Home District ಮರೆಯಾಯ್ತು ದಶಕಗಳ ದ್ವೇಷ..ಅರಳಿತು ಬದ್ಧವೈರಿಗಳ ಸ್ನೇಹ..ಅಂದು ವಾಲಿ-ಸುಗ್ರೀವ, ಇಂದು ರಾಮ ಲಕ್ಷ್ಮಣರಾದ ಹೆಚ್ಡಿಕೆ-ಡಿಕೆಶಿ, ಭಗಂಡೇಶ್ವರನ ಸನ್ನಿಧಿಯಲ್ಲಿ...

ಮರೆಯಾಯ್ತು ದಶಕಗಳ ದ್ವೇಷ..ಅರಳಿತು ಬದ್ಧವೈರಿಗಳ ಸ್ನೇಹ..ಅಂದು ವಾಲಿ-ಸುಗ್ರೀವ, ಇಂದು ರಾಮ ಲಕ್ಷ್ಮಣರಾದ ಹೆಚ್ಡಿಕೆ-ಡಿಕೆಶಿ, ಭಗಂಡೇಶ್ವರನ ಸನ್ನಿಧಿಯಲ್ಲಿ ಒಟ್ಟಾಗಿ ಪೂಜೆ ಸಲ್ಲಿಸಿದ ದಿಗ್ಗಜರು.

622
0
SHARE

ನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೊಡಗು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ವಿವಿಧ ಜಲಾಶಯಗಳಿಗೆ ತೆರಳಿ ಬಾಗಿನ ಅರ್ಪಿಸುತ್ತಿದ್ದಾರೆ. ಇನ್ನು ಎರಡು ದಿನಗಳ ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದ ಕುಮಾರಸ್ವಾಮಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ರು.

ಪತ್ನಿ ಸಹಿತರಾಗಿ ದೇವಾಲಯಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಪೂಜಾಕೈಂಕರ್ಯಗಳನ್ನ ನೆರವೇರಿಸಿದ್ರು. ಇನ್ನು ಒಂದು ಕಾಲದಲ್ಲಿ ಬದ್ಧ ವೈರಿಯಂತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಮ-ಲಕ್ಷ್ಮಣರಂತೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಅದೊಂದು ಕಾಲದಲ್ಲಿ ಅವರಿಬ್ರು ಹಾವು ಮುಂಗೂಸಿಗಂತಿದ್ರು.. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗುತ್ತಲೇ ಇರಲಿಲ್ಲ. ಬದ್ಧ ವೈರಿಗಳಂತೆ ಕಾಣಿಸಿಕೊಳ್ತಿದ್ದ ಅವರಿಬ್ಬರು ಈಗ ಎಲ್ಲಿ ಹೋದ್ರೂ ಜೊತೆ-ಜೊತೆಯಲ್ಲೇ ಕಾಣಿಸಿಕೊಳ್ತಾರೆ. ಹೌದು ನಾವ್ ಹೇಳ್ತಿರೋದು ಸಿ.ಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಬಗ್ಗೆನೇ.. ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಪಕ್ಷಗಳ ಇತರರು ಹೇಗಿದ್ದಾರೋ ಗೊತ್ತಿಲ್ಲ ಆದ್ರೆ ಹೆಚ್‍ಡಿಕೆ ಮತ್ತು ಡಿಕೆಶಿ ಮಾತ್ರ ಪಕ್ಕಾ ದೋಸ್ತಿಗಳಾಗಿದ್ದಾರೆ.

ಎಲ್ಲೋದ್ರೂ ಜೊತೆಯಲ್ಲೇ ಕಾಣಿಸಿಕೊಳ್ತಾರೆ. ಇದಕ್ಕೊಂದು ಉದಾಹರಣೆ ಇಂದು ತಲಕಾವೇರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ. ನಾಡಿನಲ್ಲಿ ಉತ್ತಮ ಮಳೆಯಾಗತ್ತಿರುವ ಹಿನ್ನೆಲೆ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ದಂಪತಿಗೆ ಡಿ.ಕೆ ಶಿವಕುಮಾರ್ ಸಾಥ್ ನೀಡೋ ಮೂಲಕ ಗಮನ ಸೆಳೆದರು.

ಇನ್ನು ಬರೋಬ್ಬರಿ 19 ವರ್ಷಗಳ ಬಳಿಕ ಸಿ.ಎಂ ಒಬ್ರು ತಲಕಾವೇರಿಗೆ ಬಂದು ಪೂಜೆಯನ್ನ ಸಲ್ಲಿಸಿದ್ದಾರೆ. ಜೆ.ಹೆಚ್ ಪಟೇಲರ ನಂತರ ಕುಮಾರಸ್ವಾಮಿ ಇಲ್ಲಿ ಪೂಜೆ ಸಲ್ಲಿಸಿದ್ದಾರೆ. ಜೆ.ಹೆಚ್ ಪಟೇಲರು ಇಲ್ಲಿ ಪೂಜೆ ಸಲ್ಲಿಸಿದ ನಂತರ ಅಧಿಕಾರ ಕಳೆದುಕೊಂಡಿದ್ರು ಅನ್ನೋ ಮಾತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ದೇವರು ಕೊಟ್ಟಿರೋ ಅಧಿಕಾರವನ್ನ ದೇವರೇ ಕಾಪಾಡುತ್ತಾನೆ ಎಂದಿದ್ದಾರೆ.

ಹಲವು ವರ್ಷಗಳ ನಂತರ ಕಾವೇರಿ ಮಾತೆಯ ಅನುಗ್ರಹದಿಂದ ಕಾವೇರಿ ಭಾಗದ 4 ಜಲಾಶಯಗಳು ಭರ್ತಿಯಾಗಿವೆ. ಈ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಸಮಸ್ಯೆಗೆ ಕಾವೇರಿ ತಾಯಿಯೇ ಪರಿಹಾರ ಕೊಟ್ಟಿದ್ದಾಳೆ. ನ್ಯಾಯಾಲಯದ ತೀರ್ಪಿಗಿಂತ ದೇವರ ತೀರ್ಪು ಸಮಾಧಾನಕರವಾದದ್ದು ಅಂತ ಸಿ.ಎಂ ಹೇಳಿದ್ದಾರೆ.

LEAVE A REPLY

Please enter your comment!
Please enter your name here