Home Cinema ಮತ್ತೆ ಕಮಾಲ್ ಮಾಡೊಕ್ಕೆ ಹೊರಟ ಉಪೇಂದ್ರ..! ಉಪೇಂದ್ರ ಈಗ ಅಧೀರಾ…! ಉಪ್ಪಿ ಅಭಿನಯದ 50ನೇ ಸಿನಿಮಾ..!

ಮತ್ತೆ ಕಮಾಲ್ ಮಾಡೊಕ್ಕೆ ಹೊರಟ ಉಪೇಂದ್ರ..! ಉಪೇಂದ್ರ ಈಗ ಅಧೀರಾ…! ಉಪ್ಪಿ ಅಭಿನಯದ 50ನೇ ಸಿನಿಮಾ..!

324
0
SHARE

ತರ್ಲೆ ನನ್ ಮಗ ಚಿತ್ರಕ್ಕೆ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಿಯಲ್ ಸ್ಟಾರ್ ಉಪೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ ಕ್ರೀಯೇಟಿವ್ ಆಗಿ ಡೈರೆಕ್ಟ ಮಾಡೋ ಉಪೇಂದ್ರ ಸದ್ಯ ಐ ಲವ್ ಯೂ ಚಿತ್ರದಲ್ಲಿ ಬ್ಯುಸಿ. ಹೀಗಿರುವಾಗಲ್ಲೆ ಅವರ ಅಭಿಮಾನಿಗಳಿಗೆ ಒಂದು ಬಿಗ್ ಸರ್ಪ್ರೈಸ್ ಕೂಡ ಕೊಟ್ಟಿದ್ದಾರೆ.ಹೌದು, ರಿಯಲ್ ಸ್ಟಾರ್ ಉಪೇಂದ್ರ ಸದ್ಯ ರಾಜಕೀಯದಲ್ಲಿ ತೊಡಗಿದ್ದು, ಆರ್. ಚಂದ್ರು ನಿರ್ದೇಶನದ, ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್‌ನ ಮೂಡಿಬರುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದರ ಜೊತೆಗೆ ಹೊಸ ವರ್ಷಕ್ಕೆ ಉಪ್ಪಿ ಫ್ಯಾನ್ಸ್‌ಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.ಹೊಸ ನಿರ್ದೇಶಕ ಅಧಿರಾ ಸಂತು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಉಪೇಂದ್ರ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಅಧೀರ ಅಂತಾ ಟೈಟಲ್ ಫಿಕ್ಸ್ ಕೂಡ ಆಗಿದ್ದು, ಗಾಂಧಿನಗರದಲ್ಲಿ ಸದ್ದಿಲ್ಲದೇ ಪ್ರೀ-ಪ್ರೋಡಕ್ಷನ್ ವರ್ಕ್ ಕೂಡ ನಡೆಸುತ್ತಿದೆ ಚಿತ್ರತಂಡ. ಇನ್ನು ಈ ಚಿತ್ರ ಸುಮಾರು ೫೦ ಕೋಟಿ ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿರುವುದು ವಿಶೇಷ.

ಉಪೇಂದ್ರ ಅಭಿನಯದ ೫೦ ನೇ ಸಿನಿಮಾ ಇದಾಗಿದ್ದು, ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ಅಧೀರ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಅಧೀರ ಸಿನಿಮಾ ವಿಭಿನ್ನವಾಗಿ ಮೂಡಿಬರುತ್ತಿದ್ದು, ಇದೊಂದು ಐತಿಹಾಸಿಕ ಕಥೆಯಾದರಿಸಿದ ಚಿತ್ರವಾಗಿದೆಯಂತೆ. ಚಿತ್ರದಲ್ಲಿ ಕರ್ಮಷಿಯಲ್-ಸಸ್ಪೆನ್ಸ್ ಅಂಶಗಳು ಎರಡು ಇದ್ದು, ಚಿತ್ರದಲ್ಲಿ ಉಪ್ಪಿಗೆ ಯಾರು ಜೋಡಿಯಾಗಲಿದ್ದಾರೆ ಅನ್ನೋದೆ ಕುತೂಹಲ.

ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಶೂಟಿಂಗ್ ಶುರು ಮಾಡಲಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ರಿಯಲ್ ಸ್ಟಾರ್ ಉಪೇಂಧ್ರ ಹಾಗೂ ಕನಕಪುರ ಶ್ರೀನಿವಾಸ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಎಲ್ಲ ಅಂದು ಕೊಂಡಂತೆ ಆದ್ರೆ ಉಪ್ಪಿ ಬರ್ತ್ ಡೇಗೆ ೫೦ನೇ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದು ಗಾಂಧಿನಗರ ಅಡ್ಡದಲ್ಲಿ ಕೇಳಿಬರುತ್ತಿದೆ.

ಇನ್ನು ಚಿತ್ರಕ್ಕೆ ರವೀಶ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದು, ಕನಲ್ ಕಣ್ಣನ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಲಿದ್ದಾರೆ. ಈ ಚಿತ್ರದ ಸ್ಪೇಷಲ್ ಏನ್ ಅಂದ್ರೆ ಅರುಣ್ ಸಾಗರ್ ಕಲಾ ನಿರ್ದೇಶನ ಇರಲಿದೆಯಂತೆ.ಐ ಲವ್ ಯೂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪೇಂದ್ರ ತಮ್ಮ ೫೦ನೇ ಚಿತ್ರದ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿತ್ತು. ಆದ್ರೆ ಈ ಅಂತೆ ಕಂತೆ ಬಗ್ಗೆ ರಿಯಲ್ ಸ್ಟಾರ್ ಅಧೀರಾ ಮೂಲಕ ಮತ್ತೆ ಕಮಾಲ್ ಮಾಡೊಕ್ಕೆ ಹೊರಟಿದ್ದಾರೆ.

LEAVE A REPLY

Please enter your comment!
Please enter your name here