ಕಡೆ ಮತ್ತೊಂದು ಮನೆ ಎದ್ದು ನಿಲ್ತಿತ್ತು. ಇನ್ನೇನು ತಾವು ಕಟ್ಟಿಸ್ತಿರೋ ಮನೆಗೆ ಗೃಹ ಪ್ರವೇಶಕ್ಕೆ ರೆಡಿ ಮಾಡ್ಕೊಂಡಿದ್ರು. ಆದ್ರೆ ಆ ಮನೆಯ ಫೈನಲ್ ಟಚ್ ಗೆ ಸ್ವಲ್ಪ ದುಡ್ಡು ಕಡಿಮೆ ಇತ್ತು. ಹೇಗೆ ಮನೆಯನ್ನ ಪೂರ್ತಿ ಕಟ್ಟಿಸಿ ಕೊಟ್ಟಿರೋ ಅವ್ರಿಂದಾನೆ ಮತ್ತೆ ಹಣ ವಸೂಲಿ ಮಾಡೋಣ ಅಂತ ಅಂದುಕೊಂಡು ಹೊಸ ಪ್ಲಾನ್ ಮಾಡಿದ್ರು,ಅಮ್ಮನ ಕೊಲೆ ಕೇಸ್ ಸಿಸಿಬಿಯವರಿಗೆ ಮತ್ತು ರಕ್ಷಣಾ ವೇದಿಕೆಯವರಿಗೆ ಗೊತ್ತಾಗಿದೆ. ಅವ್ರು ನಮ್ಮ ಹತ್ತಿರ ಬಂದು ಕೇಳ್ತಿದ್ದಾರೆ ಈಗ ಏನು ಮಾಡೋದು ಅಂತ ಕೇಳಿದ್ದಾರೆ. ಅಲ್ಲದೆ ನೀವು ಹಣ ಕೊಟ್ರೆ ನಾವು ಅದನ್ನ ಅವರಿಗೆ ಕೊಟ್ಟು ಸೆಟ್ಲ್ ಮಾಡ್ಕೋತ್ತೀವಿ ಅದಕ್ಕೆ 20ಲಕ್ಷ ರೂಪಾಯಿ ಕೊಡಿ ಅಂತ ಹೇಳಿದ್ರು.

ಆದ್ರೆ ಅದಾಗ್ಲೆ ಬರಿಗೈಯಾಗಿದ್ದ ಕೃಷ್ಣ ಇನ್ನು ಹಣಕೊಡೋದಕ್ಕೆ ಆಗಲ್ಲ ಅಂದಿದ್ದಾರೆ. ಆದ್ರೆ ಅವ್ರು ಸಿಸಿಬಿಯವರು ನಿಮ್ಮನ್ನ ಎಳ್ಕೊಂಡು ಹೋಗ್ತಾರೆ ಅದಕ್ಕೆ ಈ ಕೇಸ್ ಅನ್ನ ಹಣ ಕೊಟ್ಟು ಕ್ಲಿಯರ್ ಮಾಡ್ಕೊಳ್ಳೋಣ ಅಂತ ಅಂದಿದ್ದಾರೆ. ಆಗ ಕೃಷ್ಣರಿಗೆ ಅನುಮಾನ ಬಂದಿದೆ. ಇನ್ನು ಸುಮ್ಮನೆ ಕೂತ್ರೆ ಇವ್ರು ನನ್ನನ್ನ ಬಿಡೋದಿಲ್ಲ ಅಂತ ಅನಿಸಿ ನೇರವಾಗಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪ್ರೀತಿಯ ಮೇಲೆ ದೂರು ನೀಡಿದ್ದಾರೆ ಅಲ್ಲದೆ ನಡೆದಿರೋ ಎಲ್ಲಾ ವಿಷಯವನ್ನೂ ಎಳೆಎಳೆಯಾಗಿ ಹೇಳಿದ್ದಾರೆ. ಆಗ ಪೊಲೀಸ್ರು ದೂರು ದಾಖಲಿಸಿಕೊಂಡು ಈ ಫ್ಯಾಮಿಲಿಯನ್ನ ಮಟ್ಟ ಹಾಕೋದಕ್ಕೆ ರೆಡಿಯಾದ್ರು.ಆಗ ಪೊಲೀಸ್ರು ಮತ್ತೆ ಇವರ ಕಡೆಯಿಂದಲೇ ಅವರಿಗೆ ಫೋನ್ ಮಾಡಿಸಿ ಹಣ ಕೊಡ್ತೀವಿ ಪೊಲೀಸ್ರನ್ನು ಕರ್ಕೊಂಡು ಬನ್ನಿ ಇವತ್ತಿಗೆ ಎಲ್ಲಾ ಸೆಟ್ಲ್ ಮಾಡ್ಕೊಂಡು ಕಾಂಪ್ರಮೈಸ್ ಮಾಡ್ಕೊಳ್ಳೋಣ ಅಂತ ಹೇಳಿದ್ರು. ಆಗ ಹಣ ಸಿಗುತ್ತೆ ಅನ್ನೋ ಆಸೆಯಲ್ಲಿ ಹಿಂದೆ ಮುಂದೆ ಯೋಚನೆ ಮಾಡಿದೆ ಪ್ರೀತಿ ಮತ್ತವಳ ಗಂಡ ಮಣಿಕಂಠ ಹಾಗೂ ಪ್ರಸಾದ್ ನಂದಿನಿಲೇಔಟ್ ನ ಬಸ್ ಸ್ಟ್ಯಾಂಡ್ ಗೆ ಬಂದಿದ್ದಾರೆ. ಅಲ್ಲಿ ಪೊಲೀಸ್ರು ಇವರಿಗಾಗಿ ಹೊಂಚು ಹಾಕಿ ಕಾಯ್ತಿದ್ರು.

