Home Crime ಮಠಾಧಿಪತಿಯೇ ರಿಯಲ್ ಎಸ್ಟೇಟ್ ದಂಧೆ “ಕಿಂಗ್ ಪಿನ್”…?! ಕಾವಿಯೊಳಗೆ ಥಕಥೈ ಎಂದು ಕುಣಿಯುತ್ತಿತ್ತು ಭೂಮಿಯ ಆಸೆ…?

ಮಠಾಧಿಪತಿಯೇ ರಿಯಲ್ ಎಸ್ಟೇಟ್ ದಂಧೆ “ಕಿಂಗ್ ಪಿನ್”…?! ಕಾವಿಯೊಳಗೆ ಥಕಥೈ ಎಂದು ಕುಣಿಯುತ್ತಿತ್ತು ಭೂಮಿಯ ಆಸೆ…?

524
0
SHARE

ನಿಮಗೆಲ್ಲ ಕಾವಿ ಅಂದ್ರೆ ಏನು..? ಅದರ ಮಹತ್ವ ಎಂಥಹುದು ಅನ್ನೋದು ಗೊತ್ತಿದೆ. ಕಾವಿ ಹಾಕಿದರವರು ಧರ್ಮಾತ್ಮ, ಅವರು ದೇವರಿಗೆ ಸಮಾನ ಅನ್ನೋ ನಂಬಿಕೆ ಇಂದಿಗು ಸಮಾಜದಲ್ಲಿದೆ. ಸಮಾಜದಲ್ಲಿ ಮನುಷ್ಯನಿಂದ ಕಾವಿಗೆ ಬೆಲೆ ಬಂದುದಕ್ಕಿಂತ ಹೆಚ್ಚಾಗಿ ಕಾವಿ ಹಾಕಿ ಬೆಲೆ ಗಿಟ್ಟಿಸಿಕೊಂಡವರೇ ಹೆಚ್ಚು. ಹೀಗಾಗಿಯೇ ಇಂದಿಗು ಸಾಮಾನ್ಯ ವ್ಯಕ್ತಿಯು ಕಾವಿಯನ್ನ ಹಾಕಿಕೊಂಡು ರಸ್ತೆ ಮೇಲೆ ಹೊರಟ್ರು ಜನಾ ನಮಸ್ಕಾರ ಮಾಡೋದು.  ಕೈಮುಗಿದು ನಿಲ್ಲೋದು. ಇದೆ ಕಾರಣಕ್ಕೆ ಕಾವಿ ಪವಿತ್ರ ಅಂತ ಕರೆಯಿಸಿಕೊಳ್ಳೋದು.ಆದ್ರೆ ಇತ್ತೀಚೆಗೆ ನಮ್ಮ ನಡುವೆ ನಡೆಯುತ್ತಿರುವ ಘಟನಾವಳಿಗಳನ್ನ ನೋಡಿದಾಗ ಕಾವಿ ಹಾಕಿಕೊಂಡು ಕೆಲ ವ್ಯಕ್ತಿಗಳೂ ಅನಾಚಾರ ಮಾಡುವ ಮೂಲಕ ಕಾವಿಗೆ ಕಳಂಕ ತರುತ್ತಿದ್ದಾರೆ.

