Home Crime ಮದುವೆ ಮನೆಯಲ್ಲಿ ವರ ನಾಪತ್ತೆ..! ಸಂಭ್ರಮದ ಮಂಟಪದಲ್ಲಿ ನಿಂತ‌ ಮದುವೆ..

ಮದುವೆ ಮನೆಯಲ್ಲಿ ವರ ನಾಪತ್ತೆ..! ಸಂಭ್ರಮದ ಮಂಟಪದಲ್ಲಿ ನಿಂತ‌ ಮದುವೆ..

769
0
SHARE

ಕೊನೆಘಳಿಗೆಯಲ್ಲಿ ಮದುಮಗ ಕಲ್ಯಾಣ ಮಂಟಪಕ್ಕೆ ಬರದೇ ಪರಾರಿಯಾದ ಪರಿಣಾಮ ಮದುವೆ ಅರ್ಧಕ್ಕೆ ನಿಂತ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿ ಈ ಪ್ರಕರಣ ನಡೆದಿದೆ.ಕಲ್ಲೇಗೌಡನ ದೊಡ್ಡಿ ಗ್ರಾಮದ ಶಿವಕುಮಾರ್ ಮದುವೆಗೆ ಒಪ್ಪದೆ ನಾಪತ್ತೆಯಾದ ವರ.

ಈತನಿಗೆ ಕುಣಿಗಲ್ ತಾಲೂಕಿನ ಬಿಳಿದೇವಾಲಯದ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಈ ಇಬ್ಬರಿಗೂ ನಿನ್ನೆ ಮತ್ತು ಇಂದು ಯಡಿಯೂರಿನಹನುಮ್ಮತಿಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಸಲು ಸಕಲ ಸಿದ್ದತೆಮಾಡಿಕೊಳ್ಳಲಾಗಿತ್ತು. ನಿನ್ನೆ ರಾತ್ರಿ ಶಾಸ್ತ್ರ ಇಂದು ಮಹೂರ್ತನಡೆಯಬೇಕಿತ್ತು.

ಆದ್ರೆ ವರ ಶಿವಕುಮಾರ್ ಕೊನೆ ಘಳಿಗೆವರೆಗೂ ಮದುವೆ ಮಂಟಪಕ್ಕೆ ಬರದೇ ನಾಪತ್ತೆಯಾಗಿದ್ದಾನೆ. ಇದ್ರಿಂದ ಮದುವೆ ಅರ್ಧಕ್ಕೆನಿಂತ್ತಿದೆ.ಮದುವೆ ಸಮಾರಂಭದಲ್ಲಿ ಸಾವಿರಾರು ಜನರಿಗೆ ತಯಾರಿಸಿದ್ದ ಅಡುಗೆ ವೇಸ್ಟ್ ಆಗಿದೆ. ಅಮೃತೂರು ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಲ್ಲದೆ ಮದುವೆ ಬಂದಿದ್ದ ಸಂಬಂಧಿಕರು ವಿಧಿಯಿಲ್ಲದೆ ವಾಪಸ್ ಮನೆ ಕಡೆಗೆ ನಡೆದಿದ್ದಾರೆ.

LEAVE A REPLY

Please enter your comment!
Please enter your name here