Home District ಮಧುಕರ್ ಶೆಟ್ಟಿ ನಿಧನ ಬಗ್ಗೆ ತನಿಖೆಗೆ ಸಚಿವ ಡಿಕೆಶಿ ಒತ್ತಾಯ..! IPS ಅಧಿಕಾರಿ ಮಧುಕರ್ ಶೆಟ್ಟಿ...

ಮಧುಕರ್ ಶೆಟ್ಟಿ ನಿಧನ ಬಗ್ಗೆ ತನಿಖೆಗೆ ಸಚಿವ ಡಿಕೆಶಿ ಒತ್ತಾಯ..! IPS ಅಧಿಕಾರಿ ಮಧುಕರ್ ಶೆಟ್ಟಿ ಸಾವಿನ ಬಗ್ಗೆ ಶಂಕೆ..!

2161
0
SHARE

ಅನಾರೋಗ್ಯದಿಂದ ನಿನ್ನೆ ನಿಧನರಾದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರ ಇನ್ನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿನ ಯಲಹಂಕದಲ್ಲಿರೋ ಪೊಲೀಸ್ ತರಬೇತಿ ಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹೈದ್ರಾಬಾದ್ ನಲ್ಲಿರೋ ಮಧುಕರ್ ಶೆಟ್ಟಿ ನಿವಾಸದಲ್ಲೇ ಹಿರಿಯ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಮಧುಕರ್ ಶೆಟ್ಟಿಯ ನಿವಾಸದಲ್ಲೇ ಮಧುಕರ್ ಶೆಟ್ಟಿಯ ಇಷ್ಟವಾದ ಹಾಡನ್ನು ಅಸಿಸ್ಟೆಂಟ್ ಡೈರೆಕ್ಟರ್ ಪವನ್ ಕುಮಾರ್ ಹಾಡಿ ನಮನ ಸಲ್ಲಿಸಿದರು. ಬೆಂಗಳೂರಿನಲ್ಲಿ ಪಾರ್ಥಿವ ಶರೀರ ಅಂತಿಮ ದರ್ಶನ ಬಳಿಕ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತದೆ.

ನಾಳೆ ಬೆಳಗ್ಗೆ 10 ಗಂಟೆ ಅಂತ್ಯಕ್ರಿಯೆ ನಡೆಯಲಿದೆ. ಯಾಡಾಡಿಯಲ್ಲಿರೋ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ ಬಗ್ಗೆ ತನಿಖೆಯಾಗಬೇಕು ಅಂತ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಪಾರ್ಥಿವ ಶರೀರ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಆಗಮಿಸಲಿದೆ.

ಈಗಾಗಲೇ ಯಲಹಂಕ ಸಶಸ್ತ್ರ ತರಬೇತಿ ಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ಮಧುಕರ್ ಶೆಟ್ಟಿ ನನಗೆ ಆತ್ಮೀಯ ಪರಿಚಯ, ಮಧುಕರ್ ಶೆಟ್ಟಿ ಸಾವು ಸ್ವಾಭಾವಿಕವೇ ಎಂದು ತನಿಖೆ ಮಾಡಬೇಕು ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here