ಅಷ್ಟಕ್ಕೂ ಇಂಥ ಘಟನೆ ನಡೆದಿರೋದು ಬೇರೆಲ್ಲು ಅಲ್ಲ. ಬಸವಣ್ಣ ಹುಟ್ಟಿದ ನಾಡು, ಸಂತ ಶರಣರ ಬಿಡು ಅಂತ ಕರೆಯಿಸಿಕೊಳ್ಳೊ ವಿಜಯಪುರದಲ್ಲಿ. ಅಷ್ಟಕ್ಕೂ ಸ್ವಾಮಿಜೀಯ ಲ್ಯಾಂಡ್ ಡೀಲಿಂಗ್ ನಲ್ಲಿ ಸಿಕ್ಕು ಪ್ರಾಣ ಬಿಟ್ಟ ಆ ಹುಡುಗ ಬೇರಾರು ಅಲ್ಲ, ಈ ಪೋಟೊದಲ್ಲಿ ಕಾಣಿಸ್ತಿದ್ದಾನೆ ನೋಡಿ.. ಹೆಸ್ರು ಬಸವರಾಜ್ ಶಿರಾಣಿ ಅಂತ. ವಯಸ್ಸು ಈಗೀನ್ನು 22. ಖುದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೋಲಾರ ಪಟ್ಟಣದ ನಿವಾಸಿ.ಆಸ್ತಿ ಲೇವಾದೇವಿ ವಿಚಾರದಲ್ಲಿ ಬರೊಬ್ಬರಿ 28 ಲಕ್ಷ ರೂಪಾಯಿಯನ್ನ ಕಳೆದುಕೊಂಡ ಬಸವರಾಜ್ ಶಿರಾಣಿ ಅಕ್ಷರಶಃ ಕಂಗಾಲಾಗಿದ್ದ. ಹೀಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವಕ ಕಳೆದ ಡಿಸೆಂಬರ್ 22 ರಂದು ಕೊಲಾರ ಪಟ್ಟಣದ ತನ್ನ ಸ್ವಂತ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಅರೇ… ಒಮ್ಮಿಂದ್ದೊಮ್ಮೆಲೆ ಯುವಕ ಲಕ್ಷಾಂತರ ರೂಪಾಯಿ ಕಳೆದುಕೊಂಡು ಆಘಾತಗೊಂಡಿದ್ದಾನೆ. ಇದೆ ಉದ್ವೇಗದಲ್ಲಿ ನೇಣು ಬಿಗಿದುಕೊಂಡಿರಬಹುದು ಅಂತ ನೀವು ಅಂದುಕೊಳ್ಬಹುದು. ಆದ್ರೆ ಯುವಕನ ಸಾವಿಗೆ ಕಾರಣವಾಗಿರೋದೆ ಬೇರೆ ವಿಚಾರ..ಕೇವಲ ಹಣ ಕಳೆದುಕೊಂಡ ಆಘಾತದಲ್ಲಿ ನಡೆದ ಆತ್ಮಹತ್ಯೆ ಅಲ್ಲ ಇದು. ಈ ಸಾವಿನ ಹಿಂದೆ ಪವಿತ್ರ ಕಾವಿತೊಟ್ಟ ಆಸಾಮಿಯೊಬ್ಬನ ಕೈವಾಡವಿದೆ ಅನ್ನೋ ಆರೋಪವನ್ನ ಸ್ವತಃ ಬಸವರಾಜ್ ತಾಯಿ ಮಾಡ್ತಿದ್ದಾಳೆ. ಕೇವಲ ಆರೋಪ ಮಾಡಿಲ್ಲ. ಕೊಲಾರ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಮಗನ ಆತ್ಮಹತ್ಯೆಗೆ ಕಾರಣ ಸ್ವಾಮೀಜಿಗಳೇ ಅಂತ ಕಂಪ್ಲೆಂಟ್ ಕೂಡ ನೀಡಿದ್ದಾಳೆ.

ಅಷ್ಟಕ್ಕೂ ಆ ಕಾವಿದಾರಿ ಯಾರು ಅನ್ನೋ ಕುತುಹಲ ನಿಮ್ಮನ್ನ ಕಾಡ್ತಿರಬಹುದು. ಆತ ಬೇರಾರು ಅಲ್ಲಾ.. ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣದಲ್ಲಿ ಪುಲ್ ಹವಾ ಮಾಡಿರುವ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ. ಇದೆ ಸ್ವಾಮೀಜಿ ಮೇಲೆ ಈಗ ಕೋಲಾರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ಅನ್ವಯ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಇದೆ ಪ್ರಕರಣ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಸ್ವಾಮೀಜಿಗಳು ಹಾಕಿದ್ದ ಜಾಮೀನು ಅರ್ಜಿಯನ್ನು ಕೋರ್ಟ ವಜಾ ಮಾಡಿದೆ ಅನ್ನೋದೆ ಅಸಲಿ ವಿಚಾರ..ದಿಗಂಬರ ಮಠದ ಸ್ವಾಮಿ ಕಲ್ಲಿನಾಥ ಶ್ರೀ.. ಕೇವಲ ಆಧ್ಯಾತ್ಮ, ಭಕ್ತರಿಗೆ ಪ್ರವಚನ ನೀಡುತ್ತ ಸುಮ್ಮನಿದ್ದಿದ್ದರೇ ಇಂದು ಇವ್ರ ವಿರುದ್ಧ ಇಂಥ ಕೇಸೊಂದು ದಾಖಲಾಗ್ತಿರಲಿಲ್ಲ.

