Home Cinema ಮದಕರಿ ಸಿನಿಮಾವನ್ನ, ಸುದೀಪ್ ಬಿಟ್ಟು ಯಾರು ಮಾಡಬಾರದು”..!? ಸ್ಯಾಂಡವುಡ್‌ಗೂ ಜಾತಿ ರಾಜಕಾರಣ ಎಂಟ್ರಿ..!? ಉರಿಯುತ್ತಿರುವ ಬೆಂಕಿಗೆ...

ಮದಕರಿ ಸಿನಿಮಾವನ್ನ, ಸುದೀಪ್ ಬಿಟ್ಟು ಯಾರು ಮಾಡಬಾರದು”..!? ಸ್ಯಾಂಡವುಡ್‌ಗೂ ಜಾತಿ ರಾಜಕಾರಣ ಎಂಟ್ರಿ..!? ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದವರ‍್ಯಾರು ಗೊತ್ತೇ..?!

1002
0
SHARE

ವೀರ ಮದಕರಿ ನಾಯಕ.. ಸ್ಯಾಂಡಲ್‌ವುಡ್‌ನಲ್ಲಿ ಟೈಟಲ್ & ಕಥೆ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ. ಕಿಚ್ಚ ಮತ್ತು ದರ್ಶನ್ ನಡುವೆ ಸ್ಟಾರ್‌ವಾರ್‌ಗೆ ಕಾರಣ ವಾದ ಸಿನಿಮಾ, ಇದೀಗ ಮತ್ತೆ ವಿವಾದ ಮೂಲಕ ಗಾಂಧಿನಗರದಲ್ಲಿ ಬೇಜಾನ್ ಸದ್ದು ಮಾಡ್ತಿದೆ. ಗ್ರಾಫಿಕ್ಸ್ ದರ್ಶನ್ ‘ಮದಕರಿ ನಾಯಕ’ ನಾಗಲು ಅಡ್ಡಿಯಾಗಿರೋದ್ಯಾರು ಗೋತ್ತೇನು..?

ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ನಾನು ಮದಕರಿ ನಾಯಕನ ಸಿನಿಮಾ ಮಾಡುವುದಾಗಿ ಸುದೀಪ್ ಟ್ವೀಟ್ ಮಾಡಿದ್ರು. ಈ ಮೂಲಕ ಅಭಿಮಾನಿಗಳಿಗೆ ಸುದೀಪ್ ಅಚ್ಚರಿ ನೀಡಿದ್ರು. ಇಷ್ಟೆಲ್ಲಾ ಬೆಳವಣಿಗೆಯ ಬೆನ್ನಲೆ ಇದೀಗ ವಾಲ್ಮೀಕಿ ಜನಾಂಗದ ಪ್ರಸನ್ನನಾಂದ ಶ್ರೀ ಗಳು ಮದಕರಿ ನಾಯಕ ಸಿನಿಮಾ ಬಗ್ಗೆ ಗುಡುಗಿದ್ದಾರೆ. ಸಿನಿಮಾದಲ್ಲಿ ರಾಜಕೀಯ ಹಾಗೂ ಜಾತಿಯನ್ನ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಹೌದು.. ಗಂಡುಗಲಿ ಮದಕರಿ ನಾಯಕನಿಗಾಗಿ ಸುದೀಪ್ ಮತ್ತು ದರ್ಶನ್ ನಡುವೆ ಮತ್ತೊಮ್ಮೆ ವಾರ್ ಶುರುವಾಗಿದೆ. ಈ ಬಾರಿ ವಾರ್ ಶುರು ಮಾಡಿರುವುದು ಇಬ್ಬರು ನಾಯಕರಲ್ಲ ಬದ್ಲಾಗಿ, ಪ್ರಸನ್ನನಾಂದ ಶ್ರೀಗಳು ಇಬ್ಬರು ಸ್ಟಾರ್‌ಗಳ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ವೀರ ಮದಕರಿ ನಾಯಕ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಯಾವುದೇ ಕಾರಣಕ್ಕೂ ಸುದೀಪ್ ಅವರನ್ನು ಬಿಟ್ಟು ಯಾರು ಮದಕರಿ ನಾಯಕನ ಹೆಸರಿನಲ್ಲಿ ಸಿನಿಮಾ ಮಾಡಲು ಬಿಡುವುದಿಲ್ಲ ಎಂಬ ಮಾತನ್ನಾಡಿದ್ದಾರೆ.

ಅಲ್ಲದೆ ಒಂದು ವೇಳೆ ಸಿನಿಮಾ ಮಾಡಲು ಮುಂದಾದ್ರೆ ಸಮುದಾಯದವರು ಸೇರಿ ಒಂದಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಪ್ರಸಾನಾನಂದ ಸ್ವಾಮೀ ಹೇಳಿಕೊಂಡಿದ್ದಾರೆ. ಫ್ಲೋ.. ಈ ರೀ ತಿ ಪ್ರಸಾನಾನಂದ ಸ್ವಾಮೀ ಸಿನಿಮಾ ವಿಚಾರಕ್ಕೆ  ಜಾತಿಯ ಹೆಸರನ್ನು ಅಡ್ಡ ತರುತ್ತಿರೋದು. ಸ್ಯಾಂಡಲ್‌ವುಡ್‌ನಲ್ಲಿ ಜಾತಿ ರಾಜಕೀಯ ಶುರುವಾಯ್ತಾ ಎಂಬ ಅನುಮಾನ ಹುಟ್ಟುವಂತೆ ಮಾಡ್ತಿದೆ.

