Home District ಮರಿ ಆನೆ ಸಾವನ್ನಪ್ಪಿದನ್ನ ಅರಿಯದ ತಾಯಿ ಆನೆ..! 28 ಗಂಟೆಗಳಿಂದ ಕದಲದ ಆನೆಯನ್ನು ಕಂಡು ಮೂಕವಿಸ್ಮಿತರಾದ...

ಮರಿ ಆನೆ ಸಾವನ್ನಪ್ಪಿದನ್ನ ಅರಿಯದ ತಾಯಿ ಆನೆ..! 28 ಗಂಟೆಗಳಿಂದ ಕದಲದ ಆನೆಯನ್ನು ಕಂಡು ಮೂಕವಿಸ್ಮಿತರಾದ ಸಿಬ್ಬಂದಿ..?!

427
0
SHARE

ಮನುಷ್ಯ ಮೃತಪಟ್ಟು 2 ದಿನಗಳ ಕಳೆದಿದ್ರೆ, ಈ ವೇಳೆಗಾಗಲೇ ಅಂತ್ಯಸಂಸ್ಕಾರ ಸೇರಿ ಎಲ್ಲಾ ಕ್ರಿಯಾವಿಧಾನ ಮುಗಿದು ಹೋಗುತ್ತಿತ್ತು.ಆದ್ರೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕೊತ್ತನಹಳ್ಳಿ ಬಳಿಯ ಅರಣ್ಯದಂಚಿನಲ್ಲಿ ಮರಿಯಾನೆಯೊಂದು ಕೆಸರಲ್ಲಿ ಹೂತು ಕಣ್ಬಿಟ್ಟ, ಕೆಲವೇ ಕ್ಷಣಗಳಲ್ಲಿ ಶಾಶ್ವತವಾಗಿ ಕಣ್ಮುಚ್ಚಿ 35 ಗಂಟೆ ಕಳೆದಿದ್ದರೂ, ಅಂತ್ಯಕ್ರಿಯೆ ಇರಲಿ, ಘಟನಾ ಸ್ಥಳಕ್ಕೆ ಯಾರೊಬ್ಬರೂ ಹೋಗಲಾಗಿಲ್ಲ.ಇದಕ್ಕೆ ಕಾರಣ ಸತ್ತ ಕರುಳ ಬಳ್ಳಿಗೆ ಹೆಬ್ಬಂಡೆಯಂತೆ ಕಾವಲಾಗಿ ನಿಂತಿರುವ ತಾಯಿ ಆನೆ.

ಅರಣ್ಯಾಧಿಕಾರಿಗಳು ಸಿಬ್ಬಂದಿ ಏನೆಲ್ಲಾ ಹರಸಾಹಸ ಪಟ್ರೂ ಹೆತ್ತಮ್ಮನನ್ನು ಮರಿಯಾನೆಯಿಂದ ಬೇರ್ಪಡಿಸಲಾಗಿಲ್ಲ.ಹೆತ್ತ ತಾಯಿಗೆ ಹೆಗ್ಗಣ ಮುದ್ದು ಅಂತಾ ಗಾದೆ ಇದೆ,. ಹೌದು ಮಗು ಹೇಗೆ ಇರಲಿ ಹಡೆದ ತಾಯಿಗೆ ಅದೇ ಸರ್ವಸ್ವವಾಗಿರುತ್ತದೆ. ಅದೂ ಎಲ್ಲಾದ್ರೂ ಚಿಕ್ಕ ವಯಸ್ಸಿನಲ್ಲೇ ತಮ್ಮ ಮಗುಗೆ ಏನಾದ್ರೂ ಆದ್ರೆ ಆ ತಾಯಿ ಪಡುವ ನೋವು ಅಷ್ಟಿಷ್ಟಲ್ಲ, ಮನುಷ್ಯರಾದ್ರೆ ಅಳುವ ಮೂಲಕ ತಮ್ಮ ನೋವನ್ನು ಹೊರ ಹಾಕಿಕೊಳ್ಳುತ್ತಾರೆ,

