ಮನೆ ಬಾಡಿಗೆ ವಿಚಾರದಲ್ಲಿ ಕನ್ನಡ ಚಿತ್ರ ನಿರ್ಮಾಪಕ ರಮೇಶ್ ಜೈನ್ರನ್ನ ಹತ್ಯೆ ಮಾಡಲಾಗಿದೆ. ನಿರ್ಮಾಪಕ ರಮೇಶ್ ಜೈನ್, ಇಸ್ಲಾಂ ಪಾಷ ಎಂಬುವರಿಗೆ ಮೈಸೂರು ರಸ್ತೆಯ ಕವಿಕಾ ಲೇಔಟ್ನ ತಮ್ಮ ಮನೆಯನ್ನ ಬಾಡಿಗೆಗೆ ಕೊಟ್ಟಿದ್ದರು. ಮನೆ ಬಾಡಿಗೆ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟು ರಮೇಶ್ ಜೈನ್ರನ್ನ ಇಸ್ಲಾಂ ಪಾಷ ಹತ್ಯೆ ಮಾಡಿದ್ದಾನೆ. ಮನೆಗೆ ಬಾಡಿಗೆ ನೀಡದೇ, ಖಾಲಿ ಮಾಡದೇ ಇಸ್ಲಾಂ ಪಾಶ ಸತಾಯಿಸುತ್ತಿದ್ದ.
ನವೆಂಬರ್ 27 ರಂದು ಮನೆ ಖಾಲಿ ಮಾಡುವಂತೆ ಹೇಳಲು ರಮೇಶ್ ಜೈನ್ ಇಸ್ಲಾಂ ಇದ್ದ ಮನೆಗೆ ತೆರಳಿದ್ರು. ಈ ವೇಳೆ ರಮೇಶ್ ಜೈನ್ ಇಸ್ಲಾಂ ಪಾಷ ನಡುವೆ ಗಲಾಟೆ ನಡೆದಿದೆ. ರಮೇಶ್ ಮೇಲೆ ಇಸ್ಲಾಂ ಪಾಷ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ನಂತರ ಕೊಲೆ ಮಾಡಿ ಕೆಂಗೇರಿ ಉಪನಗರದ ಬಳಿಯ ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಮೃತದೇಹವನ್ನ ಬಿಸಾಡಿ ಹೋಗಿದ್ದಾನೆ. ನಂತರ ಎರಡು ದಿನ ಕಳೆದರೂ ರಮೇಶ್ ಜೈನ್ ಮನೆಗೆ ಬಾರದ ಹಿನ್ನಲೆಯಲ್ಲಿ ಗಾಬರಿಗೊಂಡ ಕುಟುಂಬಸ್ಥರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.ದೂರು ದಾಖಲಿಸಿಕೊಂಡ ಪೊಲೀಸರು.
ರಮೇಶ್ ಜೈನ್ ಮೊಬೈಲ್ ಲಾಸ್ಟ್ ಟವರ್ ಲೋಕೇಷನ್ ಆಧರಿಸಿ ತಪಾಸಣೆ ನಡೆಸಿದಾಗ ಕವಿಕಾ ಲೇಔಟ್ಗೆ ತೆರಳಿದ್ದರು ಅಂತಾ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಇಸ್ಲಾಂ ಪಾಷ ಮನೆಗೆ ತೆರಳುವ ವೇಳೆಗಾಗಲೇ ಆತ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ಸರೆಂಡರ್ ಆಗಿದ್ದ. ಮೃತ ರಮೇಶ್ ಜೈನ್ ನಾನಿ, ಒಂದು ಬೆಳಕಿನೆಡೆಗೆ, ಪ್ರಿಯಾ ಓ ಪ್ರಿಯಾ, ಚಿತ್ರ ನಿರ್ಮಿಸಿದ್ದಾರೆ.