Home District ಮತ್ತಷ್ಟು ಕುತೂಹಲ ಕೆರಳಿಸಿದ ಜಾರಕಿಹೊಳಿ ಬ್ರದರ್ಸ್..?! ಸಿಎಂ ಜೊತೆ ಚರ್ಚೆ ಬಳಿಕ ಸಿದ್ದರಾಮಯ್ಯ ಭೇಟಿ..!! ದೆಹಲಿಗೆ...

ಮತ್ತಷ್ಟು ಕುತೂಹಲ ಕೆರಳಿಸಿದ ಜಾರಕಿಹೊಳಿ ಬ್ರದರ್ಸ್..?! ಸಿಎಂ ಜೊತೆ ಚರ್ಚೆ ಬಳಿಕ ಸಿದ್ದರಾಮಯ್ಯ ಭೇಟಿ..!! ದೆಹಲಿಗೆ ತೆರಳುವ ಮುನ್ನ ಒಮ್ಮೆ ಮಾತುಕತೆ..

2232
0
SHARE

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸತೀಶ್‍ ಜಾರಕಿಹೊಳಿ ನಡುವೆ ಕಾವೇರಿಯಲ್ಲಿ ಸೋಮವಾರ ರಾತ್ರಿ ಮೊಟಕುಗೊಂಡಿರುವ ಮಾತುಕತೆ ಹಿಂದೆ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಒಂದು ಮಾಹಿತಿ ಪ್ರಕಾರ ವಿಧಾನ ಪರಿಷತ್‍ ನಾಮನಿರ್ದೆಶನ, ನಿಗಮ ಮಂಡಳಿ ನೇಮಕ ಹಾಗೂ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮವರಿಗೆ ಅವಕಾಶ ನೀಡಬೇಕೆಂದು ರಮೇಶ್‍ ಪಟ್ಟು ಹಿಡಿದಿದ್ದು ಸಭೆ ಅರ್ಧಕ್ಕೆ ನಿಲ್ಲುವಂತೆ ಮಾಡಿದೆ ಎನ್ನಲಾಗುತ್ತಿದೆ.

ಇನ್ನೊಂದು ಮಾಹಿತಿ ಪ್ರಕಾರ ರಮೇಶ್‍ ಜಾರಕಿಹೊಳಿ ತಮಗೆ ಬಿಜೆಪಿಯವರು ಡಿಸಿಎಂ ಪಟ್ಟದ ಭರವಸೆ ನೀಡಿದ್ದಾರೆ. ಕಾಂಗ್ರೆಸ್‍ನಲ್ಲಿ ಕೂಡ ಇದೇ ಮಟ್ಟದ ಹುದ್ದೆ ಕಲ್ಪಿಸಿ. ಉತ್ತರ ಕರ್ನಾಟಕ ಭಾಗಕ್ಕೂ ಒಂದು ಡಿಸಿಎಂ ಹುದ್ದೆ ನೀಡಿದಂತೆ ಆಗಲಿದೆ ಎಂಬ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸತೀಶ್‍ ಜಾರಕಿಹೊಳಿ ನಡುವೆ ಕಾವೇರಿಯಲ್ಲಿ ಸೋಮವಾರ ರಾತ್ರಿ ಮೊಟಕುಗೊಂಡಿರುವ ಮಾತುಕತೆ ಹಿಂದೆ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಒಂದು ಮಾಹಿತಿ ಪ್ರಕಾರ ವಿಧಾನ ಪರಿಷತ್‍ ನಾಮನಿರ್ದೆಶನ, ನಿಗಮ ಮಂಡಳಿ ನೇಮಕ ಹಾಗೂ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮವರಿಗೆ ಅವಕಾಶ ನೀಡಬೇಕೆಂದು ರಮೇಶ್‍ ಪಟ್ಟು ಹಿಡಿದಿದ್ದು ಸಭೆ ಅರ್ಧಕ್ಕೆ ನಿಲ್ಲುವಂತೆ ಮಾಡಿದೆ ಎನ್ನಲಾಗುತ್ತಿದೆ.

