ಮಟನ್ ಸಾಂಬರ್ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಗತಿಪುರದಲ್ಲಿ ನಡೆದ ಘಟನೆಯಲ್ಲಿ 44 ವರ್ಷದ ಗೋಪಾಲ್ ಕೊಲೆ ಮಾಡಲಾಗಿದೆ. ರುದ್ರಮ್ಮ ಪತ್ನಿಯನ್ನು ಕೊಲೆಗೈದ ಮಹಿಳೆ…
ಕುಡಿದು ಮನೆಗೆ ಬಂದಿದ್ದ ಗೋಪಾಲ್ ಮಾಂಸದ ಸಾರು ಮಾಡುವಂತೆ ಕ್ಯಾತೆ ತೆಗೆದಿದ್ದಾನೆ. ಈ ವಿಚಾರಕ್ಕೆ ರುದ್ರಮ್ಮ ಹಾಗೂ ಗೋಪಾಲ್ ನಡುವೆ ಜಗಳ ನಡುವೆ ಜಗಳ ನಡೆದಿದೆ. ಆಗ ರುದ್ರಮ್ಮ ಪೋಷಕರ ಸಹಾಯದಿಂದ ಗೋಪಾಲ್ ಕೈಕಾಲು ಕಟ್ಟಿ ರೂಂ ನಲ್ಲಿ ಮಲಗಿಸಿದ್ರು …
ತಡ ರಾತ್ರಿ ಎದ್ದ ಗೋಪಾಲ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಇದ್ರಿಂದ ಆಕ್ರೋಶಗೊಂಡ ರುದ್ರಮ್ಮ ಆಕ್ರೋಶ ಗೊಂಡ ರುದ್ರಮ್ಮ ಸೀರೆಯಿಂದ ಉಸಿರುಗಟ್ಟಿಸಿ ಪತಿ ಹತ್ಯೆಮಾಡಿದ್ದಾಳೆ…
ಬಳಿಕ ಪತಿಯು ಅನಾರೋಗ್ಯ ದಿಂದ ಸಾವನ್ನಪ್ಪಿರುವ ಬಗ್ಗೆ ಪ್ರಚಾರ ಮಾಡಿದ್ದಾಳೆ. ಅನುಮಾನ ಗೊಂಡ ಪೊಲೀಸ್ರಿಂದ ವಿಚಾರಣೆ ವೇಳೆ ಸತ್ಯ ಬೆಳಕಿಗೆ ಬಂದಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…