Home Cinema ಮತ್ತೆ ದುನಿಯಾ ವಿಜಿ ವಿರುದ್ಧ ಭುಸುಗುಟ್ಟಿದ ನಾಗರತ್ನ..! ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತಾ…?

ಮತ್ತೆ ದುನಿಯಾ ವಿಜಿ ವಿರುದ್ಧ ಭುಸುಗುಟ್ಟಿದ ನಾಗರತ್ನ..! ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತಾ…?

599
0
SHARE

ದುನಿಯಾ ವಿಜಿಯ ಸಂಸಾರ ಗಲಾಟೆಗೆ ತಿಲಾಂಜಲಿ ಯಾರು ಬಿಡ್ತಾರೆ ಅನ್ನೋ ಯಕ್ಷಪ್ರಶ್ನೆಗೆ ಉತ್ತರ ಯಾವ ಪುಣ್ಯತ್ಮ ಹೇಳ್ತಾನೋ ಗೊತ್ತಿಲ್ಲ ಕಣ್ರೀ. ಇತ್ತ ಇಬ್ಬರ ಹೆಂಡಿರ ಜಡೆ ಜಗಳದಲ್ಲಿ ಸಿಲುಕಿ ಒದ್ದಾಡಿದ ಕರುನಾಡ ಕರಿಯನಿಗೆ ಯಾವಾಗ ಪೋಲಿಸ್ ಕೇಸ್‌ಗಳಿಂದ ಮುಕ್ತಿ ಸಿಗುತ್ತೋ ಗೊತ್ತಿಲ್ಲ. ಆದರೆ ಗಾಯದ ಮೇಲೆ ಉಪ್ಪು ಸುರಿಯೋ ಹಾಗೆ ಈಗ ವಿಜಿಗೆ ಹೊಸ ತಲೆ ನೋವು ಶುರುವಾಗಿದೆ. ನಾಗರತ್ನರ ಹೊಸ ದಾಳ ವಿಜಿಗೆ ಕರೆಂಟ್ ಶಾಕ್ ಹೊಡೆಸಿದೆ.

ಇಂದು ನಾಗರತ್ನ ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದ್ರು. ಮನೆ ಹಾಗೂ ಜೀವನಾಂಶದ ವಿಚಾರವಾಗಿ ದುನಿಯಾ ವಿಜಿ ವಿರುದ್ಧ ಹರಿಹಾಯ್ದರು. ’ದುನಿಯಾ ವಿಜಿ ನಮಗೆ ಸರಿಯಾಗಿ ಜೀವನಾಂಶ ಕೊಡ್ತಿಲ್ಲ. ಮಕ್ಕಳು ಬೇರೆ ಡಿಪ್ರೆಷನ್‌ಗೆ ಹೊರಟು ಹೋಗಿದ್ದಾರೆ. ಇಷ್ಟು ದಿನ ಚೆನ್ನಾಗಿದ್ದ ನಮ್ಮ ಮಕ್ಕಳು ಇವತ್ತು ಬಸ್ ಹಾಗೂ ಆಟೋದಲ್ಲಿ ಓಡಾಡೋ ಪರಿಸ್ಥಿತಿ ಎದುರಾಗಿದೆ. ಹೇಗಾದ್ರೂ ಮಾಡಿ ನಮಗೆ ನ್ಯಾಯ ಕೊಡಿಸಿ’ ಅಂತ ರಿಕ್ವೆಸ್ಟ್ ಮಾಡಿದಾರೆ. ನಾಗರತ್ನ ಮಾಧ್ಯಮಾಗಳ ಜೊತೆ ಮಾತನಾಡದೇ ಇದ್ರೂ ಅವರ ಪ್ರತಿಬಿಂಬ ಅನ್ನೋ ಹಾಗೆ ನಾಗರತ್ನ ಪರ ವಕೀಲೆ ಮೀರಾ ರಾಘವೇಂದ್ರ ಕಂಪ್ಲೇಟ್‌ನಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಮಾಹಿತಿ ಬಿಚ್ಚಿಟ್ರು.

ಇನ್ನು ನಾಗರತ್ನ ಕೊಟ್ಟ ಲಿಖಿತ ರೂಪದ ದೂರನ್ನ ಆಧಾರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಮಾತನಾಡಿ ’ ನಾಗರತ್ನ ಬಳಿ ಒಂದು ಗಂಟೆ ಕೌನ್ಸಿಲಿಂಗ್ ರೂಮ್‌ನಲ್ಲಿ ಕುರಿಸಿ ಮಾತನಾಡಿದ್ದೇನೆ. ಯಾವ ಕಾರಣಕ್ಕೂ ನಾನು ದುನಿಯಾ ವಿಜಿಗೆ ಡಿರ್ವೋಸ್ ಕೊಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ, ಈ ಒಟ್ಟಾರೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅದಷ್ಟು ಬೇಗ ದುನಿಯಾ ವಿಜಿಯವರನ್ನು ಕರೆಸಿ ಮಾತನಾಡಿತ್ತೇನೆ’ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ವಿಜಿ ಸ್ನೇಹಿತ ಸುಂದರ್ ಗೌಡ ಮನೆಯ ವಿಚಾರ ಕೂಡ ಕೇಳಿ ಬಂತು. ನಾಗರತ್ನ ಗಮನಕ್ಕೆ ಬಾರದಂತೆ ವಿಜಿ ತಮ್ಮ ಮನೆಯನ್ನ ಸುಂದರ್ ಗೌಡಗೆ ಮಾರಿದ್ದಾರೆ ಎನ್ನುವ ಮಾತುಗಳು ಕೇಳಿ ಬಂತು .ಆದರೆ ಸಿವಿಲ್ ಕೋಡ್ ಅನ್ವಯ ಯಾರು ಕೂಡ ಈ ವಿಚಾರದ ಬಗ್ಗೆ ತುಟಿ ಬಿಚ್ಚಲಿಲ್ಲ. ಈಗ ಕೆಲವೇ ದಿನಗಳಲ್ಲಿ ದುನಿಯಾ ವಿಜಿ ವಿಚಾರಣೆಗಾಗಿ ಮಹಿಳಾ ಆಯೋಗಕ್ಕೆ ಬರಬೇಕಾಗಿದೆ. ಹಾಗಾಗಿ, ಇನ್ನಾದ್ರೂ ವಿಜಿ ಸಂಸಾರ ಗಲಾಟೆಗೆ ಬಿಗ್ ಬ್ರೇಕ್ ಬೀಳುತ್ತಾ ಅಂತ ಕಾದುನೋಡಬೇಕು.

 

LEAVE A REPLY

Please enter your comment!
Please enter your name here