Home Crime ಮನೆಯ ಮಾಳಿಗೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ..!

ಮನೆಯ ಮಾಳಿಗೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ..!

948
0
SHARE

ಆ ಕುಟುಂಬದ ಸದಸ್ಯರು ಜಮೀನಿನ ಕೆಲಸ ಮುಗಿಸಿ ಬಂದು ರಾತ್ರಿ ಊಟ ಮಾಡಿ ಮಕ್ಕಳೊಂದಿಗೆ ನೆಮ್ಮದಿಯಾಗಿ ನಿದ್ದೆಗೆ ಜಾರಿತ್ತು, ಇನ್ನು ಅರ್ಧ ಗಂಟೆ ಕಳೆದಿದ್ರೆ ಎಲ್ಲರೂ ಎದ್ದು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ತಿದ್ರು, ಆದ್ರೆ ಮನೆಯ ಮಾಳಿಗೆ ಕುಸಿಯುವ ರೂಪದಲ್ಲಿ ಬಂದ ಜವರಾಯ ಮೂವರು ಪುಟ್ಟ ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನ ಬಲಿ ತೆಗೆದುಕೊಂಡಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಒಂದೆಡೆ ಶವವಾಗಿ ಬಿದ್ದಿರೋ ಪುಟ್ಟ ಪುಟ್ಟ ಮಕ್ಕಳು ಹಾಗು ತಾಯಿ, ಮತ್ತೊಂದೆಡೆ ತಮ್ಮವರನ್ನ ಕಳೆದುಕೊಂಡು ರೋಧಿಸುತ್ತಿರೋ ಜನರು. ಈ ದೃಷ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ. ಅಂದಹಾಗೆ ನಿನ್ನೆ ದಿನ ಜಮೀನು ಕೆಲಸ ಮುಗಿಸಿ ಮನೆಗೆ ಬಂದ ಚಂದ್ರಶೇಖರ್, ತನ್ನ ಪತ್ನಿ ನಾಗರತ್ನ ಹಾಗು ಮಕ್ಕಳಾದ ಯಶಸ್ವಿನಿ, ತೀರ್ಥವರ್ಧನ್,ಪುಟ್ಟ ಮಗು ಕೋಮಲ ಹಾಗು ಅತ್ತಿಗೆ ಮಗಳಾದ ದೇವಿಕಾ ಜೊತೆ ರಾತ್ರಿ ಒಟ್ಟಾಗಿ ಊಟ ಮಾಡಿ ಮಲಗಿದ್ದಾರೆ.

ಆದ್ರೆ ಬೆಳಗಿನ ಜಾವ 5ಗಂಟೆ ಸುಮಾರಿಗೆ ಶಿಥಿಲಗೊಂಡಿದ್ದ ಹಳೆ ಮನೆಯ ಮಾಳಿಗೆ ಕುಸಿದ ಪರಿಣಾಮ ನಾಗರತ್ನ ಹಾಗೂ ಮೂವರು ಮಕ್ಕಳು ಮಾಳಿಗೆಯ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.ಈ ವೇಳೆ ಮಾಳಿಗೆ ಕುಸಿತದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಅಕ್ಕ ಪಕ್ಕದ ಮನೆಯವರು ಅವಶೇಷಗಳಡಿ ಸಿಲುಕಿ ಒದ್ದಾಡುತ್ತಿದ್ದ ಮನೆಯ ಯಜಮಾನ ಹಾಗು ಆತನ ಅತ್ತಿಗೆ ಮಗಳು ದೇವಿಕಾ ಎಂಬ ಬಾಲಕಿಯನ್ನು ರಕ್ಷಿಸಿ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರಿಬ್ಬರೂ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತ್ತ ಜಮೀನಿನ ಮನೆಯಲ್ಲಿ ವಾಸವಾಗಿದ್ದ ಜಯಮ್ಮ, ಸೊಸೆ ಹಾಗೂ ಮೊಮ್ಮಕ್ಕಳ ಸಾವಿನ ವಿಚಾರ ತಿಳಿದು ಕಂಗಾಲಾಗಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ಮನೆಯ ಮಾಳಿಗೆ ಕುಸಿದ ಸುದ್ದಿ ತಿಳಿದ ಚಳ್ಳಕೆರೆ ಠಾಣೆ ಪೊಲೀಸರು ಹಾಗು ತಹಶಿಲ್ದಾರ್ ಮಲ್ಲಿಕಾರ್ಜುನ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮೃತದೇಹಗಳನ್ನು ಚಳ್ಳಕೆರೆ ಶವಗಾರಕ್ಕೆ ಸಾಗಿಸಿ ಶವ ಪರೀಕ್ಷೆ ನಡೆಸಿದ್ದು, ಈ ಪ್ರಕರಣ ಪ್ರಕೃತಿ ವಿಕೋಪದಡಿ ಬರದೇ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಮುನ್ನೆಚ್ಚರಿಕೆ ವಹಿಸದೆ ಮೊದಲೇ ಶಿಥಿಲಗೊಂಡಿದ್ದ ಮಾಳಿಗೆ ಕೆಳಗೆ ಮಲಗಿದ್ದ ಪರಿಣಾಮ ಬಡ ಕುಟುಂಬದ ನಾಲ್ಕು ಅಮಾಯಕ ಜೀವಗಳು ಬಲಿಯಾಗಿವೆ. ಯಾರೂ ಊಹಿಸದೆ ನಡೆದ ದಾರುಣ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here