Home Crime ಮದುವೆಯಾದ ಹೊಸತರಲ್ಲಿ ಸಾಚಾತರ ಇದ್ದ ಪತಿರಾಯ ನಂತರ ತನ್ನ ಕಾಮುಕತನಕ್ಕೆ ನೊಂದ ಶಿಕ್ಷಕಿ ಆತ್ಮಹತ್ಯೆಗೆ ಶರಣಾಗತಿ..!?...

ಮದುವೆಯಾದ ಹೊಸತರಲ್ಲಿ ಸಾಚಾತರ ಇದ್ದ ಪತಿರಾಯ ನಂತರ ತನ್ನ ಕಾಮುಕತನಕ್ಕೆ ನೊಂದ ಶಿಕ್ಷಕಿ ಆತ್ಮಹತ್ಯೆಗೆ ಶರಣಾಗತಿ..!? ಹೆತ್ತವರ ವಿರೋಧದಲ್ಲೇ ಪ್ರೀತಿಸಿ ಮದುವೆಯಾಗಿದ್ದ ಶಿಕ್ಷಕ-ಶಿಕ್ಷಕಿ..?!

792
0
SHARE

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ತನ್ನ ಸಹೋದ್ಯೊಗಿ ಶಿಕ್ಷಕನನ್ನೆ ಮದುವೆಯಾಗಿದ್ಲು ಆ ಶಿಕ್ಷಕಿ. ಸುಖ ಸಂಸಾರಕ್ಕೆ ಕೊಂಡಿಯೆಂಬಂತೆ ಆ ಜೋಡಿಗೆ ಮುದ್ದಾದ ಒಂದು ಹೆಣ್ಣು ಮಗು ಸಹ ಇತ್ತು. ಮದುವೆಯಾದ ಹೊಸತರಲ್ಲಿ ಸಾಚಾತರ ಇದ್ದ ಪತಿರಾಯ ನಂತರ ತನ್ನ ಕಾಮುಕತನ ತೋರಲು ಶುರುಮಾಡಿದ್ದ.. ಅವನ ಪರಸಂಗದಾಟಕ್ಕೆ ನೊಂದ ಶಿಕ್ಷಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಗಂಡನ ಅನೈತಿಕ ಸಂಬಂಧಕ್ಕೆ ಮನನೊಂದು ನೇಣಿಗೆ ಶರಣಾಗಿರೋ ಈಕೆ ದೇವಿಕಾ. ವೃತ್ತಿಯಲ್ಲಿ ಖಾಸಗಿ ಶಾಲೆ ಶಿಕ್ಷಕಿ. ಕಳೆದ ಐದು ವರ್ಷಗಳ ಹಿಂದೆ ತಾನು ಕೆಲ್ಸ ಮಾಡ್ತಿದ್ದ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸುನೀಲ್ ಕುಮಾರ್ ನನ್ನು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ಲು.

ಇವರ ಸುಖ ಸಂಸಾರಕ್ಕೆ ನಿದರ್ಶನವೆಂಬಂತೆ ಮುದ್ದಾದ ಹೆಣ್ಣು ಮಗುವೊಂದು ಸಹ ಇತ್ತು. ಆದ್ರೀಗ ಗಂಡನ ಅಕ್ರಮ ಸಂಬಂಧಕ್ಕೆ ನೊಂದ ದೇವಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಮದುವೆಯಾದ ಕೆಲದಿನಗಳ ಕಾಲ ಶ್ರೀರಾಮಚಂದ್ರನಂತೆ ಇದ್ದ ಪ್ರಸನ್ನ ಕುಮಾರ್ ಇತ್ತೀಚೆಗೆ ತನ್ನ ವರಸೆ ಶುರು ಮಾಡಿದ್ದ.

ವೃತ್ತಿಯಲ್ಲಿ ಶಿಕ್ಷಕನಾದ್ರು ಪ್ರತಿ ನಿತ್ಯವು ಹೆಂಡತಿಗೆ ಕುಡಿದು ಬಂದು ಹಲ್ಲೆ ಮಾಡ್ತಿದ್ದ.. ಅಷ್ಟೇ ಅಲ್ದೆ ಪ್ರಸನ್ನ ಕುಮಾರ್‌ನಿಗೆ ಉತ್ತರ ಭಾರತ ಮೂಲದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರೋದು ದೇವಿಕಾಗೆ ತಿಳಿದಿದೆ. ಇದೇ ವಿಚಾರಕ್ಕೆ ಹಲವು ಬಾರಿ ಗಂಡ ಹೆಂಡತಿ ನಡುವೆ ಜಗಳವಾಗಿದೆ. ತಡರಾತ್ರಿಯೂ ಇದೇ ರೀತಿ ಜಗಳವಾಗಿದೆ..

ಜಗಳದಲ್ಲೇ ಪ್ರಸನ್ನ ಕುಮಾರ್ ದೇವಿಕಾಳಾ‌ ಉಸಿರುಗಟ್ಟಿಸಿ ಕೊಂದಿದ್ದಾನೆ ಅಂತಾ ಕುಟುಂಬಸ್ಥರು ಆರೋಪಿಸ್ತಿದ್ದಾರೆ.ಇನ್ನು ತನ್ನ ಸಾವಿಗೆ ಪತಿಯೇ ಕಾರಣ, ಎಂದು ಡೆತ್ ನೋಟ್ ಬರೆದಿಟ್ಟು ದೇವಿಕಾ ಸತ್ತಿದ್ದಾಳೆ ಅಂತಾ ಹೇಳಲಾಗ್ತಿದೆ‌.

ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಜೆಪಿ ನಗರ ಪೋಲೀಸ್ರು ಗಂಡ ಪ್ರಸನ್ನ ಕುಮಾರ್ ನನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.ಅದೇನೆ ಇರಲಿ ಎಲ್ಲರ ವಿರೋಧದ ನಡುವೆಯೂ ಈತನನ್ನೆ ನಂಬಿ ಬಂದ ದೇವಿಕಾ ದುರಂತ ಅಂತ್ಯ ಕಂಡಿದ್ದಾಳೆ.. ಪ್ರಸನ್ನ ಕುಮಾರ್ ದುಷ್ಟ ಬುದ್ದಿಯಿಂದ ಮಗು ಅನಾಥವಾಗಿದೆ…

LEAVE A REPLY

Please enter your comment!
Please enter your name here