ಕೃಷ್ಣ ಹಣ ಕೊಡೋದಕ್ಕೆ ಅಂತ ಅವರನ್ನ ಕರೆಸಿಕೊಂಡು ಮಾತನಾಡ್ತಿರೋವಾಗ ಪೊಲೀಸ್ರು ಅವರನ್ನೆಲ್ಲಾ ರೆಡ್ ಹ್ಯಾಂಡ್ ಆಗಿ ಹಿಡಿದಿದ್ರು. ಆಗ ಫ್ಯಾಮಿಲಿಯ ಮೇನ್ ಪಿಲ್ಲರ್ ಬೇಬಿ ಕೂಡಾ ಸಿಕ್ಕಿಬಿದ್ದಿದ್ದಾಳೆ. ಹಣಕ್ಕಾಗಿ ಇವ್ರು ಆಕೆ ಸತ್ತ ನಾಟಕ ಮಾಡಿದ್ರು ಅನ್ನೋದು ಕೃಷ್ಣಗೆ ಆಗ ಗೊತ್ತಾಗಿದೆ. ನಂತ್ರ ಪೊಲೀಸ್ರು ಎಲ್ಲರನ್ನ ಸ್ಟೇಷನ್ ಗೆ ಕರ್ಕೊಂಡು ಹೋಗಿ ಕಾಫಿ ಟೀ ಕೊಟ್ಟು ವಿಚಾರಿಸಿದಾಗ ಎಲ್ಲಾ ಬಾಯಿಬಿಟ್ಟಿದ್ದಾರೆ. ಅಲ್ಲದೆ ಇವರ ದುಡ್ಡಲ್ಲೇ ಮನೆ ಕಟ್ಟಿಸಿರೋದನ್ನ ತೋರಿಸಿದ್ದಾರೆ.ಇದೀಗ ಪೊಲೀಸ್ರು ನಾಲ್ಕ ಜನರನ್ನ ಬಂಧಿಸಿ ಅವರಿಂದ ಅವರಿಂದ 11ಲಕ್ಷ ರೂಪಾಯಿ ಹಣವನ್ನ ರಿಕವರಿ ಮಾಡಿದ್ದಾರೆ. ಶ್ರಮವಿಲ್ಲದ ಕಾಸು ಮಾಡಬೇಕು ಅನ್ನೋ ಆಸೆಗೆ ಬಿದ್ದ ತಾಯಿ ಮಗಳು ತಮ್ಮ ಫ್ಯಾಮಿಲಿ ಸಮೇತ ಈಗ ಜೈಲು ಸೇರಿದ್ದಾರೆ. ಸಿಕ್ಕಿದ್ದಷ್ಟು ಸಿಕ್ತು ಅಂತ ಅವತ್ತೇ ಎಲ್ಲಾ ಕ್ಲಿಯರ್ ಮಾಡ್ಕೊಂಡಿದ್ರೆ ಜೈಲಿಗೆ ಹೋಗೋದಾದ್ರು ತಪ್ಪುತ್ತಿತ್ತು. ಆದ್ರೆ ಅತಿಯಾಸೆಗೆ ಬಿದ್ದು ಫ್ಯಾಮಿಲಿ ಜೈಲಲ್ಲಿ ಪಶ್ಚತ್ತಾಪ ಪಡ್ತಿದೆ. ಆಂಟಿ ಆಸೆಗೆ ಬಿದ್ದು ಸರ್ವಸ್ವವನ್ನು ಕಳೆದುಕೊಂಡ ಅಂಕಲ್ ಈಗ ಸ್ವಲ್ಪ ರಿಲೀಫ್ ಆಗಿದ್ದಾರೆ.

 

LEAVE A REPLY

Please enter your comment!
Please enter your name here