ಇನ್ನೊಂದು ಮಾಹಿತಿ ಪ್ರಕಾರ ರಮೇಶ್‍ ಜಾರಕಿಹೊಳಿ ತಮಗೆ ಬಿಜೆಪಿಯವರು ಡಿಸಿಎಂ ಪಟ್ಟದ ಭರವಸೆ ನೀಡಿದ್ದಾರೆ. ಕಾಂಗ್ರೆಸ್‍ನಲ್ಲಿ ಕೂಡ ಇದೇ ಮಟ್ಟದ ಹುದ್ದೆ ಕಲ್ಪಿಸಿ. ಉತ್ತರ ಕರ್ನಾಟಕ ಭಾಗಕ್ಕೂ ಒಂದು ಡಿಸಿಎಂ ಹುದ್ದೆ ನೀಡಿದಂತೆ ಆಗಲಿದೆ ಎಂಬ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.ಒಟ್ಟಾರೆ ರಮೇಶ್‍ ಬೇಡಿಕೆ ಏನಿತ್ತೋ, ಸಿದ್ದರಾಮಯ್ಯ ಭರವಸೆ ಹೇಗಿತ್ತೋ ಗೊತ್ತಿಲ್ಲ. ಮಾತುಕತೆ ಮೊಟಕುಗೊಂಡಿದ್ದು, ಬೆಳಗಾವಿ ನಾಯಕರ ಅಸಮಾಧಾನ ಶಮನಗೊಳಿಸುವ ಜವಾಬ್ದಾರಿ ಹೈಕಮಾಂಡ್‍ ಹೆಗಲೇರಿದೆ.

ಇಂದು ಸಂಜೆ ದೆಹಲಿಗೆ ತೆರಳುವ ರಾಜ್ಯ ಕಾಂಗ್ರೆಸ್‍ ನಾಯಕರು ರಮೇಶ್‍ ಹಾಗೂ ಸತೀಶ್‍ ಜಾರಕಿಹೊಳಿ ಅವರ ಬೇಸರ, ಅಸಮಾಧಾನದ ಮಾಹಿತಿಯನ್ನು ಹೈಕಮಾಂಡ್‍ಗೆ ವಿವರಿಸಿಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಇದಾದ ನಂತರ ರಮೇಶ್‍ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವ ಸಾಧ್ಯತೆ ಇದೆ.

ಒಟ್ಟಾರೆ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಅಸಲಿಯಾಗಿ ನಡೆದ ಚರ್ಚೆ ಏನು? ಅಲ್ಲೇನಾಗಿದೆ ಎನ್ನುವ ಬಗ್ಗೆ ಉಭಯ ನಾಯಕರೇ ಸರಿಯಾದ ಮಾಹಿತಿ ನೀಡಬೇಕಿದೆ. ಇಂದು ರಮೇಶ್‍ ಜಾರಕಿಹೊಳಿ ಮಾಧ್ಯಮಗಳಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ರಾಜ್ಯ ಕಾಂಗ್ರೆಸ್‌ನಲ್ಲಿ ಹೆಚ್ಚಾದ 3 ರೀತಿಯ ಬಂಡಾಯ1. ಮಂತ್ರಿಗಿರಿ, ಸಚಿವ ಸ್ಥಾನ ನೀಡುವಂತೆ ಹೆಚ್ಚಿದ ಒತ್ತಡ2. 2. ಬೆಳಗಾವಿ ಜಾರಕಿಹೊಳಿ ಬ್ರದರ್ಸ್‌ ಭಿನ್ನಮತ3. 3. ಮೈತ್ರಿ ಸರ್ಕಾರದಲ್ಲಿ ತಮ್ಮ ಕೆಲಸ ಆಗುತ್ತಿಲ್ಲ ಅಂತ ಅಸಮಾಧಾನ4. ಈ ಮೂರೂ ಬಂಡಾಯ ಶಮನಕ್ಕೆ ‘ಕೈ’ ವರಿಷ್ಠರ ಶತಪ್ರಯತ್ನ…

LEAVE A REPLY

Please enter your comment!
Please enter your name here