Home District ಮನೆಮದ್ದು ಮೊರೆ ಹೋಗೋರು ಸ್ವಲ್ಪ ಎಚ್ಚರ..?! ತಲೆ ಹೇನು ನಾಶ ಮಾಡೋಕೋಗಿ ಇಬ್ಬರ ದೃಷ್ಟಿಗೇ ಬಂದಿತ್ತು...

ಮನೆಮದ್ದು ಮೊರೆ ಹೋಗೋರು ಸ್ವಲ್ಪ ಎಚ್ಚರ..?! ತಲೆ ಹೇನು ನಾಶ ಮಾಡೋಕೋಗಿ ಇಬ್ಬರ ದೃಷ್ಟಿಗೇ ಬಂದಿತ್ತು ಕುತ್ತು..?!

481
0
SHARE

ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬೇಕು, ಕೂದಲು ಕಪ್ಪಾಗಬೇಕು, ಉದ್ದ ಬರಬೇಕು ಅಂತ ಮನೆ ಮದ್ದು ಮಾಡೋ ಕಸರತ್ತು ಮಾಡುತ್ತಿದ್ರೆ ಈ ಸ್ಟೋರಿ ನೋಡಲೇ ಬೇಕು. ತಿಂದ್ರೆ ಹಣ್ಣು ರುಚಿಯಾಗಿರುತ್ತೆ ಅಂತ ಅದರ ಬೀಜನು ಸಿಹಿಯಾಗಿರುತ್ತೆ ಅಂತೇನಿಲ್ಲ. ಈ ಹಣ್ಣು ಕಂಡ್ರೆ ಎಲ್ಲರೂ ಇಷ್ಟ ಪಡ್ತಾರೆ, ಅದರ ಬೀಜಗಳನ್ನು ಹೆಣ್ಮಕ್ಳು ಹೆಚ್ಚಾಗಿ ಬಳಸ್ತಾರೆ. ಏನು ಆಗಲ್ಲ ಅಂತ ಅಂದುಕೊಂಡವರಿಗೆ ಈ ಹಣ್ಣಿನ ಬೀಜ ಕಣ್ಣನ್ನೆ ಕಿತ್ತುಕೊಳ್ಳಲು ಹೊರಟಿದೆ.

ಹೆಣ್ಮಕ್ಳು ಸೌಂದರ್ಯ ಹೆಚ್ಚಿಸಿಕೊಳ್ಳೋದಕ್ಕೆ ಏನೆಲ್ಲಾ ಕಸರತ್ತು ಮಾಡ್ತಾರೆ. ಅಂತೆಯೇ ಕಸರತ್ತು ಮಾಡಲು ಹೋಗಿ ಮಹಿಳೆ ಹಾಗೂ ಬಾಲಕಿ ಇಬ್ಬರು ಆಪತ್ತು ತಂದುಕೊಂಡಿದ್ದಾರೆ. ವೈದ್ಯರ ಸಲಹೆ ಪಡೆಯದೆ ಮನೆ ಮದ್ದು ಮಾಡಿದ್ದರಿಂದ ಕಣ್ಣು ಕಳೆದುಕೊಳ್ಳೋ ಪರಿಸ್ಥಿತಿಗೆ ಹೋಗಿ ವೈದ್ಯರ ಚಿಕಿತ್ಸೆ ಪಡೆದು ಅದೃಷ್ಟವಶಾತ್ ಸಹಜ ಸ್ಥಿತಿಗೆ ತಲುಪಿದ್ದಾರೆ.ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಮತ್ತು ಜಂಗಮರ ಕಲ್ಗುಡಿ ಗ್ರಾಮದಲ್ಲಿ ಭಯಾನಕ ಘಟನೆ ನಡೆದಿದೆ.

