Home Cinema ಮದುವೆ ಆಗುವ ಮಾತು ಕೊಟ್ಟು ಪ್ರಸ್ತ ಮುಗಿಸಿಕೊಂಡಿದ್ದನಂತೆ ಮಿಥುನ್ ಚಕ್ರವರ್ತಿ ಪುತ್ರ..!? ಮಹಾಕ್ಷಯ್ ಮ್ಯಾರೇಜ್ ಟೈಮ್‌ನಲ್ಲಿ...

ಮದುವೆ ಆಗುವ ಮಾತು ಕೊಟ್ಟು ಪ್ರಸ್ತ ಮುಗಿಸಿಕೊಂಡಿದ್ದನಂತೆ ಮಿಥುನ್ ಚಕ್ರವರ್ತಿ ಪುತ್ರ..!? ಮಹಾಕ್ಷಯ್ ಮ್ಯಾರೇಜ್ ಟೈಮ್‌ನಲ್ಲಿ ಟೈಂ ಬಾಂಬ್ ಹಾಕಿದ ಭೋಜ್ ಪುರಿ ನಟಿ..!?

3592
0
SHARE

ಬಾಲಿವುಡ್ ನಲ್ಲಿ ದಾದಾ ಅಂತಲೇ ಖ್ಯಾತಿ ಪಡೆದಿರುವ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಈಗ ಅಪಖ್ಯಾತಿ ಬಂದಿದೆ. ಅಂದ ಹಾಗೆ ಅಪ್ಪ ಮಿಥುನ್ ಗೆ ಈ ಅಪಖ್ಯಾತಿ ಬಂದಿರೋದು ಮಗನಿಂದ ಅನ್ನೋದು ವಿಶೇಷ. ಹೌದು ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಮೇಲೆ ಈಗ ದಿಲ್ಲಿ ಕೋರ್ಟ್ ಎಫ್ ಐ ಆರ್ ದಾಖಲಿಸುವಂತೆ ಸೂಚಿಸಿದೆ. ಇದಕ್ಕೆ ಕಾರಣ ಮಹಾಕ್ಷಯ್ ಮೇಲಿನ ಆರೋಪ. ಈ ಆರೋಪ ಮಾಡಿರೋದು ಒಬ್ಬ ಭೋಜ್ ಪುರಿ ನಟಿ. ತನ್ನ ಜೊತೆ ಅಫೈರ್ ಇಟ್ಟುಕೊಂಡು ಈಗ ಮೋಸ ಮಾಡ್ತಾ ಇರೋದ್ರಿಂದ ಅವನ ಮೇಲೆ ಎಫ್ ಐ ಆರ್ ಹಾಕಿ ಅಂತ ಆಕೆ ಕೋರ್ಟ್ ಮೆಟ್ಟಿಲೇರಿದ್ದಳು..

ಹಾಗಾಗಿ ಮಿಥುನ್ ಪುತ್ರ ಮಹಾಕ್ಷಯ್ ಗೆ ಈಗ ಈ ಮಹಾಪರಾಧದ ಆರೋಪದ ಆಧಾರದ ಮೇಲೆ ಮಹಾ ಕಂಟಕ ಎದುರಾಗಿದೆ.ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು ಬಾಲಿವುಡ್ ನಲ್ಲಿ ಮಿಥುನ್ ದಾ ಎಂದೇ ಕರೆಯಲಾಗುತ್ತದೆ. ಹೇಳಿ ಕೇಳಿ ಮಿಥುನ್ ಚಕ್ರವರ್ತಿ ಅಂದ್ರೆ ಬಾಲಿವುಡ್ ನಲ್ಲಿ ದೊಡ್ಡ ಹೆಸರು. ಬಾಲಿವುಡ್ ನ ಹಳೆಯ ಲೆಜೆಂಡ್ ಗಳನ್ನು ನೆನಪಿಸಿಕೊಂಡರೆ ಅದರಲ್ಲಿ ಮಿಥುನ್ ಚಕ್ರವರ್ತಿ ಅವರ ಹೆಸರು ಇದ್ದೇ ಇರುತ್ತದೆ. ಪ್ಯಾರ್ ಝುಕ್ತಾ ನಹೀ ಯಂತ ಲವ್ ಸ್ಟೋರಿಯಿಂದ ಹಿಡಿದು ಅಗ್ನಿಪಥ್ ಚಿತ್ರದ ಕೃಷ್ಣನ್ ಅಯ್ಯರ್ ಎಂ ಎಂ ಪಾತ್ರದವರೆಗೂ ಮಿಥುನ್ ಅವರದ್ದು ವೈವಿಧ್ಯಮಯ ಚಿತ್ರಜೀವನ.