ಇನ್ ಪ್ಯಾಕ್ಟ್.. ಈ ಸುದ್ದಿಯನ್ನು ನಾವು ಮಾಡೋ ಜರುರತ್ತು ಬರ್ತಿರಲಿಲ್ಲ. ಆದ್ರೆ ಕಲ್ಲಿನಾಥ ಸ್ವಾಮೀ ಹುಟ್ಟು ಗುಣವೋ ಏನೋ ಆಗಾಗ್ಗ ಲ್ಯಾಂಡ್ ಡಿಲೀಂಗ್ ಗಳಲ್ಲಿ ತಲೆ ಹಾಕ್ತಿದ್ರು. ಅದ್ರಲ್ಲು ಬಡವರ ಆಸ್ತಿ ಕಂಡ್ರೆ ಕಲ್ಲಿನಾಥರಿಗೆ ಅದೆಲ್ಲಿಲ್ಲದಿರುವಂತ ವ್ಯಾಮೋಹ..! ಇಂಥ ಹತ್ತಾರು ಲ್ಯಾಂಡ್ ಡೀಲಿಂಗ್ ಕೇಸ್ ಗಳಲ್ಲಿ  ಕೈ ಹಾಕಿ ಬೇಜಾನ್ ದುಡ್ಡು ಮಾಡಿಕೊಂಡಿದ್ರು. ಆದ್ರೆ ಕೊನೆಗೆ ಬಸವರಾಜ್ ಶಿರಾನಿ ಅನ್ನೋ ಹುಡುಗನ ಲ್ಯಾಂಡ್ ನ್ನ ಡೀಲ್ ಅಡಿ ಶ್ರೀಗಳು ಸಿಕ್ಕಿ ಹಾಕಿಕೊಂಡಿದ್ದಾರೆ..ಅಷ್ಟಕ್ಕು ಆ ಲ್ಯಾಂಡ್ ಡೀಲಿಂಗ್ ಹೆಂಥದ್ದು… ಆ ಲ್ಯಾಂಡ್ ಡೀಲಿಂಗ್ ಅದ್ ಹೇಗೆ ಯುವಕನ ಪ್ರಾಣಕ್ಕೆ ಕುತ್ತಾಯ್ತು ಅನ್ನೋದನ್ನ ಹೇಳೋದಕ್ಕು ಮೊದಲು, ಆತ್ಮ ಹತ್ಯೆ ಮಾಡಿಕೊಂಡ ಬಸವರಾಜ್ ಶಿರಾನಿ ಮನೆಯವರು ಹೇಳೋದೇನು..

ಶಿರಾನಿ ಕುಟುಂಬದವರ ಆಸ್ತಿ ವಿಚಾರಕ್ಕೆ ಕಲ್ಲಿನಾಥ ಸ್ವಾಮೀಜಿ ಶಿರಾಣಿ ಕುಟುಂಬದ ಬಸವರಾಜ್ ಶಿರಾನಿ, ತಾಯಿ ಸುವರ್ಣಳಿಗೆ ಹೊಡಿ, ಬಡಿ ಮಾಡಿದ್ದರಂತೆ. ಪ್ರತಿ ನಿತ್ಯ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ. ಸಾಲದ್ದಕ್ಕೆ ಜೀವ ಬೆದರಿಕೆ ಕೂಡ ಹಾಕಿದ್ದನಂತೆ. ಸ್ವಾಮೀಜಿಗಳು ನಡೆಸಿದ ಲ್ಯಾಂಡ್ ಡಿಲೀಂಗ್ ವಿಚಾರವನ್ನ ಮಾತನಾಡಲು ಸುವರ್ಣ ಹಾಗೂ ಮಗ ಬಸವರಾಜ್ ಶಿರಾಣಿ ದಿಗಂಬರೇಶ್ವರ ಮಠಕ್ಕೆ ಹೋಗಿದ್ದ ವೇಳೆ ಅಲ್ಲಿ ಕಲ್ಲಿನಾಥ ಸ್ವಾಮೀಜಿ ಹಾಗೂ ಆತನ ತಮ್ಮ ಸಂಕಪ್ಪಯ್ಯ ಸೇರಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೊ ಗಂಭೀರ ಆರೋಪವನ್ನ ಸುವರ್ಣ ಮಾಡಿದ್ದಾರೆ.

