ಬಡತನದಲ್ಲಿ ಹುಟ್ಟಿದ್ದ ಆ ಹೆಣ್ಣುಮಗಳು ಮನೆಯ ಕಷ್ಟ ನೀಗಿಸಲು, ಜೀವನಕ್ಕೆ ಒಂದು ಆಧಾರ ಆಗುತ್ತೆ ಅಂತ ನಿತ್ಯ ಬಳೆ ಅಂಗಡಿಯಲ್ಲಿ ಕೆಲಸಕ್ಕೆ ಹೋಗ್ತಿದ್ಲು, ಅವಳ ಬಡತನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಅಂಗಡಿ ಮಾಲೀಕ ಅವಳ ಮೇಲೆ ಕಾಮದ ಕಣ್ಣು ಹಾಕಿದ್ದಷ್ಟೇ ಅಲ್ಲದೇ, ಇಲ್ಲಸಲ್ಲದ ಆಸೆ ತೋರಿಸಿ ಪ್ರೀತಿ ನಾಟಕವಾಡಿ ಮದುವೆ ಮಾಡ್ಕೊಂಡು ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾನೆ.
ಬಡ ಹಿಂದೂ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಖುರಾನ್ ಪಠಣ ಮಾಡಿಸಿ, ಮದುವೆಯಾಗಿ ಎರಡು ವರ್ಷ ಕಳೆದ ಬಳಿಕ ” ನೀನು ನನಗೆ ಬೇಡ” ಎಂದು ಪತಿರಾಯ ಡಿವೋರ್ಸ್ ನೋಟಿಸ್ ಕೊಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕ್ಕಪೇಟೆ ನಿವಾಸಿಯಾದ ರಾಧಾ, ಕ್ಯಾತಸಂದ್ರ ನಿವಾಸಿ ಮಹಮದ್ ಅತಿಕ್ನ ಬಳೆ ಅಂಗಡಿಯಲ್ಲಿ ಕೆಲಸಕ್ಕೆ ಮಾಡ್ತಿದ್ಲು, ಆಕೆಯ ಬಡತನವನ್ನೇ ಬಂಡವಾಳ ಮಾಡಿಕೊಂಡ ಅತಿಕ್ ಇಸ್ಲಾಂ ಧರ್ಮಕ್ಕೆ ಬಂದರೆ ನಿನಗೆ ಒಳ್ಳೆದಾಗತ್ತೆ.
ನಾನು ನಿನ್ನನ್ನು ಮದುವೆಯಾಗಿ ನಿನ್ನ ತಂದೆ-ತಾಯಿಯನ್ನು ಸಾಕ್ತಿನಿ ಎಂದು ಬ್ರೈನ್ ವಾಶ್ ಮಾಡಿ, ಯಾರಿಗೂ ಗೊತ್ತಿಲ್ಲದಂತೆ ಆಂಧ್ರದ ಮದರಸಾದಲ್ಲಿ ಎರಡು ವರ್ಷಗಳ ಕಾಲ ಖುರಾನ್ ಪಠಣ ಮಾಡಿಸಿ, ರಾಧಾ ಹೆಸರನ್ನು ಸುಮಯಾ ಫರ್ವಿನ್ ಎಂದು ಬದಲಾಯಿಸಿದ್ದಾನೆ. ಬಳಿಕ 2016 ರಲ್ಲಿ ಮದುವೆಯಾದ ಜೋಡಿ ಚೆನ್ನಾಗಿಯೇ ಇದ್ರು, ಇದೀಗ ಅತೀಕ್ ಇಲ್ಲಸಲ್ಲದ ಕಿರುಕುಳ ನೀಡಿ ಮುಸ್ಲಿಂ ಧರ್ಮದ ಪ್ರಕಾರ ನಾನು ಇನ್ನೂ ಮೂರು ಮದುವೆಯಾಗಬಹುದು ಅಂತಾ ಹೇಳಿ ಡಿವೋರ್ಸ್ ಕೊಡು ಎಂದು ದಿನನಿತ್ಯ ಹಿಂಸಿಸುತ್ತಿದ್ದಾನೆ.
ಮದುವೆಯಾದ ಬಳಿಕ ರಾಧಾಳನ್ನು ಖುರಾನ್ ಅಭ್ಯಾಸಕ್ಕಾಗಿ ಮತ್ತೆ ಆಂಧ್ರಕ್ಕೆ ಕಳುಹಿಸಿ ಅತೀಕ್ ಎರಡನೇ ಮದುವೆಯಾಗಿದ್ದಾನೆ. ಮದುವೆಯಾದ ಬಳಿಕ ‘ನೀನು ನನಗೆ ಬೇಡ’ ಎಂದು ಡಿವೋರ್ಸ್ ನೋಟಿಸ್ ತಲುಪಿಸಿದ್ದಾನೆ. ಅತ್ತ ತವರು ಮನೆಯಲ್ಲಿ ಯಾರೂ ಸೇರಿಸಿಕೊಳ್ಳದೆ, ಇತ್ತ ಮದುವೆಯಾದ ಗಂಡನಿಂದಲೂ ತಿರಸ್ಕಾರಕ್ಕೊಳಗಾದ ರಾಧಾ ಈಗ ಬೀದಿಗೆ ಬಂದಿದ್ದಾಳೆ. ಅತೀಕನೇ ಈಗ ರಾಧಾಳಿಗೆ ಬಾಳು ನೀಡಬೇಕೆಂದು ರಾಧಾ ಹೆತ್ತವರು ಪಟ್ಟುಹಿಡಿದಿದ್ದಾರೆ.
ಒಟ್ನಲ್ಲಿ ಮತಾಂತರಗೊಂಡು ಅತ್ತ ಹಿಂದೂವು ಅಲ್ಲದೇ, ಇತ್ತ ಮುಸ್ಲಿಂ ಕೂಡ ಅಲ್ಲದೇ ರಾಧಾ ಪರದಾಡುತ್ತಿದ್ದಾಳೆ. ಇನ್ನೊಂದೆಡೆ ನಂಬಿ ಬಂದ ಗಂಡನೂ ಕೈಕೊಟ್ಟು ಇನ್ನೊಬ್ಬಳೊಂದಿಗೆ ಸಂಸಾರ ಶುರುವಿಟ್ಟುಕೊಂಡಿದ್ದಾನೆ. ಮತಾಂತರಕ್ಕಾಗಿಯೇ ಅತೀಕ್ ರಾಧಾಳೊಂದಿಗೆ ಪ್ರೀತಿ, ಮದುವೆ ನಾಟಕವಾಡಿದ್ದು ದುರಂತವೇ ಸರಿ…