ಇಂಥ ದೊಡ್ಡ ನಟ ಮಿಥುನ್ ಚಕ್ರವರ್ತಿ ಅವರಿಗೆ ಈಗ ಮಗನ ಮೂಲಕ ಸಂಕಟ ಬಂದೊದಗಿದೆ.ಹೌದು ಈ ಭೋಜ್ ಪುರಿ ನಟಿ ಮಹಾಕ್ಷಯ್ ಮೇಲೆ ಆರೋಪಗಳನ್ನು ಮಾಡ್ತಾ ಇರೋದು ಮಹಾಕ್ಷಯ್ ಮದುವೆಗೆ 4 ದಿನ ಬಾಕಿ ಇದ್ದಾಗ. ಮಹಾಕ್ಷಯ್ ಚಿತ್ರನಟಿ ಮದಲಸಾ ಶರ್ಮ ಅವರನ್ನು ಇದೇ ಜುಲೈ 7ರಂದು ಮದುವೆ ಆಗೋದು ಪಕ್ಕಾ ಆಗಿತ್ತು. ಕನ್ನಡದಲ್ಲಿ ದರ್ಶನ್ ಅಭಿನಯದ ಶೌರ್ಯ ಚಿತ್ರವನ್ನೂ ಸೇರಿ ಮದಲಸಾ ಶರ್ಮಾ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ. ಇವರಿಬ್ಬರ ಮದುವೆಗೆ ಮಿಥುನ್ ಫ್ಯಾಮಿಲಿಯಲ್ಲಿ ಎಲ್ಲ ಸಿದ್ಧತೆಗಳೂ  ನಡೆದಿದ್ದವು. ಇಂಥಾ ಸಂದರ್ಭದಲ್ಲಿ ಈ ಭೋಜ್ಪುರಿ ನಟಿ ಬಂದು ಈ ಬಾಂಬ್ ಸಿಡಿಸಿದ್ದಾಳೆ.

ಸುಮಾರು 3 ವರ್ಷಗಳ ಹಿಂದೆ ಅಂದ್ರೆ 2015ರಲ್ಲಿ ಮಹಾಕ್ಷಯ್ ಗೆ ಈ ಭೋಜ್ ಪುರಿ ಪರಿಯ ಪರಿಚಯ ಆಗಿತ್ತಂತೆ. ಆಗ ಮಹಾಕ್ಷಯ್ ನನ್ನನ್ನು ಒಂದು ದಿನ ತಮ್ಮ ಫ್ಲ್ಯಾಟ್ ಗೆ ಕರೆಸಿಕೊಂಡು ತನಗೆ ಪಾನೀಯದಲ್ಲಿ ಮತ್ತು ಬರುವ ಔಷಧ ಹಾಕಿಕೊಟ್ಟಿ ದ್ದಾನೆ ಮತ್ತು ನನ್ನನ್ನು ರೇಪ್ ಮಾಡಿದ್ದಾನೆ. ಅದಾದ ನಂತರ ಮೂರು ವರ್ಷಗಳ ಕಾಲ ನನ್ನನ್ನು ಮದುವೆ ಆಗೋದಾಗಿ ನಂಬಿಸಿ ನನ್ನನ್ನು ಬಹಳಷ್ಟು ಬಾರಿ ರೇಪ್ ಮಾಡಿದ್ದಾನೆ. ಒಮ್ಮೆ ನಾನು ಗರ್ಭವತಿಯಾಗಿದ್ದಾಗ ನನಗೆ ಗೊತ್ತಿಲ್ಲದಂತೆ ಮಾತ್ರೆಗಳನ್ನು ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ. ಈಗ ನನ್ನನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆ ಆಗಲು ಹೊರಟಿದ್ದಾನೆ ಅನ್ನೋದು ಈಕೆಯ ಆರೋಪ.