ಹೀಗಾಗಿ ತಮ್ಮ ಮಗ ಮನನೊಂದು ನೇಣಿಗೆ ಶರಣಾಗಿದ್ದಾನೆ. ತಮ್ಮ ಮಗನ ಸಾವಿಗೆ ಆರೋಪಿಗಳಾದ ರವಿಂದ್ರ ಶಿರಾನಿ, ಕಲ್ಲಿನಾಥ ಸ್ವಾಮಿ ಹಾಗೂ ಆತನ ಸಹೋದರ ಸಂಕಪ್ಪಯ್ಯ ಕಾರಣ ಎಂದು ಸುವರ್ಣ ಆರೋಪಿಸಿದ್ದಾಳೆ.ಸ್ವಾಮಿಗಳೇ ಹೀಗ್ಯಾಕೆ ಮಾಡಿದ್ರೆ ಅಂತ ಮಠಕ್ಕೆ ಹೋದ್ರೆ ಮರ್ಯಾದೆ ಬಿಟ್ಟು ಸ್ವಾಮಿಗಳು ಅಮ್ಮ ಮಗನ ಮೇಲೆ ಹಲ್ಲೆ ಮಾಡಿದ್ರು. ಅಷ್ಟೇ ಅಲ್ಲ ಇನ್ನೊಂದು ಸಾರಿ ಆಸ್ತಿ ಗೀಸ್ತಿ ಅಂತ ಬಂದ್ರೆ ನೆಟ್ಟಗಿರೋದಿಲ್ಲ ಅಂತ ಗುಡುಗಿದ್ರು. ಮೊದಲೇ ಪ್ರಭಾವಿ ಮಠಾಧೀಶರು ಇವರನ್ನ ಎದುರು ಹಾಕ್ಕೊಂಡ್ರೆ ಅನ್ನ ಸಿಗುತ್ತ ಅಂತ ಯೋಚನೆ ಮಾಡಿದ್ರು.

ವಿಜಯಪುರ ಜಿಲ್ಲೆ ಅಂದ್ರೆ ಅದು ಬಸವಣ್ಣ ಹುಟ್ಟಿದ ನಾಡು. ಹೀಗಾಗೇ ರಾಷ್ಟ್ರದಲ್ಲೆ ವಿಜಯಪುರ ಜಿಲ್ಲೆಗೆ ಇರುವ ಮಹತ್ವ ಬೇರೆಯದ್ದಾಗಿದೆ. ಕ್ರಾಂತಿಯೋಗಿಗಳಿಗೆ ಜನ್ಮ ನೀಡಿದ ಈ ಜಿಲ್ಲೆಯಲ್ಲಿ ನೂರಕ್ಕು ಅಧಿಕ ಮಠಗಳಿವೆ. ವಿವಿಧ ಆಯಾಮಗಳ ಸಂಪ್ರದಾಯಗಳ ನೆಲೆವೀಡು ಈ ವಿಜಯಪುರ ಜಿಲ್ಲೆ. ಆದ್ರೆ ಜಿಲ್ಲೆಯ ಇತಿಹಾಸಕ್ಕೆ ಈ ಕಲ್ಲಿನಾಥ ಸ್ವಾಮಿ ಅಪವಾದವೆನ್ನುವಂತಾಗಿದೆ. ಮಠದ ಕಾರ್ಯಗಳ ಬಿಟ್ಟು ಜಮೀನುಗಳ ಕಬ್ಜಾ, ಲ್ಯಾಂಡ್ ಡಿಲೀಂಗ್, ಬಡ್ಡಿ ದಂಧೆಯಂತ ಅಕ್ರಮ ಆರೋಪ ಇಂದಿಗೂ ಕಲ್ಲಿನಾಥ ಸ್ವಾಮೀ ಮೇಲಿದೆ. ಇವುಗಳ ಬಗ್ಗೆ ಹೇಳೊಕೆ ಮೊದಲು ಒಂದು ಸಾವಿಗೆ ಕಾರಣವಾದ ಆ ಲ್ಯಾಂಡ್ ಡಿಲೀಂಗ್ ಏನು ಅನ್ನೋದನ್ನ ಹೇಳ್ತೀನಿ ಕೇಳಿ..

ಸದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಸವರಾಜ ಶಿರಾನಿಯ ಸಂಬಂಧಿ ರವಿಂದ್ರ ಶಿರಾನಿ ಎಂಬಾತ ತನ್ನ ಹತ್ತು ಎಕರೆ ಜಮೀನನ್ನು ಖರೀದಿಗೆ 28 ಲಕ್ಷ ರೂಪಾಯಿಗಳನ್ನು ಬಸವರಾಜ ತಂದೆ ಸಂಗನಬಸಪ್ಪನಿಂದ ಪಡೆದಿದ್ದನಂತೆ. ನಂತ್ರ ಸಂಗನಬಸವ ಹಾಗೂ ಕುಟುಂಬದವರು ಜಮೀನು ಕಬ್ಜಾ ಮಾಡಿಕೊಂಡು 20 ವರ್ಷದಿಂದ ಸಾಗುವಳಿ ಮಾಡುತ್ತಿದ್ರು. ಈ ವೇಳೆ ತಮ್ಮ ನಡುವೆ ಆದ ಒಪ್ಪಂದದಂತೆ ಜಮೀನನ್ನ ರವೀಂದ್ರ ಸಂಗನಬಸಪ್ಪನಿಗೆ ಜಮೀನು ನೊಂದಣಿ ಮಾಡಿಕೊಡಬೇಕಿತ್ತು. ಆದ್ರೆ ಇಲ್ಲಿ ನಡೆದಿದ್ದೆ ಬೇರೆ. ಈ ಲಕ್ಷಾಂತರ ಮೌಲ್ಯದ ಲ್ಯಾಂಡ್ ಮಾರಾಟ ನಡೆದಿರುವ ಬಗ್ಗೆ ತಿಳಿದುಕೊಂಡ ಕಲ್ಲಿನಾಥ ಸ್ವಾಮೀ ರವೀಂದ್ರ ಶಿರಾನಿಗೆ ಈ ಜಮೀನು ತನಗೆ ಕೊಡಬೇಕು. ಮಠಕ್ಕೆ ಈ ಜಮೀನು ಸೇರಲಿ ಅಂತ ಒತ್ತಡ ಹೇರಿ ಬಿಟ್ಟಿದ್ದನಂತೆ. ಹೀಗಾಗಿ ರವೀಂದ್ರ ನಿಯತ್ತು ಮರೆತು ಕಲ್ಲಿನಾಥ ಸ್ವಾಮಿಗೆ ಜಮೀನು ನೀಡಿದ್ದ. ಆದ್ರೆ ಲ್ಯಾಂಡ್ ವ್ಯವಹಾರದ ಬಗ್ಗೆ ತಿಳಿದಿದ್ದ ಸ್ವಾಮಿಜೀ ಇದ್ರಲ್ಲಿ ಕೈಹಾಕದೆ ರವೀಂದ್ರ ಶಿರಾನಿಗೆ ಬುದ್ದಿವಾದ ಹೇಳ್ಬೇಕಿತ್ತು. ಆದ್ರೆ ಹಾಗೇ ಮಾಡದ ಸ್ವಾಮಿ ಕಲ್ಲಿನಾಥ 28 ಲಕ್ಷ ರೂಪಾಯಿ ಮೌಲ್ಯದ ಜಮೀನು ಖರೀದಿ ಮಾಡಿಬಿಟ್ಟಿದ್ದ.