ಮದಕರಿ ನಾಯಕ ಸಮುದಾಯ ಕೂಡ ‘ಸುದೀಪ್ ನಮ್ಮವ’ ಎನ್ನುವ ಭಾವನೆಯನ್ನು ಗಟ್ಟಿಯಾಗಿಯೇ ನಂಬಿಕೊಂಡಿದ್ದಾರೆ. ಹಾಗಾಗಿನೇ ಮದಕರಿ ನಾಯಕನಾಗುವುದಕ್ಕೆ ಸೂಕ್ತ ವ್ಯಕ್ತಿ ಸುದೀಪ್ ಎನ್ನುವ ಮಾತುಗಳು ಅವರ ಅಭಿಮಾನಿಗಳದ್ದಾಗೆ. ಈ ಹಿಂದೆ ಕ್ರಾಂತಿಕಾರಿ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಜೀವನ ಚಿತ್ರೆಯನ್ನು ಸುದೀಪ್ ಅವರಿಗೆ ಮಾಡುವುದಕ್ಕೆ ಸಲಹೆ ನೀಡಿರುವ ಪ್ಲಾನ್‌ನಲ್ಲಿದ್ದಾರೆ.

ಇನ್ನು ಮದಕರಿ ನಾಯಕ ಕುರಿತು ಸಿನಿಮಾ ಮಾಡುವುದಾಗಿ ಹೇಳಿಕೊಂಡಿರುವ ಕಿಚ್ಚ ಸುದೀಪ್ ಮತ್ತು ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಮೇಲೆ ಇಡೀ ಇಂಡಸ್ಟ್ರೀಯ ಕಣ್ಣು ಬಿದ್ದಿದೆ. ಒಂದೇ ಕಥೆಯ ಬಗ್ಗೆ ಇಬ್ಬರು ನಟರು ಸಿನಿಮಾ ಮಾಡ್ತಾರಾ ಎಂಬ ಗೊಂದಲ ಗಾಂಧಿನಗರದಲ್ಲಿ ಮೂಡುವಂತೆ ಮಾಡಿದೆ. ಈ ಎಲ್ಲಾ ಗೊಂದಲಗಳ ನಡುವೆ ಸಮುದಾಯವಾಗಿ ಸಿನಿಮಾ ವಿಚಾರಕ್ಕೆ ಈಗೆ ಮಾತನಾಡ್ತಿರುವುದು, ಇಬ್ಬರು ಅಭಿಮಾನಿಗಳಲ್ಲಿ ಇನ್ನಷ್ಟು ಗೊಂದಲಕ್ಕೆ ಎಡೆ ಮಾಡಿಕೊಡ್ತಿದೆ.

ಇನ್ನು ದರ್ಶನ್ ಮದಕರಿ ನಾಯಕ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮುಂದಾಗಿದ್ದಾರೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡ್ತಿದಾರೆ. ಈಗಾಗಲ್ಲೇ ಚಿತ್ರಕಥೆ ಸಿದ್ಧಪಡಿಸಿರುವ ಟೀಂ ಫೈನಲ್ ಹಂತದ ತಯಾರಿಯಲ್ಲಿದೆ. ಈಗ ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರ ಹೇಳಿಕೆ ದರ್ಶನ್ ಅಭಿಮಾನಿಗಳ ತೀವ್ರವಿರೋದಕ್ಕೆ ಕಾರಣವಾಗಿದೆ.

ಗಂಡುಗಲಿ ಮದಕರಿ ನಾಯಕ ಬಿಎಸ್ ವೇಣು ಅವರೆ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟು ಕೊಂಡು ಮದಕರಿ ನಾಯಕನಿಗೆ ಮಾತುಗಳನ್ನು ಜೋಡಿಸುತ್ತಿದಾರೆ ಬಿ.ಎಲ್ ವೇಣು.ಅದೇನೆ ಇದ್ರು.

ಮದಕರಿ ನಾಯಕ ಸಿನಿಮಾದಲ್ಲಿ ಇಬ್ಬರು ಸ್ಟಾರ್‌ಗಳು ನಟಿಸೋದು ಕರ್ನ್ಫಮ್ ಆಗಿದೆ. ಈ ಪ್ರಾಜೆಕ್ಟ್‌ಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ್ತಿದ್ದಾರೆ. ಇಷ್ಟೆಲ್ಲಾ ಸ್ಟಾರ್ ವಾರ್‌ಗಳ ನಡುವೆ ಸಮುದಾಯ ಅಡ್ಡ ಬಂದಿರೋದು ಮದಕರಿ ನಾಯಕ ಸಿನಿಮಾದ ವಿವಾದ ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ಮುಟ್ಟುತ್ತೆ ಕಾದುನೋಡುವಂತೆ ಮಾಡ್ತಿದೆ.

LEAVE A REPLY

Please enter your comment!
Please enter your name here