Home Cinema ‘ಮದರ್ ಇಂಡಿಯಾ’ಗಾಗಿ ಡೇ & ನೈಟ್ ‘ದಚ್ಚು” ಜಾಥಾ..! ಚಾಲೆಂಜಿಂಗ್ ಸ್ಟಾರ್ ಆಗಮನವಾಗ್ತಿದ್ದು ಚಂದನವನದಲ್ಲಿ ರಾಜಕೀಯ...

‘ಮದರ್ ಇಂಡಿಯಾ’ಗಾಗಿ ಡೇ & ನೈಟ್ ‘ದಚ್ಚು” ಜಾಥಾ..! ಚಾಲೆಂಜಿಂಗ್ ಸ್ಟಾರ್ ಆಗಮನವಾಗ್ತಿದ್ದು ಚಂದನವನದಲ್ಲಿ ರಾಜಕೀಯ ಮೆರವಣಿಗೆ ವೇದಿಕೆ ಸಿದ್ಧ..!

527
0
SHARE

ಲೋಕಸಭಾ ಚುನಾವಣಾ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತ ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದಂತೆ ಸ್ಯಾಂಡಲ್‌ವುಡ್‌ನಲ್ಲಿ ಪಾಲಿಟಿಕ್ಸ್‌ನ ಬಿಸಿ ರಂಗೇರ ತೊಡಗಿದೆ.

ಚಾಲೆಂಜಿಂಗ್ ಸ್ಟಾರ್ ಆಗಮನವಾಗ್ತಿದ್ದು ಚಂದನವನದಲ್ಲಿ ರಾಜಕೀಯ ಮೆರವಣಿಗೆ ವೇದಿಕೆ ಸಿದ್ಧವಾಗ್ತಿದೆ.ಯಸ್.. ಸ್ಯಾಂಡಲ್‌ವುಡ್‌ನ ನಯಾ ಯಜಮಾನನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲಿನಿಂದ್ಲೂ ರೆಬೆಲ್ ಸ್ಟಾರ್ & ಸುಮಲತಾ ಅವರ ಪ್ರೀತಿಯ ಮನೆ ಮಗ. ಅಂಬಿ ಬದುಕಿದಾಗ ಅಪ್ಪಾಜಿ ಹೇಳಿದ ಮಾತಿಗೆ ಎಂದೂ ನೋ ಎನ್ನದ ದರ್ಶನ್,ಈಗ ಅಭಿಷೇಕ್ ಸಿನಿಮಾ ಕೆರಿಯರ್‌ಗೆ ಅಣ್ಣನಾಗಿ ನಿಂತು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ.

ಈಗ ಅಮ್ಮನ ಹೊಸ ರಾಜಕೀಯ ಅಧ್ಯಾಯಕ್ಕೆ ಮದರ್ ಇಂಡಿಯಾಗೆ ಡೇ ಅಂಡ್ ನೈಟ್ ಜಾಥಾ ಮಾಡಿ ಗೆಲುವಿನ ಗರಿ ಕೊಡಿಸೋ ಪಣತೊಟ್ಟಿದ್ದಾರೆ. ಹೌದು.. ಅಂಬರೀಷ್ ಕುಟುಂಬಕ್ಕೆ ಹಿರಿಮಗನಾಗಿರುವ ನಟ ದರ್ಶನ್. ಅಂಬಿ ಮನೆಯಲ್ಲಾಗುವ ಕಷ್ಟ ಸುಖದಲ್ಲಿ ಸಮವಾದ ಪಾಲುದಾರರಾಗಿದ್ದಾರೆ. ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಾಗ ದುಖಃದಲ್ಲಿ ಮದರ್ ಇಂಡಿಯಾ ಮತ್ತು ತಮ್ಮನಂತಿರುವ ಅಭಿ ಕಷ್ಟಕ್ಕೆ ಹೆಗಲು ಕೊಟಿದ್ರು.