ಇದಿಷ್ಟೇ ಆಗಿಲ್ಲ.. ರವಿಂದ್ರ ಶಿರಾನಿ ಈ ಕಲ್ಲಿನಾಥ ಸ್ವಾಮೀಜಿಗೆ ಜಮೀನು ಮಾರಾಟ ಮಾಡಿದ್ದಾನೆ. ಈ ಸುದ್ದಿ ಕೇಳಿದ ಅವರು ರವಿಂದ್ರನಿಗೆ ನಮ್ಮ ಹಣ ವಾಪಸ್ಸು ಕೊಡು ಎಂದು ಕೇಳಿದ್ದಾರೆ. ಆದ್ರೆ ರವಿಂದ್ರ ಜಮೀನನ್ನು ಸ್ವಾಮೀಜಿಗೆ ಮಾರಿದ್ದೇನೆ, ಹಣ ಕೊಡಲು ಆಗುವುದಿಲ್ಲ ಎಂದಿದ್ದನಂತೆ. ಇದರಿಂದ ಶಾಕ್ ಗೆ ಒಳಗಾದ ಬಸವರಾಜ ಹಾಗೂ ಆತನ ತಾಯಿ ಸುವರ್ಣ ಸ್ವಾಮೀಜಿ ಬಳಿ ನ್ಯಾಯ ಕೇಳಲು ಬಂದಿದ್ರು. ಸ್ವಾಮೀಜಿ ನಾವು ಆ ಭೂಮಿಗೆ ಹಣ ಕೊಟ್ಟಿದ್ದೇವೆ,ನೀವು ರವಿಂದ್ರನಿಂದ ಭೂಮಿ ಖರೀದಿಸಬೇಡಿ. ಒಂದು ವೇಳೆ ಖರೀದಿಸಿದ್ರೆ ಆತ ನಮ್ಮಿಂದ ಪಡೆದ 28 ಲಕ್ಷ ರೂಪಾಯಿಗಳನ್ನು ನಮಗೆ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ ತಾಯಿ-ಮಗ. ಈಗಲಾದರು ಕಲ್ಲಿನಾಥ ಸ್ವಾಮೀ ಆಗಿದ್ದನ್ನ ಸರಿಪಡೆಸಿ ಹಣ ವಾಪಸ್ ಕೊಡಿಸುವಂತೆ ಮಾಡಬೇಕಿತ್ತು. ಇಲ್ಲವೇ ಜಮೀನು ಖರೀದಿಯನ್ನೆ ಕೈ ಬಿಡಬೇಕಿತ್ತು. ಆದ್ರೆ ಸ್ವಾಮೀ ಮಾಡಿದ್ದನ್ನ ಕೇಳಿದ್ರೆ ನೀವು ಹೌಹಾರ್ತಿರಿ.. ಯಾಕಂದ್ರೆ ಕಲ್ಲಿನಾಥ ಸ್ವಾಮೀಜಿ ಹಾಗೂ ಆತನ ತಮ್ಮ ಸಂಕಪ್ಪಯ್ಯ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ. ಈ ಕುರಿತು ಊರಲ್ಲಿ ನ್ಯಾಯ ಪಂಚಾಯತಿಯೂ ಸಹ ಆಗಿತ್ತಂತೆ. ಹಣ ಹಾಗೂ ಮಾನ ಹೋದ ಮೇಲೆ ಹೇಗೆ ಬದುಕುವುದು ಎಂದು ಮನನೊಂದ ಬಸವರಾಜ ನೇಣಿಗೆ ಶರಣಗಾಗಿದ್ದಾನೆ.