ಹಣವಾಳ ಗ್ರಾಮದ ಅನಿತಾ ಎಂಬ ಯುವತಿ, ಜಂಗಮರ ಕಲ್ಗುಡಿ ಗ್ರಾಮದ ಚಾತುರ್ಯಎಂಬ ಮಗುವಿಗೆ ಆಘಾತ ಕಾದಿತ್ತು. ಅದೇನ್ ಅಂದ್ರೆ, ಮನೆಯಲ್ಲಿಯೇ ಸುಲಭವಾಗಿ ಸಿಗುವ ಹಣ್ಣುಗಳ ಬೀಜದಿಂದ ಕೆಲವರು ಮನೆ ಮದ್ದು ತಯಾರಿಸ್ತಾರೆ ಅಂತ ಸೀತಾಫಲ ಹಣ್ಣಿನ ಬೀಜವನ್ನ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡಿದ್ದಾರೆ. ಬೆಳಿಗ್ಗೆ ಎದ್ದು ತಲೆತೊಳೆದಾಗ ತಲೆಯಲ್ಲಿದ್ದ ಹೇನು ಸತ್ತುಹೋಗುತ್ತೆ ಅಂತ ಅಂದುಕೊಂಡವರಿಗೆ ಶಾಕ್ ಕಾದಿತ್ತು.

ಬೆಳಗಾಗುವುದರೊಳಗೆ ಇವರಿಬ್ಬರ ಕಣ್ಣಿಗೆ ಮಂಜು ಕವಿದಂತಾಗಿ ಕಣ್ಣು ಹುರಿ ಕಾಣಿಸಿಕೊಂಡಿತ್ತು ಇದ್ರಿಂದ ಗಾಬರಿಯಾದ ಪೋಷಕರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ತಲೆ ಕಡಿತದಿಂದ ತಲೆ ಕೂದಲಿನಲ್ಲಿ ಅಡಗಿದ್ದ ಹೇನುಗಳನ್ನ ಕೊಲ್ಲಲು ಮನೆ ಮದ್ದು ಬಳಸಿ ಇಬ್ಬರು ಆಸ್ಪತ್ರೆ ಸೇರಿದ್ದಾರೆ. ವಿಷಕಾರಿ ಅಂಶ ಹೊಂದಿರುವ ಸೀತಾಫಲ ಹಣ್ಣಿನ ಬೀಜದ ಮೊರೆ ಹೋದವರು ದೃಷ್ಟಿದೋಷಕ್ಕೆ ಒಳಗಾಗಿದ್ದಾರೆ.

ಸಕಾಲಕ್ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸದಿದ್ರೆ ಸಂಪೂರ್ಣ ದೃಷ್ಟಿ ಹೀನರಾಗುತ್ತಿದ್ದರೇನೋ. ಸದ್ಯಕ್ಕೆ ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಾತುರ್ಯ ಮತ್ತು ಅನಿತಾ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.ಒಟ್ನಲ್ಲಿ ಹೆಣ್ಮಕ್ಳು ಯಾವುದೇ ವೈದ್ಯರ ಸಲಹೆ ಇಲ್ದೆ, ಸೂಕ್ತ ಮಾಹಿತಿ ಇಲ್ದೆ ಯಾವುದೇ ಮನೆ ಮದ್ದು ಬಳಸುವುದಕ್ಕೆ ಮುಂಚೆ ಎಚ್ಚರ ವಹಿಸುವುದು ಸೂಕ್ತ. ಇಲ್ಲ ಅಂದ್ರೆ ಸೃಷ್ಠಿಯ ಅಂದ ಹೆಚ್ಚಿಸಿಕೋಳೋಕೆ ಹೋಗಿ ದೃಷ್ಠಿಗೆ ಕುತ್ತು ಬಂದಂತೆ, ಮತ್ತಾವುದೇ ಅನಾಹುತ ಆಗುವುದಕ್ಕೆ ಮೊದಲು ಎಚ್ಚರದಿಂದ ಇರಬೇಕಿದೆ.

 

 

LEAVE A REPLY

Please enter your comment!
Please enter your name here