Home District ಮತ್ತೆ ತಾರಕಕ್ಕೇರಿದ ಜಾರಕಿಹೊಳಿ, ಹೆಬ್ಬಾಳ್ಕರ್ ಜಟಾಪಟಿ..! ಹಳ್ಳಿಗಳಿಗೆ ಸಾರಿಗೆ ಬಸ್‌ ಬಿಡುವ ಮೂಲಕ ಪೈಪೋಟಿ..! ಇಂದು...

ಮತ್ತೆ ತಾರಕಕ್ಕೇರಿದ ಜಾರಕಿಹೊಳಿ, ಹೆಬ್ಬಾಳ್ಕರ್ ಜಟಾಪಟಿ..! ಹಳ್ಳಿಗಳಿಗೆ ಸಾರಿಗೆ ಬಸ್‌ ಬಿಡುವ ಮೂಲಕ ಪೈಪೋಟಿ..! ಇಂದು ಸತೀಶ್ ಜಾರಕಿಹೊಳಿ ಚಾಲನೆ..!

495
0
SHARE

ಬೆಳಗಾವಿ ಸಾಹುಕಾರ್ರು ಮತ್ತು ಲಕ್ಷ್ಮೀ ಹೆಬ್ಬಾಳಕರ್ ನಡುವಿನ ರಾಜಕೀಯ ತಿಕ್ಕಾಟ ಮುಂದುವ ರೆದಿದೆ. ಪಿಎಲ್.ಡಿ ಬ್ಯಾಂಕ್ ಚುನಾವಣೆಯ ನಂತ್ರ ತಣ್ಣಗಾಗಿದ್ದ ಸತೀಶ್ ಜಾರಕಿಹೊಳಿ & ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಅಸಮಾಧಾನ ಇದೀಗ ಬಸ್ ಪಾಲಿಟಿಕ್ಸ್ ಮೂಲಕ ಮತ್ತೆ ಶುರುವಾಗಿದೆ. ಶಾಸಕ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಬೆಳಗಾವಿಯ PLD ಬ್ಯಾಂಕ್ ಗುದ್ದಾಟದ ನಂತರ, ಇದೀಗ ಬೆಳಗಾವಿಯಲ್ಲಿ ಈ ಇಬ್ಬರು ಶಾಸಕರ ನಡುವೆ ಬಸ್ ಪಾಲಿಟೀಕ್ಸ್ ಶುರುವಾಗಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕಳೆದ ವಾರ ತಮ್ಮ ಕ್ಷೇತ್ರದ ಹಳ್ಳಿಗಳಿಗೆ ಹತ್ತು ಸಾರಿಗೆ ಬಸ್ಸುಗಳನ್ನು ಬಿಟ್ಟಿದ್ದರು. ಸುವರ್ಣ ಸೌಧದ ಎದುರು ಹತ್ತು ಬಸ್ಸುಗಳಿಗೆ ಪೂಜೆ ಸಲ್ಲಿಸಿ, ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದರು. ಇದರ ಬೆನ್ನಲ್ಲೇ ಯಮಕನಮರ್ಡಿ ಶಾಸಕ ಸತೀಶ್ ಜಾರಕಿಹೊಳಿ ತಾವೇನು ಕಡಿಮೆ ಎಂಬಂತೆ ತಮ್ಮ ಕ್ಷೇತ್ರಕ್ಕೂ ಹತ್ತು ಬಸ್ಸುಗಳನ್ನು ಬಿಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಬೆಳಗಾವಿ ಬಸ್ ನಿಲ್ದಾಣದಿಂದ ಶಾಸಕ ಸತೀಶ್ ಜಾರಕಿಹೊಳಿ, ಹತ್ತೂ ಸಾರಿಗೆ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ತಮ್ಮ ಕ್ಷೇತ್ರಕ್ಕು ಹೋಗುವ ಬಸ್ಸುಗಳಿಗೆ ಚಾಲನೆ ನೀಡಿದ್ರು.
ಇನ್ನು ಈ ಮೂಲಕ ಇಬ್ಬರು ನಾಯಕರು ಪ್ರತಿಯೊಂದು ವಿಚಾರದಲ್ಲೂ ಪರಸ್ಪರ ಪೈಪೋಟಿಗಿಳಿದಿದ್ದು, ಪಿಎಲ್.ಡಿ ಬ್ಯಾಂಕ್ ಚುನಾವಣೆ ನಂತರ ತಣ್ಣಗಾಗಿದ್ದ, ಈ ನಾಯಕರ ಪೈಪೋಟಿ ಇದೀಗ ಬಸ್ ಪಾಲಿಟಿಕ್ಸ್ ಗೆ ಬಂದು ನಿಂತಿದೆ.

ಬೆಳಗಾವಿ ತಾಲೂಕಿನ ಪಿಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಹಾವು-ಮುಂಗುಸಿಯಂತಿದ್ದ ಈ ಇಬ್ಬರು ನಾಯಕರು, ನಂತರದ ದಿನಗಳಲ್ಲಿ ಒಂದೇ ವೇದಿಕೆ ಹಂಚಿಕೊಳ್ಳುವ ಮೂಲಕ ಮೂಲಕ ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲಾ.. ಮಿತ್ರರೂ ಅಲ್ಲಾ ಅನ್ನೋದನ್ನ ತೋರಿಸಿಕೊಟ್ಟಿದ್ರು. ಇನ್ನೇನು ಎಲ್ಲವೂ ಸರಿ ಹೋಯ್ತು ಅನ್ನೊ ಹಂತದಲ್ಲಿ ಇದೀಗ ಪೈಪೋಟಿಗೆ ಬಿದ್ದವರಂತೆ ತಮ್ಮ ಅಸ್ತಿತ್ವಕ್ಕಾಗಿ ಸೆಣಸಾಡುತ್ತಿದ್ದಾರೆ.

ಒಟ್ನಲ್ಲಿ ಬೆಳಗಾವಿ ರಾಜಕಾರಣಿಗಳ ವಿಷಯದಲ್ಲಿ ಯಾರು ಏನು ಊಹಿಸಲಿಕ್ಕೂ ಆಗೋದಿಲ್ಲ. ಯಾಕಂದ್ರೆ ಬೆಳಗಾವಿಯ ರಾಜಕಾರಣದಲ್ಲಿ ಯಾವಾಗ ಏನಾಗುತ್ತೋ.. ಗೊತ್ತಾಗೋದು ಇಲ್ಲಾ. ಅದೇನೆ ಇರಲಿ ಈ ಇಬ್ಬರು ನಾಯಕರ ಜಟಾಪಟಿಯಲ್ಲಿ ಕ್ಷೇತ್ರದ ಜನತೆ ಮಾತ್ರ ಖುಷಿಯಾಗಿದ್ದಾರೆ.

LEAVE A REPLY

Please enter your comment!
Please enter your name here