Home District ಮದುವೆಯ ಆಮಂತ್ರಣಕ್ಕೆ ಮಾಡಿದ್ದ ಇವರ ಪ್ಲಾನ್‌ಗೆ ರಾಜ್ಯದ ಜನತೆ ಬೋಲ್ಡ್..!??? ಇದು ವೋಟರ್ ಐಡಿ ಅಲ್ಲ,...

ಮದುವೆಯ ಆಮಂತ್ರಣಕ್ಕೆ ಮಾಡಿದ್ದ ಇವರ ಪ್ಲಾನ್‌ಗೆ ರಾಜ್ಯದ ಜನತೆ ಬೋಲ್ಡ್..!??? ಇದು ವೋಟರ್ ಐಡಿ ಅಲ್ಲ, ಲಗ್ನಪತ್ರಿಕೆ…

805
0
SHARE

ಚುನಾವಣೆಯ ಗುಂಗು ಈ ವಧು-ವರರಿಗೂ ಹಿಡಿಸಿದೆ. ಹಾಗಾಗಿಯೇ ಹಾವೇರಿಯಲ್ಲಿ ನವಜೋಡಿಯೊಂದು ತಮ್ಮ ಮದುವೆಗೆ ವೋಟರ್ ಐಡಿ ರೀತಿಯ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಈ ಮೂಲಕ ಚುನಾವಣೆ ಬಗ್ಗೆ ಜಾಗ್ರತೆ ಮೂಡಿಸಲು ಮುಂದಾಗಿದ್ದಾರೆ.

 

 

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಉಪ್ಪುಣಸಿ ನಿವಾಸಿ ಗೋವಾ ರಾಜ್ಯದ ವಾಸ್ಕೋದಲ್ಲಿ ರೈಲ್ವೆ ಇಲಾಖೆಯ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿದ್ದಪ್ಪ ರಾಣೇಬೆನ್ನೂರು ತಾಲೂಕಿನ ಕುಸಗೂರ ನಿವಾಸಿ ಜ್ಯೋತಿ ಎಂಬುವರೊಂದಿಗೆ ಇದೇ ಎಪ್ರಿಲ್ 27 ರಂದು ಮದುವೆಯಾಗುತ್ತಿದ್ದಾರೆ.

 

 

ಈ ಜೋಡಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರ ಸಮ್ಮತಿಯ ಮೇರೆಗೆ ವಿಶಿಷ್ಟವಾಗಿ ಮದುವೆ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿ ಮತದಾರರ ಜಾಗೃತಿಗೆ ಮುಂದಾಗಿ ಎಲ್ಲರ ಗಮನಸೆಳೆದಿದ್ದಾರೆ… ಈ ವಿಶಿಷ್ಟವಾದ ಲಗ್ನಪತ್ರಿಕೆಯನ್ನು ವರ ಸಿದ್ದಪ್ಪ ಖುದ್ದಾಗಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಪರಶುರಾಮ ಅವರಿಗೆ ನೀಡಲಾಯ್ತು…

 

ಈ ಕುರಿತಂತೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತೀವ್ರ ಸಂತಸ ವ್ಯಕ್ತಪಡಿಸಿ ನವ ವರರ ಈ ವಿನೂತನ ಪ್ರಯೋಗವನ್ನು ಪ್ರಶಂಶಿಸಿ ಈ ಸಮಾರಂಭದಲ್ಲಿ ಭಾಗವಹಿಸಿ ಮದುವೆ ಸಮಾರಂಭದಲ್ಲಿ ಮತದಾನದ ಜಾಗೃತಿ ಮೂಡಿಸಲಾಗುವುದೆಂದು ಹೇಳಿದರು…

 

LEAVE A REPLY

Please enter your comment!
Please enter your name here