ಈಗ ಸುಮಲತಾ ಅಮ್ಮನ ರಾಜಕೀಯ ಹೊಸ ಅಧ್ಯಾಯಕ್ಕೆ ಬೆಂಬಲ ಸೂಚಿಸಿ ಮಂಡ್ಯಕ್ಕೆ ಚುನಾವಣಾ ಪ್ರಚಾರಕಾರ್ಯ ಕೈಗೊಳ್ಳಲು ಸಜ್ಜಾಗಿದ್ದಾರೆ. ಹೀಗೆ ದರ್ಶನ್ ಒಬ್ಬನ ಬಲವೊಂದೆ ಸಾಕು ನಾನು ಮಂಡ್ಯ ರಾಜಕೀಯದಲ್ಲಿ ಗೆದ್ದು ಬರ್ತಿನೆಂದಿರುವ ಸುಮಲತಾ ಮಾತುಗಳು ಇಲ್ಲಿದೆ.ಇನ್ನು ನೀವು ಯಾವಾಗ ಕರೆದರೂ ಬಂದು ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ. ಅಲ್ಲದೇ ನಿಮ್ಮ ಜೊತೆ ನಾನು ಯಾವಾಗಲೂ ಇರುತ್ತೇನೆ. ಧೈರ್ಯವಾಗಿ ಚುನಾವಣೆ ಎದುರಿಸಿ. ಎಂದು ದರ್ಶನ್ ಅವರು ಸುಮಲತಾ ಅವರಿಗೆ ಧೈರ್ಯನೀಡಿದ್ದು.

ಅಭಿಷೇಕ್‌ಗೆ ಅಣ್ಣನಾಗಿ, ಸುಮಲತಾಗೆ ಹಿರಿಮಗನಾಗಿ, ಅಂಬಿ ಫ್ಯಾಮಿಲಿಯ ಮನೆಮಗನಾಗಿ ಸಾರಥಿ ಸುಮಲತಾರ ರಾಜಕೀಯ ರಂಗದಲ್ಲಿ ಹೊಸ ಸಾಹಸಕ್ಕೆ ಸಂಪೂರ್ಣವಾಗಿ ಸಾಥ್ ನೀಡಿದ್ದಾರೆ. ಇನ್ನೂ ಸುಮಲತಾ ಚುನಾವಣೆ ಪ್ರಜಾರದ ಬಗ್ಗೆ ಮಾತನಾಡಿರುವ ದಚ್ಚು. ಸುಮಲತಾ ಅವರ ಚುನಾಣಾ ಪ್ರಚಾರಕ್ಕೆ ನಾನು ಹೋಗುತ್ತೇನೆ. ಅದು ನನ್ನ ಕರ್ತವ್ಯ. ಸುಮಲತಾ ಅಂಬರೀಷ್ ಪ್ರಚಾರಕ್ಕೆ ಕರೆದರೆ ನಾನು ಹೋಗಲು ರೆಡಿ. ಈ ಹಿಂದೆ ಅಂಬಿ ಅಪ್ಪಾಜಿ ಅವರು ಶಾಸಕರಾಗಿ ಚುನಾವಣೆಗೆ ನಿಂತಾಗ್ಲೂ ನಾನು ಅವರ ಪರ ಪ್ರಚಾರ ಮಾಡಿದೆ.

