Home Crime ಮತ್ತೆ ಗತವೈಭವ ಮೆರೆಯುತ್ತಿದೆ ಹಂಪಿ..! ವಿಶ್ವದ 50 ಪ್ರೇಕ್ಷಣಿಯ ಸ್ಥಳಗಳಲ್ಲಿ ಹಂಪಿಗೆ 2ನೇ ಸ್ಥಾನ..! ನ್ಯೂಯಾರ್ಕ್...

ಮತ್ತೆ ಗತವೈಭವ ಮೆರೆಯುತ್ತಿದೆ ಹಂಪಿ..! ವಿಶ್ವದ 50 ಪ್ರೇಕ್ಷಣಿಯ ಸ್ಥಳಗಳಲ್ಲಿ ಹಂಪಿಗೆ 2ನೇ ಸ್ಥಾನ..! ನ್ಯೂಯಾರ್ಕ್ ಟೈಮ್ಸ್ ನ ವರದಿಯಲ್ಲಿ ಬಿಡುಗಡೆ..!

916
0
SHARE

ವಿಜಯನಗರ ಸಾಮ್ರಾಜ್ಯದ ಹಿರಿಮೆ ಮತ್ತೆ ಪ್ರಕಟಗೊಂಡಿದೆ. ದೇಶ ವಿದೇಶದ ಪ್ರಮುಖ ಪ್ರವಾಸಿ ತಾಣ ಅನ್ನೋ ಗರಿಮೆ ಸಿಕ್ಕಿದೆ. ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ವರದಿಯಲ್ಲಿ ಹಂಪಿಗೆ ಎರಡನೇ ಸ್ಥಾನ ಲಭಿಸಿದೆ. ಈ ಮೂಲಕ ವಿಶ್ವದಲ್ಲಿ ನೋಡಲೇ ಬೇಕಾದ ಪ್ರವಾಸಿ ತಾಣ ಎಂದೆನಿಸಿದೆ.ಗತಕಾಲದಲ್ಲಿ ವೈಭವ ಮೆರದಿದ್ದ ಹಂಪಿಯ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ.

ಹಕ್ಕ ಬುಕ್ಕರು ನಿರ್ಮಿಸಿದ ವಿಜಯನಗರ ಸಾಮ್ರಾಜ್ಯದ ಮೆರಗು ಇನ್ನೂ ಪಸರಿಸುತ್ತಿದೆ. ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ಪ್ರಪಂಚದ ನೋಡಲೇ ಬೇಕಾದ 52 ಪ್ರೇಕ್ಷಣಿಯ ಸ್ಥಳಗಳಲ್ಲಿ 2 ನೇ ಸ್ಥಾನ ಹಂಪಿಗೆ ಸಂದಿದೆ. ಈ ಮೂಲಕ ಹಂಪಿ ತನ್ನ ವೈಭವವನ್ನ ಭೂಪಟದಲ್ಲಿ ಇನ್ನೂ ಜೀವಂತವಾಗಿರಿಸಿಕೊಂಡಿದ್ದಕ್ಕೆ ಸಾಕ್ಷಿಯಾಗಿದೆ.

ಹೆರಿಟೇಜ್ ಸೈಟ್ 2019 ರ ವರ್ಷದ ಪ್ರವಾಸಿ ಸ್ಥಳಗಳಲ್ಲಿ ಹಂಪಿ ಎರಡನೆ ಸ್ಥಾನ ಪಡೆದಿದ್ದು, ಮೊದಲ ಸ್ಥಾನವನ್ನು ಕೆರಿಬಿಯನ್ ದ್ವೀಪದ ಪ್ಯೂರ್ಟೊರಿಕೊ ತನ್ನ ಮುಡಿಗೇರಿಸಿಕೊಂಡಿದೆ. ಹಂಪಿಯನ್ನು ಉತ್ತಮ ತಾಣವಾಗಿ ಪರಿಗಣಿಸಿದ ನ್ಯೂಯಾರ್ಕ್ ಟೈಮ್ಸ್, ಅದರ ಪುರಾತತ್ವ ಸ್ಮಾರಕ, ತುಂಗಭದ್ರ ನದಿ, ಹಂಪಿಯ ನೈಸರ್ಗಿಕ ಹಾಗೂ ಭೌಗೋಳಿಕ ತಾಣಗಳು, ಸಾಲು ಮಂಟಪಗಳು, ಶಿಲ್ಪ ಕಲೆ, ವಾಸ್ತು ಶಿಲ್ಪ ಸೇರಿದಂತೆ ನಾನಾ ವಿಚಾರಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ಅಧ್ಯಯನ ನಡೆಸಿ ಘೋಷಣೆ ಈ ಮಾಡಿದೆ.

