Home Crime ಮದುವೆ ಬಳಿಕವೂ ಅನೈತಿಕ ಸಂಬಂಧ ಮುಂದುವರೆಸಿದ್ದ ಮಾಜಿ ಪ್ರೇಮಿಗಳು..!? ಪ್ರೇಮಿಗಳ ದಿನಾಚರಣೆ ದಿನದಂದೇ ತಮ್ಮದೇ ಅಶ್ಲೀಲ...

ಮದುವೆ ಬಳಿಕವೂ ಅನೈತಿಕ ಸಂಬಂಧ ಮುಂದುವರೆಸಿದ್ದ ಮಾಜಿ ಪ್ರೇಮಿಗಳು..!? ಪ್ರೇಮಿಗಳ ದಿನಾಚರಣೆ ದಿನದಂದೇ ತಮ್ಮದೇ ಅಶ್ಲೀಲ ಪೋಟೋ‌ ಇಟ್ಟುಕೊಂಡು ಪ್ರೇಮಿಗಳು ಪರಸ್ಪರ ಬ್ಲಾಕ್ ಮೇಲ್..

2739
0
SHARE

ಇವತ್ತು ಪ್ರೇಮಿಗಳ ದಿನಾಚರಣೆ. ಎಲ್ಲಾ ಪ್ರೇಮಿಗಳು ನನಗೆ ನೀನು…ನಿನಗೆ ನಾನು..ಎಂದು ಪ್ರೇಮಲೋಕದಲ್ಲಿ ತೇಲುತಿದ್ರೆ ಇಲ್ಲೊಂದು ಪ್ರೇಮಿಗಳ ಜಗಳ ಬೀದಿಗೆ ಬಂದಿದೆ.

ತುಮಕೂರು ನಗರದ ನಿವಾಸಿಗಳಾದ ನೇತ್ರಾವತಿ ಹಾಗೂ ರಂಗನಾಥ್ ಪ್ರೇಮ ಪ್ರಸಂಗ ಈಗ ಮಹಿಳಾ ಠಾಣಾ ಮೆಟ್ಟಿಲೇರಿದೆ..ರಂಗನಾಥ್ ಮತ್ತು ನೇತ್ರಾ ಕಳೆದ ಮೂರು ವರ್ಷಗಳಿಂದ ಪ್ರೀತಿಸ್ತಾ ಇದ್ರು. ಆದ್ರೆ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದೆ ಇದ್ದುದರಿಂದ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ರೂ..

ಆದ್ರೂ ನೇತ್ರಾವತಿ ಕೆಲ ತಿಂಗಳ ಬಳಿಕ ರಂಗನಾಥನನ್ನ ಸಂಪರ್ಕಿಸಿ ಮತ್ತೆ ಅನೈತಿಕ ಸಂಬಂಧ ಮುಂದುವರೆಸಿದ್ದಾಳೆ..ಅಲ್ಲದೆ ರಂಗನಾಥನ ಕಡೆಯಿಂದ ಸುಮಾರು 1.5ಲಕ್ಷ ರೂ ಪೀಕಿದ್ದಾಳೆ ಎಂದು ರಂಗನಾಥ್ ಆರೋಪಿದ್ದಾನೆ. ದುಡ್ಡು ವಾಪಸ್ ಕೊಡು ಎಂದು ರಂಗನಾಥ್ ಕೇಳಿದಾಗ ನೇತ್ರಾವತಿ ನಿರಾಕರಿಸಿದ್ದಾಳೆ.. ಆಗಲೇ‌ ಶುರುವಾಯ್ತು ಇಬ್ಬರ ನಡುವೆ ಯುದ್ದ.

ಅತ್ತ ಕೆಲ ಫೋಟೋ ಇಟ್ಟುಕೊಂಡು ರಂಗನಾಥ್ ತನ್ನನ್ನ ಬ್ಲಾಕ್ ಮೇಲ್ ಮಾಡುತ್ತಾನೆ ಎಂದು ನೇತ್ರಾವತಿ ದೂರು ನೀಡಿದ್ದಾಳೆ. ಅಸಲಿಗೆ ಈ ಇಬ್ಬರೂ ವಿವಾಹಿತ ಪ್ರೇಮಿಗಳು ಪರಸ್ಪರ ತಮ್ಮ ಖಾಸಗಿ ಸಮಯವನ್ನು ಮೊಬೈಲಲ್ಲಿ ಸೆರೆ ಹಿಡಿದು ಒಬ್ಬರಿಗೊಬ್ಬರು ಬ್ಲಾಕ್ ಮೇಲ್ ಮಾಡಿಕೊಂಡಿದ್ದಾರೆ.

ಒಟ್ಟಾರೆ ಇಬ್ಬರು ಪ್ರೇಮಿಗಳ ಜಗಳ ಮಹಿಳಾ ಠಾಣಾ ಮೆಟ್ಟಿಲೇರಿದ್ದು ಅಶ್ಲೀಲ ಪೋಟೋ ಗಳು ವೈರಲ್ ಆಗಿವೆ. ಆದರೆ ಈ ಪ್ರಕರಣದ ಕುರಿತು ಪ್ರಿಯಕರ ರಂಗನಾಥ್ ಪ್ರತಿಕ್ರಿಯೆ ನೀಡಿದ್ರೆ…ನೇತ್ರಾವತಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

LEAVE A REPLY

Please enter your comment!
Please enter your name here