ಅದೇ ಪ್ರಾಣಿಗಳಾದ್ರೆ ತಮ್ಮ ನೋವನ್ನು ಹೇಗೆ ತೋಡಿಕೊಳ್ಳಬೇಕೋ ಗೊತ್ತಿಲ್ಲ, ಅಂತಹದ್ದೇ ಮನ ಕಲುಕುವ ಘಟನೆ ನಡೆದಿದೆ.ಹೌದು ಸಕಲೇಶಪುರ ತಾಲೂಕು ಕೊತ್ತನಹಳ್ಳಿ ಬಳಿಯ ಗದ್ದೆಯಲ್ಲಿ ಬುಧವಾರ ಬೆಳಗ್ಗೆ ಆನೆಯೊಂದು ಮರಿಗೆ ಜನ್ಮ ನೀಡಿತ್ತು. ಆದ್ರೆ ಗದ್ದೆಯಲ್ಲೇ ಪ್ರಸವವಾದ್ದರಿಂದ ಕೆಲವೇ ಕ್ಷಣಗಳಲ್ಲಿ ಏನೂ ಅರಿಯದ ಮರಿಯಾನೆ ಕೆಸರಲ್ಲಿ ಹೂತು ಜೀವ ಕಳೆದುಕೊಂಡಿದೆ.

ಆದರೆ, ಹೆತ್ತ ತಾಯಿಗೆ ತನ್ನ ಕರುಳ ಹಂಚಿಕೊಂಡು ಜನಿಸಿದ ಮರಿಯಾನೆ ಇನ್ನೆಂದೂ ನನ್ನ ಅಮ್ಮ ಕರೆಯುವುದಿಲ್ಲ ಎಂಬ ಕಟು ಸತ್ಯ ಗೊತ್ತಿದ್ದರೂ, ಅದನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಪಡುತ್ತಿರುವ ಕಷ್ಟ, ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ.ದುರಂತ ನಡೆದ ಬರೋಬ್ಬರಿ 35 ಗಂಟೆ ಕಳೆದಿದ್ದರೂ, ತನ್ನ ಕರುಳ ಕುಡಿ ಇರುವ ಸ್ಥಳದಿಂದ ಹೆತ್ತಾನೆ ಕದಲಿಲ್ಲ. ಬದಲಾಗಿ ಸುತ್ತಲೂ ಕಾವಲಾಗಿ, ನನ್ನ ಕಂದ ಈಗ ಏಳುತ್ತದೆ.

ಇನ್ನೊಂದು ಕ್ಷಣಕ್ಕೆ ಎದ್ದು ನಿಲ್ಲುತ್ತದೆ ಎಂದು ಕಣ್ಣೀರ ಕಂಗಳಿಂದ ಕಾಯುತ್ತಲೇ ಇದೆ. ಸತ್ತ ಮರಿಯನ್ನು ಸೊಂಡಿಲಿಂದ ತಿವಿದು, ಕಂದಾ ಏಳು ಎಂದು ಹೆಣ್ಣಾನೆ ಹಲುಬುವ ದೃಶ್ಯ ಎಂಥವರ ಕಣ್ಣಾಲಿನಗಳನ್ನು ತೇವವಾಗಿಸದೇ ಇರದು. ಆನೆಯನ್ನು ಬೇರ್ಪಡಿಸಿ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯಾಧಿಕಾರಿಗಳು ಜೆಸಿಬಿ ಯಂತ್ರ, ಮೆಣಸಿನಕಾಯಿ ಹೊಗೆ ಹಾಗೂ ಬೆಂಕಿ ಹಚ್ಚಿ-ಪಟಾಕಿ ಸಿಡಿಸಿ ಏನೆಲ್ಲಾ ಪ್ರಯತ್ನ ಮಾಡಿದ್ರೂ ಅಲ್ಲಿಂದ ತೆರಳದೇ ಪರಿತಪಿಸುತ್ತಿದೆ.

ಬೇರೆ ಸಂದರ್ಭ ಆಗಿದ್ದರೆ ನಿಷ್ಠೂರವಾಗಿ ಗಜಪಡೆಯನ್ನು ಕಾಡಿಗೆ ಅಟ್ಟಿ, ಸತ್ತ ಮರಿಯಾನೆಯ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಸಿ ಬಿಡಬಹುದಿತ್ತು. ಆದರೆ ಇದು ಸೂತಕದ ಸನ್ನಿವೇಶವಾಗಿರುವುದರಿಂದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯರಾದಿಗಾಗಿ ಎಲ್ಲರೂ ಮೂಕ ಪ್ರಾಣಿಯ ಅರಣ್ಯರೋಧನದ ಮುಂದೆ ಸುಮ್ಮನೇ ಮೌನವಾಗಿ ನಿಂತಿದ್ದಾರೆ.

LEAVE A REPLY

Please enter your comment!
Please enter your name here