ಈ ಭೋಜ್ ಪುರಿ ನಟಿ ಹೇಳುವ ಪ್ರಕಾರ, ಮಹಾಕ್ಷಯ್ ಈಕೆಯೊಂದಿಗೆ ಮದುವೆ ಆಗುವ ಮಾತು ಕೊಟ್ಟು ಪ್ರಸ್ತ ಮುಗಿಸಿಕೊಂಡಿದ್ದನಂತೆ. ಆದರೆ ನಾನು ಪದೇ ಪದೇ ಮದುವೆ ಆಗುವಂತೆ ಕೇಳುತ್ತಿದ್ದರೂ ಮಹಾಕ್ಷಯ್ ರಿಪ್ಲೇ ಮಾಡುತ್ತಿರಲಿಲ್ಲ. ಕೊನೆಗೊಂದು ದಿನ ನಿನ್ನ ಜಾತಕ ಕೊಡು ಅಂತ ಕೇಳಿ ತೆಗೆದುಕೊಂಡು ಹೋದ ಮಹಾಕ್ಷಯ್, ನಂತರ, ನನ್ನ ನಿನ್ನ ಜಾತಕ ಕೇವಲ ಸ್ನೇಹದ ವಿಷಯದಲ್ಲಿ ಮ್ಯಾಚ್ ಆಗುತ್ತದೆ. ಮದುವೆ ವಿಷಯದಲ್ಲಿ ಅಲ್ಲ. ಹಾಗಾಗಿ ಈ ಮದುವೆ ಸಾಧ್ಯವಿಲ್ಲ ಅಂತ ಖಡಾ ಖಂಡಿತವಾಗಿ ಮದುವೆ ವಿಚಾರವನ್ನು ತಿರಸ್ಕರಿಸಿದ್ದಾನೆ. ಅಲ್ಲಿಗೆ ಈ ಭೋಜ್ ಪುರಿ ನಟಿಗೆ ಮಹಾಕ್ಷಯ್ ನನ್ನು ಮದುವೆ ಆಗೋ ಆಸೆ ಕಮರಿ ಹೋಗಿದೆ.

ಅದಕ್ಕೇ ಈಗ ಮಹಾಕ್ಷಯ್ ಮದುವೆಯ ದಿನ ಸಮೀಪಿಸುತ್ತಿದ್ದಂತೆ, ಇನ್ನೊಂದು ಹುಡುಗಿಯ ಜೊತೆ ಸಪ್ತಪದಿ ತುಳಿಯುತ್ತಿರೋ ಅವನನ್ನು ಅಡ್ಡಗಾಲು ಹಾಕಿ ತಡೆದಿದ್ದಾಳೆ.ಒಟ್ಟಾರೆ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಗೆ ತನ್ನ ಮದುವೆಯ ಸಂದರ್ಭದಲ್ಲೇ ಮಹಾಪರಾಧದ ಆರೋಪದ ಮೇಲೆ ಮಹಾ ಕಂಟಕ ಎದುರಾಗಿದೆ. ಮಹಾಕ್ಷಯ್ ನಿಜಕ್ಕೂ ಈ ಕೃತ್ಯ ಮಾಡಿದ್ದಾನೆಯೇ, ಅಲ್ಲದೆ ಈ ಭೋಜ್ ಪುರಿ ನಟಿಗೆ ಇವನನ್ನು ಮದುವೆ ಆಗೋ ಉದ್ದೇಶ ಇದೆಯಾ ಅಥವಾ ಮದುವೆಯ ಸಂದರ್ಭದಲ್ಲಿ ಕಿರಿಕ್ ಮಾಡಿ ಒಂದಿಷ್ಟು ದುಡ್ಡು ಪೀಕಿಕೊಳ್ಳುವ ಹುನ್ನಾರವೇ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ ಮೂರು ಗಂಟು ಹಾಕೋಕೆ ಮೂರು ದಿನ ಇರುವಾಗ ಎದುರಾಗಿರುವ ಈ ಸಂಕಷ್ಟವನ್ನು ಮಹಾಕ್ಷಯ್, ತನ್ನ ತಾಯಿ ಯೋಗಿತಾ ಬಾಲಿ, ಮತ್ತು ತಂದೆ ಮಿಥುನ್ ಚಕ್ರವರ್ತಿ ಅವರೊಂದಿಗೆ ಸೇರಿ ಹೇಗೆ ಬಗೆಹರಿಸಿಕೊಳ್ಳುತ್ತಾನೆ ಅನ್ನೋದು ಸದ್ಯದ ಕುತೂಹಲ…

LEAVE A REPLY

Please enter your comment!
Please enter your name here