Home Crime ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆ ಮೇಲಿನ ಬಟ್ಟೆ ಎಳೆದು ಅನುಚಿತ ವರ್ತನೆ..! ಸ್ಥಳೀಯರು ಯುವಕರನ್ನು ಹಿಡಿದು ಹಿಗ್ಗಾಮುಗ್ಗಾ...

ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆ ಮೇಲಿನ ಬಟ್ಟೆ ಎಳೆದು ಅನುಚಿತ ವರ್ತನೆ..! ಸ್ಥಳೀಯರು ಯುವಕರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿತ…

752
0
SHARE

ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆ ಮೇಲಿನ ಬಟ್ಟೆ ಎಳೆದು ಅನುಚಿತ ವರ್ತನೆ ತೋರಿದ ಇಬ್ಬರು ಯುವಕರಿಗೆ ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣ ಸೊಂಡೆಕೊಪ್ಪ ರಸ್ತೆಯಲ್ಲಿರೋ ರಾಜೀವಗಾಂಧಿ ಕಾಲೋನಿ ಬಳಿ ನೆಡೆದಿದೆ. ಸುಬಾನ ಎಂಬ ಲಂಬಾಣಿ ಜನಾಂಗದ ಮಹಿಳೆಯೊಬ್ರು ತನ್ನ ಮಗುವಿಗೆ ಎದೆಹಾಲುಣಿಸುತ್ತಿದ್ದ ವೇಳೆ ಆಟೋದಲ್ಲಿ ಬಂದ ತಾಲ್ಲೂಕಿನ ಮೋಟಗಾನಹಳ್ಳಿ.

ಗ್ರಾಮದ ಕುಮಾರ ಮತ್ತು ಹೊರರಾಜ್ಯದ ಇಂಬ್ರಾನ್ ಹಾಗೂ ಮತ್ತೋರ್ವ ಆಕೆಯ ಮೈಮೇಲಿನ ಬಟ್ಟೆ ಹರಿದು ಅಸಭ್ಯ ವರ್ತನೆ ತೋರಲು ಮುಂದಾಗಲು ಯತ್ನಿಸುತ್ತಿದ್ದಂತೆ ಚಿರಾಡಿದ್ದಾಳೆ.

ಇದೇ ವೇಳೆ ಆಸುಪಾಸಿನಲ್ಲಿದ್ದ ಆಕೆಯ ಜನಾಂಗದ ಜನ್ರು ಸೇರಿದಂತೆ ಕೆಲ ಸಾರ್ವಜನಿಕರು ಆ ಮೂವರನ್ನ ಹಿಡಿಯಲು ಹೋದಾಗ ಮೂವರ ಪೈಕಿ ಓರ್ವ ಪರಾರಿಯಾಗಿದ್ದು, ಕುಮಾರ ಮತ್ತು ಇಂಬ್ರಾನ್ ನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮಗ್ಗಾ ಥಳಿಸಿ ನೆಲಮಂಗಲ ಟೌನ್ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here