ನನ್ನ ಕೆಲ ಸ್ನೇಹಿತರ ಪರವಾಗಿಯೂ ಪ್ರಚಾರ ಮಾಡೊದು ನನ್ನ ಕರ್ತವ್ಯ. ಹಾಗಾಗಿ ಪ್ರಚಾರಕ್ಕೆ ಹೋಗುತ್ತೇನೆಂದು ಖಡಕ್ಕಾಗಿ ತಿಳಿಸಿದ್ದಾರೆ. ಈಗಾಗಲ್ಲೇ ಮದರ್ ಇಂಡಿಯಾ ಜೊತೆಗೆ ಗಾಲ್ಫ್ ಕ್ಲಬ್ ಎದುರುಗಡೆ ಇರುವ ಅಂಬಿ ನಿವಾಸದಲ್ಲಿ ಒಂದೆರಡು ಸುತ್ತಿನ ಮಾತುಕಥೆಯನ್ನು ದಚ್ಚು ನಡೆಸಿದ್ದು. ಚುನಾವಣೆ ಕಣದಿಂದ ಮದರ್ ಇಂಡಿಯಾರನ್ನು ಗೆಲ್ಲಿಸುವ ಪಣವನ್ನು ಚಾಲೆಂಜಿಂಗ್ ಸ್ಟಾರ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ವಹಿಸಿಕೊಂಡಿದ್ದಾರೆ.

ದರ್ಶನ್ ಸುಮಲತಾರಿಗೆ ಬೆಂಬಲ ನೀಡ್ತೀನಿ ಅಂತಾ ಹೇಳಿದ ಬೆನ್ನಲ್ಲೇ, ದಚ್ಚು ಬಳಗದಲ್ಲಿ ಪರ ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ. ಮಂಡ್ಯದಲ್ಲಿರುವ ಡಿ- ಫ್ಯಾನ್ಸ್ ಯಾವುದೇ ಕಾರಣಕ್ಕೂ ಮಂಡ್ಯಾ ಪಾಲಿಟಿಕ್ಸ್‌ಗೆ ದಚ್ಚು ಎಂಟ್ರಿಕೊಡಬಾರದೆಂದು ಮನವಿ ಮಾಡಿಕೊಳ್ತಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಸುಮಲತಾ & ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಂತಿದ್ದು ಈ ಇಬ್ಬರು ಸಿನಿಮಾ ಮಂದಿಯ ಹಗ್ಗ ಜಗ್ಗಾಟದಲ್ಲಿ ಚಾಲೆಂಜಿಂಗ್ ಸ್ಟಾರ್ ಪ್ರಜಾರ ಬೇಕಾ ಎಂಬ ಮಾತುಗಳು ಕೇಳಿಬರ್ತಿದೆ. ಹಾಗಾಗಿನೇ ಸ್ಯಾಂಡಲ್‌ವುಡ್‌ನ ನಯಾ ಯಜಮಾನ ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ಪ್ರಚಾರ ಮಾಡದಂತೆ ಸಾಕಷ್ಟು ವಿರೋಧಗಳು ಕೇಳಿಬರ್ತಿದೆ.

ಇಷ್ಟೆಲ್ಲಾ ವಿರೋಧಗಳ ನಡುವೆ ಬೆಂಬಲ ನೀಡ್ತೇನೆಂದಿರುವ ದಚ್ಚು. ಮಂಡ್ಯದಲ್ಲಿ ಪ್ರಚಾರ ಮಾಡ್ತಾರ ಇಲ್ವಾ ಎಂದು ಕುತೂಹಲದ ಕಣ್ಣುಗಳಿಂದ ಕಾದುನೋಡುವಂತೆ ಮಾಡ್ತಿದೆ. ಇಷ್ಟೆಲ್ಲದರ ನಡುವೆ ಉಪ್ಪಿ ಸ್ಯಾಂಡಲ್‌ವುಡ್ ಪಾಲಿಟಿಕ್ಸ್ ಕಾಳಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಮೂಲಕ ಮೊದಲಿಂದ್ಲೂ ಹೊಸ ಬಗೆಯ ಸಿದ್ಧಾಂತಗಳ ಮೂಲಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ ಉಪೇಂದ್ರ. ಈ ಭಾರಿಯ ಲೋಕಸಭಾ ಕಣದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚಿತ್ರರಂಗದಲ್ಲಿ ಪಾಲಿಟಿಕ್ಸ್‌ನಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here