Home Crime ಮನೆ ಮಾಲೀಕನ ಮುಂಜಾಗೃತೆ-ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ..! ಜೀವ ಉಳಿಸಿಕೊಳ್ಳಲು ಓಡಿಹೋದ ದರೋಡೆಕೋರರು..!

ಮನೆ ಮಾಲೀಕನ ಮುಂಜಾಗೃತೆ-ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ..! ಜೀವ ಉಳಿಸಿಕೊಳ್ಳಲು ಓಡಿಹೋದ ದರೋಡೆಕೋರರು..!

563
0
SHARE

ದರೊಡೆಕೋರರ ಗುಂಪೊಂದು ಒಂಟಿ ಮನೆಗೆ ನುಗ್ಗಿ ದರೋಡೆ ಮಾಡಲು ಮುಂದಾಗಿತ್ತು. ಆದ್ರೆ ಮನೆ ಮಾಲೀಕನ ಮುಂಜಾಗೃತೆಯಿಂದಾಗಿ ದರೊಡೆಕೋರರ ಪ್ಲಾನ್ ಪ್ಲಾಪ್ ಆಗಿದ್ದು ದರೊಡೆಕೋರರೇ ಜೀವ ಉಳಿಸಿಕೊಳ್ಳಲು ಓಡಿ ಹೋದ ಘಟನೆ ನಡೆದಿದೆ.ಹೀಗೆ ಮನೆಯ ಕಾಂಪೋಂಡ್ ಹಾರಿ ಬಂದು ಮನೆ ಬಾಗಿಲು ಮುರಿಯಲು ಯತ್ನಿಸುತ್ತಿರುವ ಮುಸುಕುದಾರಿ ದರೋಡೆಕೋರರು…

ಕೊನೆಗೆ ಜೀವ ಭಯದಿಂದ ಓಡುತ್ತಿರುವ ದೃಶ್ಯ ಕಂಡುಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತನಲ್ಲೂರು ಗ್ರಾಮದಲ್ಲಿನ ಬಿಜೆಪಿ ಮುಖಂಡ ವಿಶ್ವನಾಥ್ ರೆಡ್ಡಿ ಮನೆಯಲ್ಲಿ. ನಿನ್ನೆ ತಡರಾತ್ರಿ 2 ಗಂಟೆಯ ಸುಮಾರಿನಲ್ಲಿ ನಾಲ್ವರು ದರೋಡೆಕೋರರು ಗ್ರಾಮದ ಅಂಚಿನಲ್ಲಿರುವ ವಿಶ್ವನಾಥ್ ರೆಡ್ಡಿ ಮನೆಯ ಹಿಂಬಾಗಿಲು ಒಡೆದು ಒಳಗೆ ನುಗ್ಗಲು ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವನಾಥ್ ರೆಡ್ಡಿಗೆ ಎಚ್ಚರವಾಗಿದ್ದು ತಕ್ಷಣ ಮನೆಯಲ್ಲಿದ್ದ ಬಂದೂಕು ತೆಗೆದು ಕೊಂಡು ಕಳ್ಳರನ್ನು ಹಿಮ್ಮೆಟ್ಟಿಸಿದ್ದಾರೆ. ಬಂದೂಕು ಕಂಡ ತಕ್ಷಣ ಪ್ರಾಣ ಉಳಿಸಿಕೊಳ್ಳಲು ದರೋಡೆ ಕೋರರು ಎದ್ದುಬಿದ್ದು ಓಡಿಹೋಗಿದ್ದಾರೆ.ಇನ್ನು ಇದೇ ದರೊಡೆಕೋರರ ಗುಂಪು ಇದಕ್ಕೂ ಮೊದಲು ಇದೇ ಗ್ರಾಮದಲ್ಲಿನ ಬ್ರಹ್ಮಕುಮಾರಿ ಸಮಾಜದ ಆಶ್ರಮದ ಬಾಗಿಲು ಮುರಿದು ಆಶ್ರಮದಲ್ಲಿದ್ದ ಕೆಲವು ಬೆಳಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ನಂತರ ವಿಶ್ವನಾಥ್ ರೆಡ್ಡಿ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಮಿಳುನಾಡು ಗಡಿಗೆ ಹೊಂದಿಕೊಂಡಿದ್ದು ತಾಲೂಕಿನ ಅತ್ತಿಬೆಲೆ, ಆನೇಕಲ್ ಹಾಗೂ ಸುತ್ತಮುತ್ತ ಒಂಟಿ ಮನೆಗಳ ಮೇಲೆ ದರೋಡೆಕೋರರು ದಾಳಿ ಮಾಡಿ ಅಪಾರ ಪ್ರಮಾಣದ ಚಿನ್ನಾಭರಣ ನಗದು ಹೊತೊಯ್ದಿದ್ದಾರೆ.

ಈ ಘಟನೆಗಳು ಮಾಸುವ ಮುನ್ನವೇ ಮತ್ತೆ ಇಂತಹದೇ ಘಟನೆ ನಡೆದಿರುವುದು ತಾಲೂಕಿನ ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.ಒಟ್ಟಿನಲ್ಲಿ ಮನೆ ಮಾಲೀಕರ ಮುಂಜಾಗೃತೆಯಿಂದ ಅಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ್ದು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here