Home Cinema “ಮದಕರಿ ನಾಯಕ” ಗೊಂದಲಗಳಿಗೆ ಸುದೀಪ್ ಮಾಡಿದ ಈ ಒಂದು ಟ್ವೀಟ್ ಎಳೆಯುತ್ತಾ ತೆರೆ..?! “ಆ ಒಂದು...

“ಮದಕರಿ ನಾಯಕ” ಗೊಂದಲಗಳಿಗೆ ಸುದೀಪ್ ಮಾಡಿದ ಈ ಒಂದು ಟ್ವೀಟ್ ಎಳೆಯುತ್ತಾ ತೆರೆ..?! “ಆ ಒಂದು ಟ್ವೀಟ್..!!

289
0
SHARE

ಸ್ಯಾಂಡಲ್‌ವುಡ್‌ನಲ್ಲಿ ಮದಕರಿ ನಾಯಕ ಸಿನಿಮಾ ವಿಚಾರ ದಿನಕ್ಕೊಂದು ರೂಪ ಪಡೆದುಕೊಳ್ತಿದೆ. ನಿನ್ನೆಯಷ್ಟೇ ನಿರ್ಮಾಪಕ ಮುನಿರತ್ನ ಪ್ರಸನ್ನಾನಂದ ಸ್ವಾಮೀಜಿ ವಿರುದ್ದ ಗರಂ ಆಗಿದ್ರು. ಇದರ ಬೆನ್ನೆಲೆ ಕಿಚ್ಚಾ ಸುದೀಪ್ ಮದಕರಿ ನಾಯಕ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಟ್ವೀಟ್ ಮಾಡಿ ತಿಳಿಸಿದಂತೆ ಚಿತ್ರ ಮಾಡುವ ನಿಲುವಿಗೆ ಬಂದಿರುವ ಸುದೀಪ್.

ಸುದೀಘ ಟ್ವೀಟ್ ಮಾಡುವ ಮೂಲಕ ಮದಕರಿ ನಾಯಕ ಚಿತ್ರದ ಮೇಲಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಈಗ ಚಾನೆಲ್‌ಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವoತಿದೆ.ವಿಷಯ ಸರಳವಾಗಿದೆ… ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನೆಮಾ ಮಾಡುತ್ತಿದ್ದಾರೆ.

ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನೆಮಾ ನಾನು ಮುಂದುವರೆಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ.

ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್ ಲೈನ್ ವೆಂಕಟೇಶ್ ಹಾಗೂ ಚಾನೆಲ್ ಗಳ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ ಇದು ನನಗೆ ಚರ್ಚೆಯ ವಿಷಯವೇ ಅಲ್ಲ. ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ.

ಸಿನಿಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನೆಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಎರಡು ಚಿತ್ರಗಳು ಮಾಡಿ ಅವರಿಗೆ ಗೌರವಿಸೋಣ.ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ.

ಇದಕ್ಕೆ ಹರಿಬಿಟ್ಟ ಶಕ್ತಿ ಹಾಗು ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಯೋಚನೆಗಳುೆರಲೆಂದು ನನ್ನ ಈ ಎರಡು ಮಾತುಗಳನ್ನು ಹೇಳಿದ್ದೇನೆ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ.

ಪ್ರೀತಿಯಿಂದ
ನಿಮ್ಮವ ಕಿಚ್ಚ

 

LEAVE A REPLY

Please enter your comment!
Please enter your name here