Home Crime ಮನೆಗೆಲಸಕ್ಕೆ ಅಪರಿಚಿತರನ್ನ ಇಟ್ಕೊಂಡ್ರೆ ಅಪಾಯ..?! ನಿಮ್ಮ ಪ್ರಾಣ, ಹಣ, ಚಿನ್ನಾಭರಣ ಮೂರಕ್ಕೂ ಕಂಟಕ..!!!

ಮನೆಗೆಲಸಕ್ಕೆ ಅಪರಿಚಿತರನ್ನ ಇಟ್ಕೊಂಡ್ರೆ ಅಪಾಯ..?! ನಿಮ್ಮ ಪ್ರಾಣ, ಹಣ, ಚಿನ್ನಾಭರಣ ಮೂರಕ್ಕೂ ಕಂಟಕ..!!!

1205
0
SHARE

ಸಾಮಾನ್ಯವಾಗಿ ಹೊರಗಡೆ ಕೆಲಸಕ್ಕೆ ಹೋಗೋ ಮಹಿಳೆಯರು, ಮನೆಗೆಲಸಕ್ಕೆ ಅಂತ ಹೆಣ್ಣು ಮಕ್ಕಳನ್ನ ನೇಮಿಸಿಕೊಳ್ತಾರೆ. ಆದ್ರೆ ಪೂರ್ವಾಪರ ವಿಚಾರಿಸದೆ ಯಾರನ್ನಾದ್ರೂ ಮನೆಗೆಲಸಕ್ಕೆ ತಗೊಂಡ್ರೆ ಅವರಿಂದ ನಿಮ್ಮ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.ಹೀಗೆ ಗಾಬರಿಯಿಂದ ಪೊಲೀಸ್ ಠಾಣೆಯಲ್ಲಿ ಕುಳಿತು ದೂರು ನೀಡ್ತಿರೋ ಮಹಿಳೆ ಚಿತ್ರದುರ್ಗದ ಆಹಾರ ಇಲಾಖೆ ಸೂಪರಿಡೆಂಟ್ ನಾಗರತ್ನಮ್ಮ, ಈಕೆ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿರುವ ಉಯ್ಯಾಲೆ ಕಂಬದ ಮನೆಯಲ್ಲಿ ವಾಸಮಾಡುತ್ತಿದ್ದಾರೆ.

ಕಳೆದ ಮೂರ‍್ನಾಲ್ಕು ದಿನಗಳ ಹಿಂದೆ ಇವರ ಮನೆಗೆ ಬಂದ ಚಿತ್ರದುರ್ಗ ತಾಲೂಕಿನ ಕೊಳಹಾಳ್ ಗ್ರಾಮದ ಯುವತಿ ಶೋಭಾ, ನಿಮ್ಮ ಮನೆಯಲ್ಲಿ ಕೆಲಸ ಕೊಡಿ, ನೀವು ಅಷ್ಟೋ ಇಷ್ಟೋ ಹಣ ಕೊಟ್ಟರೆ ನನ್ನ ಓದಿಗೆ ಅನುಕೂಲ ಆಗುತ್ತೆ ಅಂತ ದುಂಬಾಲು ಬಿದ್ದಿದ್ದಾಳೆ. ಮೊದಲಿಗೆ ಕೆಲಸ ಕೊಡಲು ನಿರಾಕರಿಸಿದ ನಾಗರತ್ನಮ್ಮ, ಪಾಪ ಅಮಾಯಕ ಹುಡುಗಿ ಅಂದ್ಕೊಂಡು ಮನೆಗೆಲಸಕ್ಕೆ ಸೇರಿಸಿಕೊಂಡಿದ್ದಾರೆ.

ಆದರೆ ಮೊದಲೇ ಏನೋ ಸಂಚು ರೂಪಿಸಿಕೊಂಡು ಬಂದಿದ್ದ ಆರೋಪಿ ಶೋಭಾ, ಕೆಲಸಕ್ಕೆ ಸೇರಿದ ಎರಡನೇ ದಿನವೇ ಮನೆಯೊಡತಿ ಮೇಲೆ ಒನಕೆಯಿಂದ ಹಲ್ಲೆ ಮಾಡಿದ್ದಾಳೆ, ಅದೃಷ್ಟವಶಾತ್ ಶೋಭಾಳ ಗುರಿ ತಪ್ಪಿದ್ರಿಂದ ನಾಗರತ್ನಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶೋಭಾಳ ಕೃತ್ಯ ಕಂಡು ದಂಗಾಗಿದ್ದು, ಜೋರಾಗಿ ಕಿರುಚಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಕೂಡಲೇ ಧಾವಿಸಿ, ಆರೋಪಿಯನ್ನ ಹಿಡಿದು ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಕ್ಷಣ ಆರೋಪಿ ಶೋಭಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ನಗರ ಠಾಣೆ ಪೊಲೀಸರು, ಶೋಭಾಳ ಕೈಚೀಲದಲ್ಲಿ ಕಾರದ ಪುಡಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಶೋಭಾಳ ವಿರುದ್ದ ಕೊಲೆ ಯತ್ನ ಮತ್ತು ರಾಬರಿ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಒಟ್ಟಾರೆ ಅಪರಿಚಿತರ ಪೂರ್ವಾಪರ ತಿಳಿಯದೆ ಅಯ್ಯೋ ಪಾಪ ಅಂತ ಕನಿಕರ ತೋರಿದ ತಪ್ಪಿಗೆ ಅಮಾಯಕರಾದ ನಾಗರತ್ನಮ್ಮ ಒನಕೆ ಏಟು ತಿಂದು ನೋವು ಅನುಭವಿಸುತ್ತಿದ್ದಾರೆ. ಇನ್ನಾದ್ರೂ ಯಾರನ್ನಾದರೂ ಮನೆಗೆಲಸಕ್ಕೆ ಸೇರಿಸಿಕೊಳ್ಳುವಾಗ ಹತ್ತು ಬಾರಿ ಯೋಚಿಸೋದು ಭದ್ರತೆ ದೃಷ್ಟಿಯಿಂದ ಒಳ್ಳೆಯದು..

LEAVE A REPLY

Please enter your comment!
Please enter your name here