16 ನೇ ಶತಮಾನದಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದ ಹಂಪಿ ಅತ್ಯಂತ ಶ್ರೀ ಮಂತನಗರಗಲ್ಲಿ ಒಂದಾಗಿತ್ತು. ಈ ಪ್ರದೇಶದಲ್ಲಿ 1000 ಕ್ಕಿಂತ ಹೆಚ್ಚು ಸಂರಕ್ಷಿಸಲ್ಪಟ್ಟ ಸ್ಮಾರಕಗಳು, ಹಿಂದೂ ದೇವಾಲಯಗಳು, ಕೋಟೆಗಳು, ಅರಮನೆಗಳ ಕುರಿತಂತೆ 150 ಪದಗಳನ್ನು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ನಮೋದು ಮಾಡಿದೆ. ಹಂಪಿಗೆ ನ್ಯೂಯಾರ್ಕ್ ಟೈಮ್ಸ್ ಕೊಟ್ಟ ಗರಿಯನ್ನ ಇತಿಹಾಸಕಾರರು ಹಾಗೂ ಸ್ಮಾರಕ ಸಂರಕ್ಷಣೆ ಹೊಣೆ ಹೊತ್ತ ಪುರಾತತ್ವ ಇಲಾಖೆ ಅಧಿಕಾರಿಗಳು ಇದು ಭಾರತದ ಹೆಮ್ಮೆ ಎಂದು ಹೇಳಿದ್ದಾರೆ.

ಹಕ್ಕಬುಕ್ಕರು ಕಟ್ಟಿದ ನಾಡಿನ ಗತವೈಭವ, ಕೃಷ್ಣದೇವರಾಯ ಕಾಲದ ಆಡಳಿತ, ಹಂಪಿಯ ಸುಂದರ ನಿರ್ಮಾಣ. ಸ್ಮಾರಕಗಳು, ದೇಗುಲಗಳು, ಸಾಲು ಮಂಟಪಗಳು ಇಂದಿಗೂ ಜನರನ್ನ ಕೈ ಬಿಸಿ ಕರೆಯುತ್ತಿವೆ. ಆ ಮೂಲಕ ಹಂಪಿಯ ಕುಸರಿ ಕೆಲಸ ಇಂದಿಗೂ ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿದೆ ಅಂದ್ರೆ ಕಂಡಿತ ಅದು ನಮ್ಮ ಹೆಮ್ಮೆಯೇ ಸರಿ.ವಿಶ್ವ ವಿಖ್ಯಾತ ಹಂಪಿ ಸರ್ವೋತ್ತಮ ಪ್ರೇಕ್ಷಣೀಯ ತಾಣ- ನ್ಯೂಯಾರ್ಕ್ ಟೈಮ್ಸ್ ಲಿಸ್ಟ್ ನಲ್ಲಿ‌ ಹಂಪಿ- ಈ ವರ್ಷದಲ್ಲಿ ನೋಡಲೇ ಬೇಕಾದ ಪ್ರೇಕ್ಷಣೀಯ ಪಟ್ಟಿಯಲ್ಲಿ ಹಂಪಿ…

ಪ್ರಪಂಚದ 52 ಪ್ರೇಕ್ಷಣೀಯ ತಾಣಗಳ ಪೈಕಿ, ಹಂಪಿ ಎರಡನೇ ಸ್ಥಾನ ಪಡೆದಿದೆ- ಮೊದಲ ಸ್ಥಾನ,ಪೋರ್ಟೋರಿಕೋ ಪಡೆದಿದೆ- ಕೆರೆಬಿಯನ್ ದ್ವೀಪದ ಪೋರ್ಟೋರಿಕೋ- ನ್ಯೂಯಾರ್ಕ್ ಟೈಮ್ಸ್ ಲಿಸ್ಟ್ ನಲ್ಲಿರೋ,ಭಾರತದ ಏಕೈಕ ಪ್ರೇಕ್ಷಣೀಯ ತಾಣ ಹಂಪಿ- ಹಂಪಿಯ ಸಾಲು ಮಂಟಪ,ಪುರಾತನ ಸ್ಮಾರಕ-ಹಂಪಿಯಲ್ಲಿರುವ ನೈಸರ್ಗಿಕ ತಾಣಗಳು, ಸಾಹಸ ಕ್ರೀಡಾ ಶೀಲಾರೋಣ ಸೇರಿ, ಇದೊಂದು ಅತ್ಯುತ್ತಮ ಪ್ರೇಕ್ಷಣೀಯ ಸ್ಥಾನವೆಂದು ನ್ಯೂಯಾರ್ಕ್ ಟೈಂ ಘೋಷಿಸಿದೆ..

LEAVE A REPLY

Please enter your comment!
Please enter your name here