ಇನ್ನು ದೂರು ದಾಖಲಾದ ಸುದ್ದಿ ತಿಳಿದು ಕಲ್ಲಿನಾಥ ಸ್ವಾಮೀಜಿ ಬಸವನ ಬಾಗೇವಾಡಿಯ ಜೆ ಎಂ ಎಫ್ ಸಿ ಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿ ಕೂಡ ವಜಾಗೊಂಡಿದೆ. ಹೀಗಾಗಿ ಬಂಧನ ಖಚಿತ ಎಂದು ತಿಳಿಯುತ್ತಿದ್ದಂತೆ ಆರೋಪಿಗಳಾದ ರವಿಂದ್ರ ಶಿರಾನಿ,ಕಲ್ಲಿನಾಥ ಸ್ವಾಮೀಜಿ ಹಾಗೂ ಆತನ ಸಹೋದರ ಸಂಕಪ್ಪಯ್ಯ ಈ ಮೂವರೂ ಆರೋಪಿಗಳು ನಾಪತ್ತೆಯಾಗಿದ್ದಾರೆ. ಇಷ್ಟೆಲ್ಲ ರಾದ್ಧಾಂತ ನಡೆದು ಓರ್ವನ ಸಾವಿಗೆ ಕಾರಣರಾದ ಆರೋಪಿಗಳನ್ನು ಮಾತ್ರ ಬಂಧಿಸುವಲ್ಲಿ ಪೊಲೀಸರು ನಿರಾಸಕ್ತಿ ತೋರುತ್ತಿದ್ದಾರೆ. ಇನ್ನು ಈ ಕುರಿತು ಕಲ್ಲಿನಾಥ ಸ್ವಾಮಿಗಳನ್ನ ಕೇಳಿದ್ರೆ ಆಸ್ತಿ ವ್ಯವಹಾರ ನನ್ನ ಸಹೋದರ ಮಾಡಿದ್ದು, ಇದಕ್ಕೂ ನನಗೂ ಸಂಭಂಧವಿಲ್ಲ. ಇನ್ನು ಬಸವರಾಜ ಹಾಗೂ ಆತನ ತಾಯಿ ಬಂದಾಗೆಲ್ಲ ನಾನು ವಿನಯದಿಂದಲೇ ಮಾತನಾಡಿಸಿದ್ದಾನೆ, ಅವರ ಮೇಲೆ ಹಲ್ಲೆ ಮಾಡಿಲ್ಲ.ಆದರೂ ಸಹ ಅವರು ನನ್ನ ಮೇಲೆ ದೂರು ದಾಖಲಿಸಿದ್ದಾರೆ, ಆ ದಿಗಂಬರನ ಆಣೆಗೂ ನನ್ನ ಪಾತ್ರ ಇದರಲ್ಲಿ ಇಲ್ಲ ಎನ್ನುತ್ತಿದ್ದಾನೆ.

ಈಗಲೂ ವಿಜಯಪುರ ಜಿಲ್ಲೆಯಲ್ಲಿ ದಿಗಂಬರೇಶ್ವರ ಮಠದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಸಿದ್ದಾರೂಡಕಿಯ ಮಠ ಅಂತ ಜನರು ಈಗಲು ಭಕ್ತಿ-ಭಾವದಿಂದ ನಡೆದುಕೊಳ್ತಿದ್ದಾರೆ. ಆದ್ರೆ ಸಧ್ಯ ಪೀಠಕ್ಕೆ ಬಂದಿರುವ ಕಲ್ಲಿನಾಥ ಸ್ವಾಮೀಜಿಯ ಬಗ್ಗೆ ಬಹುತೇಕ ಜನರ ಅಭಿಪ್ರಾಯ ಸರಿಯಾಗಿಲ್ಲ. ಇದೊಂದೆ ಲ್ಯಾಂಡ್ ಡಿಲೀಂಗ್ ಅಲ್ಲ, ಬಡ್ಡಿ ದಂದೆ, ಭಕ್ತರ ಜಮೀನುಗಳ ಅತಿಕ್ರಮಣ ಸೇರಿದಂತೆ ಕೊಲೆ ಬೆದರಿಕೆ ಆರೋಪಗಳು ಕಲ್ಲಿನಾಥರ ಮೇಲಿದೆ. ಇನ್ನಾದರು ಪೊಲೀಸರು ಸ್ವಾಮಿಜಿಯನ್ನ ಬಂಧಿಸಿ ಕೋರ್ಟಗೆ ಹಾಜರು ಮಾಡಬೇಕಿದೆ.. ಇಲ್ಲದೆ ಹೋದ್ರೆ ಪವಿತ್ರ ಕಾವಿ ತೊಟ್ಟ ಡೋಂಗಿಗಳ ಅಟಾಟೋಪಕ್ಕೆ ಬ್ರೇಕ್ ಹಾಕುವವರೆ ಇಲ್ಲದಂತಾಗುತ್ತೆ.. 

LEAVE A REPLY

Please enter your comment!
Please enter your name here