Home District “ಮಣ್ಣಿನ ಮಗ” CM ಆದ್ರು ನಿಲ್ಲದ ಅನ್ನದಾತರ ಆತ್ಮಹತ್ಯೆ..?! ಆತ್ಮಹತ್ಯೆ ಮಾಡಿಕೊಂಡು ನನ್ನ ಮನಸ್ಸಿಗೆ ನೋವುಂಟು...

“ಮಣ್ಣಿನ ಮಗ” CM ಆದ್ರು ನಿಲ್ಲದ ಅನ್ನದಾತರ ಆತ್ಮಹತ್ಯೆ..?! ಆತ್ಮಹತ್ಯೆ ಮಾಡಿಕೊಂಡು ನನ್ನ ಮನಸ್ಸಿಗೆ ನೋವುಂಟು ಮಾಡಬೇಡಿ ಎಂದು HDK ಮನವಿ…

384
0
SHARE

ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಮಂಡ್ಯದಲ್ಲಿ ಸಾಲಬಾಧೆಯಿಂದ ಒಂದೇ ಕುಟುಂಬದ ನಾಲ್ವರು ರೈತರು ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ರೈತರ ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ. ಸ್ವಲ್ಪ ಸಮಯ ಕೊಡಿ ಎಂದು ಹೇಳಿದ್ದೆ. ಆದ್ರೆ, ರೈತರು ದುಡುಕಿದ್ದಾರೆ ಎಂದು ತಿಳಿಸಿದ್ದಾರೆ…

ಅವರದ್ದು ಕೌಟುಂಬಿಕ ಸಮಸ್ಯೆಯಾಗಿದ್ದು ,ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರಿಂದ ಮಾಹಿತಿ ಪಡೆದಿದ್ದಾನೆ. ಆ ಕುಟುಂಬ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ನಾನು ರಾಜ್ಯದ ಆರುವರೆ ಕೋಟಿ ಜನರ ಸಮಸ್ಯೆ ನೀಗಿಸುವ ಶಕ್ತಿ ಕೊಡು ಎಂದು ಶಾರದಾಂಬೆ ಬಳಿ ಕೇಳಿಕೊಂಡಿದ್ದೇನೆ…

ಯಾವುದೇ ಸಾಲದ ಸಮಸ್ಯೆ ಇದ್ದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದಯವಿಟ್ಟು ನನ್ನ ಮನಸ್ಸಿಗೆ ನೋವು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.ರೈತ ಕುಟುಂಬ ಸಾಮೂಹಿಕ ಆತ್ಮಹತ್ಯೆ ಬಗ್ಗೆ ಸಚಿವ ಸಿ.ಎಸ್.ಪುಟ್ಟರಾಜು ಪ್ರತಿಕ್ರಿಯಿಸಿದ್ದಾರೆ…

ನಂದೀಶ್ ಕುಟುಂಬ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.ನಂದೀಶ್ ಸಿಎಂ ಜನತಾ ದರ್ಶನದಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದು ಸತ್ಯ.ಸಿಎಂ ಕುಮಾರಸ್ವಾಮಿ ನಂದೀಶ್ ಸಾಲದ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ಕೊಟ್ಟಿದ್ರು.ನಂದೀಶ್ ಗೆ 15 ರಿಂದ 20 ಲಕ್ಷ ಸಾಲ ಇತ್ತು.ಅದರಲ್ಲಿ ಖಾಸಗಿ ಸಾಲ, ಒಡವೆ ಸಾಲ ಹಾಗೂ ಬ್ಯಾಂಕ್ ಸಾಲ ಕೂಡ ಇತ್ತು…

ನೋಟೀಸ್ ಕೊಡದಂತೆ, ಸಾಲ ಮರುಪಾವತಿಗೆ ಒತ್ತಾಯ ಮಾಡದಂತೆ ಬ್ಯಾಂಕ್ ನವರಿಗೆ ಸೂಚನೆ ಸಹ ಕೊಟ್ಟಿದ್ದೆ.ಖಾಸಗಿಯವರು ಸಾಲಕ್ಕೆ ಒತ್ತಡ ಹಾಕದಂತೆ ಪೊಲೀಸರ ಮೂಲಕ ರಕ್ಷಣೆ ಸಹ ಕೊಡಿಸಿದ್ದೆ.ಆದರೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುತ್ತೇವೆ ಎಂದಿದ್ದಾರೆ…

LEAVE A REPLY

Please enter your comment!
Please enter your name here